ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಕುರಿತು ದೇಶದ ಜನರನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಇಂದು 10 ಗಂಟೆಗೆ 25 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಮೊದಲೇ ಘೋಷಣೆ ಮಾಡಿದ್ದ ೨೧ ದಿನಗಳ ಲಾಕ್ ಡೌನ್ ಇಂದು ಮುಗಿಯಲಿದ್ದು, ಪ್ರಧಾನಿ ಮೋದಿಯವರು ಮತ್ತೆ ಏನನ್ನ ಹೇಳಲಿದ್ದಾರೆ ಎಂದು ದೇಶದ ಜನರು ಕುತೂಹಲದಿಂದ ಕಾಯುತ್ತಿದ್ದರು.

ಈಗಾಗಲೇ ಮಾಡಿರುವ ಲಾಕ್ ಡೌನ್ ಪ್ರಕ್ರಿಯೆಯಿಂದ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಕೊರೋನಾ ಹೋರಾಟದ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸುಧೀರ್ಘವಾದ ಚರ್ಚೆ ನಡೆಸಿದ್ದೇವೆ. ಎಲ್ಲಾ ರಾಜ್ಯಗಳ ಸಿಎಂ ಮತ್ತು ನಾಗರಿಕರು ಲಾಕ್ ಡೌನ್ ಮುಂದುವರಿಸುವ ಕುರಿತು ಸಲಹೆ ನೀಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಕೂಡ ಹೇಳಿದ್ದಾರೆ. ಆದರೆ ನಮಗೆ ಆರ್ಥಿಕತೆಗಿಂತ ದೇಶದ ಜನರ ಆರೋಗ್ಯ ಮುಖ್ಯ. ಆ ಹಿನ್ನಲೆಯಲ್ಲಿ ಇನ್ನು ಮೂರೂ ವಾರಗಳ ಕಾಲ, ಅಂದರೆ ಮೇ ೩ನೇ ತಾರೀಖಿನವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಮೋದಿಯವರು ಇಂದಿನ ಬಹುಮುಖ್ಯ ಭಾಷಣದಲ್ಲಿ ಹೇಳಿದ್ದಾರೆ. ಇನ್ನು ಈ ಹಿಂದೆ ಲಾಕ್ ಡೌನ್ ನಿಯಮಗಳು ಹೇಗಿದ್ದವೋ ಹಾಗೆ ಇರಲಿದ್ದು, ಮನೆಯಲ್ಲೇ ಇದ್ದು ಕೊರೋನಾ ವಿರುದ್ಧ ಹೋರಾಡಿ ಎಂದು ಮೋದಿಯವರ ಹೇಳಿದ್ದಾರೆ.

ಇನ್ನು ಹಾಟ್ ಸ್ಪಾಟ್ ಪ್ರದೇಶಗಳು ಎಂದು ಗುರುತಿಸಲಾದ ಸ್ಥಳಗಳಲ್ಲಿ ಮೊದಲಿಗಿಂತ ನಿಯಮಗಳು ಕಠಿಣವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಒಂದು ವಾರ ಅಂದರೆ ಏಪ್ರಿಲ್ ೨೦ರವರೆಗೆ ದೇಶದಾದ್ಯಂತ ಡಬಲ್ ಲಾಕ್ ಡೌನ್ ಇದ್ದು ಕಠಿಣ ನಿಯಮಗಳನ್ನ ಜಾರಿ ಮಾಡಲಾಗುತ್ತೆ ಎಂದು ಹೇಳಿದ್ದಾರೆ. ಇನ್ನು ಕೊರೋನಾ ಸೋಂಕಿತರು ಕಡಿಮೆ ಆದ್ರೆ ಮಾತ್ರ ಏಪ್ರಿಲ್ ೨೦ರ ನಂತರ ಕಂಡಿಷನ್ಸ್ ಮೇಲೆ ವಿನಾಯಿತಿ ನೀಡಲಾಗುತ್ತೆ ಎಂದು ಹೇಳಲಾಗಿದೆ. ಇನ್ನು ಲಾಕ್ ಡೌನ್ ನಿಯಮಗಳನ್ನ ಉಲ್ಲಂಘಿಸಿದಲ್ಲಿ ಅಥ್ವಾ ಕೊರೋನಾ ಸೋಂಕಿತರು ಹೆಚ್ಚಾದಲ್ಲಿ ವಿನಾಯತಿ ನೀಡಿದ ಎಲ್ಲಾ ಅನುಮತಿಗಳನ್ನ ಹಿಂತೆಗೆದುಕೊಳ್ಳಲಾಗುತ್ತೆ ಎಂದು ಹೇಳಲಾಗಿದೆ.

ಇನ್ನು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಯೋಚನೆ ಮಾಡದೆ, ದೇಶದ ಜನರ ಆರೋಗ್ಯವೇ ನಮಗೆ ತುಂಬಾ ಮುಖ್ಯ ಎಂದು ಪ್ರಧಾನಿ ಮೋದಿಯವರು ಲಾಕ್ ಡೌನ್ ಮುಂದುವರಿಸಿದ್ದಾರೆ. ನಾವೂ ಕೂಡ ಸರಕಾರದ ನಿಯಮಗಳನ್ನ ಪಾಲಿಅಂತರ ಸೋಣ. ಸಾಮಾಜಿಕ ಅಂತರ ಕಾಯ್ದು ಕೊಳ್ಳೋಣ. ಮನೆಯಲ್ಲೇ ಇದ್ದು ಕೊರೋನಾ ಓಡಿಸೋಣ..