ಹಾಲು ಮಾರುವವನ ಪ್ಲಾನ್ ನೋಡಿ ಶಾಕ್ ಆದ ಸೋಷಿಯಲ್ ಮೀಡಿಯಾಗಳು.!

News
Advertisements

ಮದ್ದಿಲ್ಲದ ಮಹಾಮಾರಿ ಕೊರೋನಾ ಹರಡುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಆಯ್ದುಕೊಳ್ಳಿ, ಲಾಕ್ ಡೌನ್ ನಿಯಮಗಳನ್ನ ಪಾಲನೆ ಮಾಡಿ, ಖಡ್ಡಾಯವಾಗಿ ಮಾಸ್ಕ್ ಉಪಯೋಗ ಮಾಡಿ ಹೀಗೆ ಸರ್ಕಾರಗಳು, ಸಂಘ ಸಂಸ್ಥೆಗಳು ಏನೇ ಬಾಯಿ ಬಡಿದುಕೊಂಡರೂ ಅನೇಕರು ತಮಗೇನು ಸಂಬಂಧ ಇಲ್ಲ ಎನ್ನುವಂತೆ ಇರುತ್ತಾರೆ. ಆದರೆ ಕೆಲವರು ಮಾತ್ರ ಕಾಳಜಿವಹಿಸಿ ಎಷ್ಟೋ ಜನಕ್ಕೆ ಸೂರ್ತಿಯಾಗುತ್ತಾರೆ.

Advertisements

ಹೌದು, ಇಲ್ಲೊಬ್ಬ ವ್ಯಕ್ತಿ ಮಾಡಿರುವ ಉಪಾಯವೇ ಇದಕ್ಕೆ ಸಾಕ್ಷಿ. ಸಾಮಾಜಿಕ ಅಂತರ ಕಾಯ್ದುಕೊಂಡು ಹಾಳುಮಾರುತ್ತಿರುವವನ ಪ್ಲಾನ್ ನೋಡಿ ನೆಟ್ಟಿಗರು ಗ್ರೇಟ್ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಫೋಟೋ ಬರೀ ವೈರಲ್ ಆಗಿದೆ.

ಹಾಲು ಮಾರಾಟಗಾರನ ಮಾಸ್ಟರ್ ಪ್ಲಾನ್ ಫೋಟೋವನ್ನ IAS ಅಧಿಕಾರಿಯಾಗಿರುವ ನಿತಿನ್ ಸಂಗ್ವಾನ್ ಎನ್ನುವವರು ಹಂಚಿಕೊಂಡಿದ್ದು, ಪೋಟೋದಲ್ಲಿರುವಂತೆ ನಿಯಮಗಳನ್ನ ಪಾಲನೆ ಮಾಡಿರುವ ಹಾಲು ಮಾರಾಟಗಾರ ಮತ್ತು ಹಾಲು ತೆಗೆದುಕೊಳ್ಳುವ ವ್ಯಕ್ತಿಗಳಿಬ್ಬರು ಮುಖಕ್ಕೆ ಮಾಸ್ಕ್ ಧರಿಸಿದ್ದಾರೆ. ಇನ್ನು ಹಾಲು ಹಾಕುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆಗುವುದಿಲ್ಲ ಎಂದು ಹಾಲು ಮಾರಾಟಗಾರ ತನ್ನ ಗಡಿಗೆ ಪೈಪ್ ಒಂದನ್ನ ಅಳವಡಿಸಿ ಅದಕ್ಕೆ ಲಾಳಿಗೆ ಕನೆಕ್ಟ್ ಮಾಡಿದ್ದು ಅದ್ರಿಂದ ಹಾಲನ್ನ ಮನೆ ಮನೆಗೆ ತಲುಪಿಸುತ್ತಿದ್ದಾನೆ.

ಇದರಿಂದ ಸಾಮಾಜಿಕ ಅಂತರ ಕೂಡ ಪಾಲನೆ ಮಾಡಿದಂತಾಗುತ್ತದೆ. ಒಟ್ಟಿನಲ್ಲಿ ಹಾಲುಮರಾಟಗಾರನ ಇದೀಗ ಸೋಷಿಯಲ್ ಮಿಡಿಯಾಗಳ್ಲಲಿ ಸಖತ್ ವೈರಲ್ ಆಗಿದೆ. ಇದಾರ ಬಗ್ಗೆ ನಿಮ್ಮ ಅನಿಸಿಕೆ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ