ಸಕಲಕಲಾವಲ್ಲಭ ನಟ ಮುಖ್ಯಮಂತ್ರಿ ಚಂದ್ರುಗೆ ಮುಖ್ಯಮಂತ್ರಿ ಅನ್ನೋ ಹೆಸರು ಬಂದಿದ್ದೇಗೆ ಗೊತ್ತಾ? ಮಗ ಕೂಡ ಫೇಮಸ್ ನಟ !

Cinema Uncategorized

ಮುಖ್ಯಮಂತ್ರಿ ಅಂದಾಕ್ಷಣ ನಿಮಗೆ ತಟ್ ಅಂತ ನೆನಪಿಗೆ ಬರೋದು ನಮ್ಮ ಸಿಎಂ ಯಡಿಯೂರಪ್ಪನವರು. ಆದ್ರೀಗ, ನಾವೇಳ್ತಿರೋ ಇವರು ಮುಖ್ಯಮಂತ್ರಿ ಅಲ್ಲ. ಆದ್ರೂ ಇವರು ಮುಖ್ಯಮಂತ್ರಿನೇ..ಅಲ್ಲ ಮುಖ್ಯಮಂತ್ರಿ ಅಂತಿರೀ..ಆದ್ರೆ ಮುಖ್ಯಮಂತ್ರಿ ಅಲ್ಲ ಅಂತನೂ ಅಂದು ತಲೆಲೀ ಹುಳ ಬಿಡ್ತಿದೀರಾ..ಏನ್ ಸಮಾಚಾರ ಅಂತ ಕನ್ ಫ್ಯೂಸ್ ಆದ್ರಾ..ವೇಟ್..ವೇಟ್ ಅದನ್ನೂ ಹೇಳ್ತಿವಿ ಕೇಳಿ..ಮುಖ್ಯಮಂತ್ರಿ ಅಂತಲೇ ಫೇಮಸ್ ಆಗಿರೋ ಕನ್ನಡ ಚಿತ್ರರಂಗದ ಹಿರಿಯ ನಟ, ಕಾಮೆಡಿಯನ್, ಕನ್ನಡ ಪರ ಹೋರಾಟಗಾರ, ರಾಜಕಾರಣಿ, ಮುಖ್ಯಮಂತ್ರಿ ಚಂದ್ರು ಬಗ್ಗೆ ನಿಮಗೆಷ್ಟು ಗೊತ್ತು..ನಾವೆಳ್ತಿವಿ ನೋಡಿ..

ಮುಖ್ಯಮಂತ್ರಿ ಚಂದ್ರು ಅಂದ್ರೆ ಇವರೆಲ್ಲೋ ಮೊದಲು ನಮ್ಮ ರಾಜ್ಯದ ಸಿಎಂ ಆಗಿರಬೇಕು.‌ ಅದಕ್ಕಾಗಿ ಇವರ ಹೆಸರ ಹಿಂದೆ ಮುಖ್ಯಮಂತ್ರಿ ಅಂತ ಇದೆ ಅನ್ಕೊಂಡ್ರಾ..ನಿಮ್ಮ ಊಹೆ ರಾಂಗ್.ಮುಖ್ಯಮಂತ್ರಿ ಚಂದ್ರು ಅಂತ ಹೆಸರು ಬರಲು ಅದಕ್ಕೊಂದು ದೊಡ್ಡ ಇತಿಹಾಸ ಇದೆ..ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಚಿತ್ರರಂಗದ ನಟರು ಮಾತ್ರವಲ್ಲ..ಹಿರಿಯ ರಂಗಭೂಮಿ ಕಲಾವಿದರು ಸಹ ಇವರು. ನಾಟಕಗಳಿಂದಲೇ ಹೆಚ್ಚು ಫೇಮಸ್ ಆಗಿರೋ ಮುಖ್ಯಮಂತ್ರಿ ಚಂದ್ರು ಅವರು, ಕಲಾಗಂಗೋತ್ರಿ ತಂಡದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ್ದರಿಂದ ಇವರಿಗೆ ಮುಖ್ಯಮಂತ್ರಿ ಅಂತ ಬಿರುದು ಬಂದಿದೆ. ಕಳೆದ 40 ವರ್ಷಗಳಿಂದ ಹಲವು ನಾಟಕ ಮತ್ತು ಸಿನಿಮಾಗಳಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿಕೊಂಡು ಬಂದಿರೋ ಇವರು, ಪೋಷಕ ನಟನಾಗಿ, ಕಾಮೆಡಿಯನ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಚಕ್ರವ್ಯೂಹ ಸಿನಿಮಾ. 1983 ರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನಟನೆಯ ಫೇಮಸ್ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಈ ಸಿನಿಮಾದಲ್ಲೇ ಮುಖ್ಯಮಂತ್ರಿ ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮುಖ್ಯಮಂತ್ರಿ ಚಂದ್ರು ಅವರು ಪಾದಾರ್ಪಣೆ ಮಾಡಿದ್ರು. ಬರೋಬ್ಬರಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ‌ ಮಿಂಚಿರೋ ಮುಖ್ಯಮಂತ್ರಿ ಚಂದ್ರು ಅವರು, ಕನ್ನಡಪರ ಹೋರಾಟಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಜನಪ್ರಿಯರಾಗಿದ್ದಾರೆ. ಇನ್ನ ಮುಖ್ಯಮಂತ್ರಿ ಚಂದ್ರು ಅವರ ಬಾಲ್ಯವನ್ನ ನೋಡುವುದಾದ್ರೆ, ಇವರದ್ದು ಮೂಲತಃ ರೈತ ಕುಟುಂಬ. 1953 ರಲ್ಲಿ ಜನಿಸಿರುವ ಮುಖ್ಯಮಂತ್ರಿ ಚಂದ್ರು ಅವರು, ಬೆಂಗಳೂರಿನ ಹೊರವಲಯ ನೆಲಮಂಗಲದ ಹೊನ್ನಸಂದ್ರದ ನಿವಾಸಿ ಆಗಿದ್ದಾರೆ. ಅದಲ್ದೇ ಕಲ್ಪತರುನಾಡು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ. ನಿಮಗಿದು ಗೊತ್ತೆ? ಕನ್ನಡ ಚಿತ್ರರಂಗದಲ್ಲಿ ನಟನಾಗಿರುವುದಕ್ಕಿಂತ ಮೊದಲು ಮುಖ್ಯಮಂತ್ರಿ ಚಂದ್ರು ಅವರು ಕೆಲಸ ಮಾಡ್ತಿದ್ದು ಗುಮಸ್ತನಾಗಿ. ಅದು ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ..

ಇನ್ನು ಮುಖ್ಯಮಂತ್ರಿ ಚಂದ್ರು ಅವರ ಮುದ್ದಾದ ಕುಟುಂಬದ ಪರಿಚಯ ನೋಡೋದಾದ್ರೆ, ಪದ್ಮಾ ಎಂಬುವವರನ್ನ ವಿವಾಹವಾಗಿರುವ ಇವರಿಗೆ, ಇಬ್ಬರು ವಾರಸ್ದಾರರಿದ್ದಾರೆ. ಪ್ರಥಮ ಪುತ್ರನ ಹೆಸರು ಭರತ್ ಚಂದ್ರು ಮತ್ತು ದ್ವಿತೀಯ ಪುತ್ರನ ಹೆಸರು ಶರತ್ ಚಂದ್ರು. ಮೊದಲ ಮಗ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಾರೆ. ಎರಡನೇ ಮಗ ಶರತ್ ಚಂದ್ರು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ರನ್ನ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ದಿ ವಿಲನ್ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನೊಂದು ಖುಷಿಯ ವಿಚಾರವೇನೆಂದ್ರೆ, ಮುಖ್ಯ ಮಂತ್ರಿ ಚಂದ್ರು ಅವರ ಎರಡನೇ ಮಗ ಶರತ್ ಚಂದ್ರು ಅವರು, ಹೀರೋ ಆಗಿಯೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಹುಡುಗಿಯರ ಹೃದಯ ಕದಿಯಲು ಮುಂದಾಗಿದ್ದಾರೆ. ನೋಡಿದ್ರಲಾ, ವೀಕ್ಷಕರೇ, ಖಳನಾಯಕ, ರಾಜಕಾರಣಿ, ಮುಖ್ಯಮಂತ್ರಿ ಚಂದ್ರು ಅವರ ಹಿನ್ನೆಲೆಯನ್ನ. ಸ್ನೇಹಿತರೇ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ನಟಿಸಿರುವ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದನ್ನ ಇಲ್ಲಿ ಕಾಮೆಂಟ್ ಮಾಡಿ ತಿಳಿಸಿ.