ಬೆಂಗಳೂರಿನ ಪ್ರಿಯತಮನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ನಟಿ..ಅಸಲಿಗೆ ಹುಡುಗ ಯಾರು ಗೊತ್ತಾ.?

Advertisements

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಗೊಂಡಿತ್ತು. ಇನ್ನು ಕೆಜಿಎಫ್ ನ ಹಿಂದಿ ಡಬ್ಬಿಂಗ್ ನ ಹಾಡೊಂದರಲ್ಲಿ ನಟಿ ಮೌನಿ ರಾಯ್ ಹೆಜ್ಜೆ ಹಾಕುವ ಮೂಲಕ ಮಿಂಚಿದ್ದರು. ಇ

[widget id=”custom_html-4″]

ನ್ನು ಈಗ ನಟಿ ಮೌನಿ ರಾಯ್ ಗುರುವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿದ್ದ ಮಲಯಾಳಿ ಮೂಲದ ಹುಡುಗನೊಂದಿಗೆ ಗೋವಾದಲ್ಲಿ ಮೌನಿ ರಾಯ್ ಸಪ್ತಪದಿ ತುಳಿದಿದ್ದಾರೆ. ಹೌದು, ಮೌನಿ ರಾಯ್ ಮತ್ತು ವರ ಸೂರಜ್ ನಂಬಿಯಾರ್ ಒಬ್ಬರೊನ್ನೊಬ್ಬರನ್ನ ಪ್ರೀತಿಸುತ್ತಿದ್ದರು.

[widget id=”custom_html-4″]

[widget id=”custom_html-4″]

Advertisements

[widget id=”custom_html-4″]

ಇನ್ನು ಗೋವಾದಲ್ಲಿ ನಡೆದ ಈ ಮದುವೆಯಲ್ಲಿ ನಟಿ ಮೌನಿ ರಾಯ್ ಶ್ವೇತ ವರ್ಣದ ಸೀರೆ ಉಟ್ಟಿದ್ದು, ದಕ್ಷಿಣ ಭಾರತದ ಶೈಲಿಯ ಆಭರಣಗಳನ್ನ ತೊಟ್ಟಿದ್ದು, ಮದ್ವೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಇನ್ನು ವರ ಸೂರಜ್ ನಂಬಿಯಾರ್ ಬಿಳಿ ಬಣ್ಣದ ಧೋತಿ ಜೊತೆಗೆ, ರೇಷ್ಮೆ ಕುರ್ತಾ ಧರಿಸಿದ್ದಾರೆ. ಇನ್ನು ಬೆಂಗಾಳಿ ಮತ್ತು ಮಲಯಾಳಿ ಸಂಪ್ರದಾಯದ ಪದ್ದತಿಯಲ್ಲಿ ನಡೆದ ಈ ಮದುವೆಗೆ ಕುಟುಂಬದವರು, ಆಪ್ತರು ಹಾಗೂ ಸಿನಿಮಾ ರಂಗದ ಸೆಲೆಬ್ರೆಟಿಗಳು ಭಾಗವಹಿಸಿದ್ದು, ನವ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ. ಇನ್ನು ವರ ಸೂರಜ್ ನಂಬಿಯಾರ್ ಬಗ್ಗೆ ಹೇಳಬೇಕಂದರೆ,

[widget id=”custom_html-4″]

ಬೆಂಗಳೂರಿನಲ್ಲಿ ಹುಟ್ಟಿದ ಸೂರಜ್ ನಂಬಿಯಾರ್ ಮೂಲತಃ ಮಲಯಾಳಿ ಕುಟುಂಬದವರು. ಇಂಜಿನಿಯರಿಂಗ್ ಪದವಿ ಮಾಡಿರುವ ಸೂರಜ್ ಶಾಲಾ ಕಾಲೇಜು ವ್ಯಾಸಂಗ ಮಾಡಿದ್ದು ಬೆಂಗಳೂರಿನಲ್ಲೇ. ದುಬೈನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿರುವ ಸೂರಜ್ ಉದ್ಯಮಿಯಾಗಿದ್ದಾರೆ. ೨೦೧೯ರ ಹೊಸವರ್ಷದಲ್ಲಿ ಮೊದಲ ಬಾರಿಗೆ ನಟಿ ಮೌನಿರಾಯ್ ಅವರನ್ನ ಭೇಟಿಯಾಗಿದ್ದ ಸೂರಜ್ ನಂಬಿಯಾರ್, ಮೌನಿರಾಯ್ ಜೊತೆ ಸ್ನೇಹವಾಗಿ, ಬಳಿಕ ಪ್ರೀತಿಯಾಗಿ ಈಗ ಮದ್ವೆಯಾಗಿದ್ದಾರೆ.

[widget id=”custom_html-4″]