ಪರೀಕ್ಷೆಗೆ ಹೋಗಲು ಕ್ಯೂನಲ್ಲಿ ನಿಂತಿದ್ದ ವಿದ್ಯಾರ್ಥಿನಿ..ಆ ಟ್ರಾಫಿಕ್ ಪೊಲೀಸ್ ಪೇದೆ ಮಾಡಿದ್ದೇನು ಗೊತ್ತಾ.?

News
Advertisements

ಈಗ ಎಲ್ಲಾ ಕಡೆ ಪರೀಕ್ಷೆಗಳ ಸಮಯ.ಇನ್ನು ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಒಂದು ಕಡೆಯಾದರೆ, ಈಗಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಪರೀಕ್ಷಾ ಕೊಠಡಿಗೆ ಹೋಗುತ್ತೇವೋ ಇಲ್ಲವೋ ಎಂಬುದು ಮತ್ತೊಂದು ಭಯ. ಆದರೆ ಇಲ್ಲಿ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಪರೀಕ್ಷೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಸ್ಫೂರ್ತಿಯಾಗಿದ್ದಾರೆ.

Advertisements

ಹೌದು, ಮುಂಬೈನಲ್ಲಿ ವಿಧ್ಯಾರ್ಥಿನಿಯೊಬ್ಬರು ಎಸ್‍ಎಸ್‍ಸಿ ಬೋರ್ಡ್ ಪರೀಕ್ಷೆಗೆ ಹೋಗುವ ಸಲುವಾಗಿ ಖಾರ್ ಆಟೋ ನಿಲ್ದಾಣದಲ್ಲಿ ಸರತಿ ಸಾಲಿನಲ್ಲೇ ನಿಂತಿದ್ದಳು. ಇನ್ನು ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮುಖದಲ್ಲಿ ಪರಿಕ್ಷಾ ಭಯ ಎದ್ದು ಕಾಣುತ್ತಿರುತ್ತದೆ.

ಇನ್ನು ಇದನ್ನ ಗಮನಿಸಿದ ಅಲ್ಲೇ ಇದ್ದ ಸಂಚಾರಿ ಪೊಲೀಸ್ ಪೇದೆ ವಿದ್ಯಾರ್ಥಿನಿಯ ಬಳಿ ಮಾತನಾಡಿದ್ದು ಆಕೆಗೆ ssc ಬೋರ್ಡ್ ಪರೀಕ್ಷೆ ಇರುವುದು ತಿಳಿದಿದೆ. ಬಳಿಕ ಒಂದು ಕ್ಷಣ ಕೂಡ ತಡಮಾಡದೆ ಆ ಪೊಲೀಸ್ ಪೇದೆ ಆ ವಿಧ್ಯಾರ್ಥಿನಿಯನ್ನ ನಿಂತಿದ್ದ ಕ್ಯೂ ಲೈನ್ ನಿಂದ ಹೊರ ಬರುವಂತೆ ಕರೆದು ಮುಂದೆ ಹೋಗುತ್ತಿದ್ದ ಆಟೋವನ್ನ ನಿಲ್ಲಿಸಿ, ಆಟೋ ಹತ್ತಿಸಿ ಕಳಿಸಿದ್ದಾರೆ.

ಇನ್ನು ಸರಿಯಾದ ಸಮಯಕ್ಕೆ ಹಾಜರಾಗುವಂತೆ ಸಹಾಯ ಮಾಡಿದ ಪೊಲೀಸ್ ಪೇದೆ ಆ ವಿದ್ಯಾರ್ಥಿನಿಗೆ ಪರೀಕ್ಷೆ ಚೆನ್ನಾಗಿ ಬರಿ ಎಂದು ಗುಡ್ ಲಕ್ ಹೇಳಿ ವಿಶ್ ಮಾಡಿದ್ದಾರೆ. ಇನ್ನು ಪೊಲೀಸ್ ಪೇದೆಯ ಈ ಕೆಲಸವನ್ನ ಕಣ್ಣಾರೆ ಕಂಡ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಪೋಸ್ಟ್ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ವಿಧ್ಯಾರ್ಥಿನಿಯನ್ನ ಪರೀಕ್ಷೆಗೆ ಹಾಜರಾಗಲು ಸಹಾಯ ಮಾಡಿದ [ಪೊಲೀಸ್ ಪೇದೆಯ ಈ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.