ವೈರಲ್ ವಿಡಿಯೋ-ನೋಡ ನೋಡುತ್ತಿದ್ದಂತೆ ಪಾರ್ಕ್ ಮಾಡಿದ್ದ ಕಾರ್ ನ್ನ ನುಂಗಿದ ಭೂಮಿ ! ಬಳಿಕ ಆಗಿದ್ದೇನು ಗೊತ್ತಾ ?

Advertisements

ಸ್ನೇಹಿತರೇ, ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರ್ ಅಥ್ವಾ ಬೈಕ್ ನಿಲ್ಲಿಸಿದ್ದ ಜಾಗದಲ್ಲೇ ಭೂಮಿ ನುಂಗಿಬಿಟ್ಟರೆ ಹೇಗಾಗಬೇಡ ಹೇಳಿ..ಹೌದು, ಇದೆ ತರಹದ ಘಟನೆ ಮುಂಬೈನ ಘಾಟಕೋಪರ ಪಶ್ಚಿಮದಲ್ಲಿ ನಡೆದಿದೆ. ನೋಡ ನೋಡುತ್ತಿದ್ದಂತೆ ಪಾರ್ಕ್ ಮಾಡಿದ ಜಾಗದಲ್ಲೇ ಕಾರ್ ನ್ನ ಸಿಂಕ್ ಹೋಲ್ ನುಂಗಿ ಹಾಕಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂಬೈನ ಅಪಾರ್ಟ್ ಮೆಂಟ್ ವೊಂದರ ಬಳಿ ಈ ಘಟನೆ ನಡೆದಿದೆ. ಹಾಗಾದ್ರೆ ಅಪಾರ್ಟ್ ಮುಂದೆ ಪಾರ್ಕ್ ಮಾಡಿದ್ದ ಕಾರ್ ನ್ನ ಭೂಮಿ ನುಂಗಿದ್ದೆಗೆ ಗೊತ್ತಾ ಅನ್ನೋದನ್ನ ಮುಂದೆ ನೋಡೋಣ ಬನ್ನಿ..ಕಾರ್ ಮುಳುಗಿದ್ದೆಗೆ ಎಂಬುದನ್ನ ಕೆಳಗಡೆ ಇರೋ ಈ ವಿಡಿಯೋದಲ್ಲಿ ನೋಡಿ..

[widget id=”custom_html-4″]

ಕೆಲ ವರ್ಷಗಳ ಹಿಂದಷ್ಟೇ ಆ ಅಪಾರ್ಟ್ ಮುಂದೆ ಒಂದು ಬಾವಿ ಇದ್ದು ಅದನ್ನ ಸಿಮೆಂಟ್ ಮುಚ್ಚಲಾಗಿತ್ತು. ಬಳಿಕ ಅಪಾರ್ಟ್ ಮೆಂಟ್ ನಲ್ಲಿದ್ದ ಜನರು ಅದೇ ಜಗದಲ್ಲಿ ತಮ್ಮ ವಾಹನಗಳನ್ನ ಪಾರ್ಕ್ ಮಾಡುತ್ತಿದ್ದರು. ಆದರೆ ಈಗ ಕೆಲ ದಿನಗಳಿಂದ ಮುಂಬೈ ಮಹಾನಗರದಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಇದೆ ಕಾರಣದಿಂದಾಗಿ ಪಾರ್ಕಿಂಗ್ ಜಾಗದಲ್ಲಿ ಹಾಕಿದ ಸಿಮೆಂಟ್ ಕಾಂಕ್ರೀಟ್ ಕುಸಿದು ಅದು ಬಾವಿಯಂತಾಗಿದ್ದು ಅದೇ ಜಾಗದಲ್ಲಿ ನಿಲ್ಲಿಸಿದ್ದ ಕಾರನ್ನ ಒಳಗಡೆ ಎಳೆದುಕೊಂಡಿದೆ. ಈನು ಆಗ ಕಾರ್ ನಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ಏನೂ ಅಪಾಯವಾಗಿಲ್ಲ ಎಂದು ಹೇಳಲಾಗಿದೆ. ಮುಳುಗಿದ್ದ ಕಾರ್ ನ್ನ ಹೊರ ಗೆದ್ದದ್ದು ಹೇಗೆ ಎಂಬುದನ್ನ ಈ ವಿಡಿಯೋದಲ್ಲಿ ನೋಡಿ..

[widget id=”custom_html-4″]

ಇನ್ನು ಕಾರ್ ನ್ನ ಆ ಬಾವಿ ಒಳಗೆ ಎಳೆದುಕೊಂಡ ಬಳಿಕ ಕ್ರೈನ್ ತರಿಸಿ ಕಾರ್ ನ್ನ ಹೊರತೆಗೆಯುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಅದೇ ಪಾರ್ಕಿಂಗ್ ಜಗದ ಅಕ್ಕ ಪಕ್ಕದಲ್ಲಿ ಮತ್ತೆರಡು ಕಾರ್ ಗಳನ್ನ ಪಾರ್ಕಿಂಗ್ ಮಾಡಿರುವುದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಆ ಕಾರ್ ಗಳಿಗೆ ಯಾವುದೇ ಯಾವುದೇ ತೊಂದರೆ ಆಗಿಲ್ಲ ನಿಂತಿದ್ದ ಜಾಗದಲ್ಲಿ ನಿಂತಿದ್ದವು. ಮಹಾರಾಷ್ಟ್ರ ಸೇರಿದಂತೆ ಮುಂಬೈ ಮಹಾನಗರದಲ್ಲಿ ಕೆಲ ದಿನಗಳಿಂದ ಮಳೆ ಜೋರಾಗಿರುವ ಕಾರಣ ಇಂತಹ ಘಟನೆ ನಡೆದಿದೆ. ಇನ್ನು ವೈರಲ್ ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ..