ಅನಾರೋಗ್ಯದಲ್ಲಿ ತಂದೆ..ಲಾಕ್ ಡೌನ್ ನಲ್ಲಿ ಲಾಕ್ ಆದ ಮಗ..ತಂದೆಯನ್ನ ನೋಡಲು 2100ಕಿಮೀ ಸೈಕಲ್ ನಲ್ಲೇ ಹೊರಟ..ಮುಂದೆ ಆಗಿದ್ದೇನು ಗೊತ್ತಾ.?

News
Advertisements

ಕೊರೋನಾ ಹಿನ್ನಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ರೈಲು, ಬಸ್ ಸೇರಿದಂತೆ ಯಾವುದೇ ವಾಹನ ಸಂಚರಿಸುವುಂತಿಲ್ಲ. ಆದರೆ ಇದು ಕೊರೋನಾ ಸೋಂಕಿನಿಂದ ರಕ್ಷಣೆ ಮಾಡಲು ಆಗಿರುವುದರಿಂದ ಸರ್ಕಾರದ ಆದೇಶವನ್ನ ನಾವು ಪಾಲಿಸಲೇಬೇಕು.

Advertisements

ಆದರೆ ಹಲವರಿಗೆ ಇದರಿಂದ ತೊಂದರೆಯಾಗಿರುವುದಂತೂ ನಿಜ. ಹೌದು, ಮುಂಬೈನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 2100ಕಿಮೀಇರುವ ಜಮ್ಮು ಕಾಶ್ಮೀರಕ್ಕೆ ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿದ್ದಾನೆ. ಮೊಹಮದ್ ಆರಿಫ್ ಎಂಬುವವನೇ ಈ ವ್ಯಕ್ತಿಯಾಗಿದ್ದುಜಮ್ಮು ಕಾಶ್ಮೀರದ ರಾಜೌರಿಯಲ್ಲಿರುವ ಆತನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಇನ್ನು ಮೊಹಮದ್ ಆರಿಫ್ ಅವರ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿರುವುದಾಗಿ ಮನೆಯಿಂದ ಫೋನ್ ಕಾಲ್ ಬಂದಿದೆ. ಇನ್ನು ಆರಿಫ್ ಗೆ ತಂದೆಯನ್ನ ನೋಡಲು ಹೋಗಲೇಬೇಕಾದ ಪರಿಸ್ಥಿತಿ. ಆದರೆ ಲಾಕ್ ಡೌನ್ ನಿಂದಾಗಿ ಬಸ್, ರೈಲುಗಳು ಇಲ್ಲ. ಆಗ ಆರಿಫ್ ಬೇರೆ ದಾರಿ ಕಾಣದೆ, ತಮ್ಮ ಜೊತೆ ಕೆಲಸ ಮಾಡುತ್ತಿದ್ದವರ ಹತ್ತಿರ ೫೦೦ರೂಗಳಿಗೆ ಸೈಕಲ್ ಖರೀದಿ ಮಾಡಿದ್ದಾನೆ.

ಹೇಗಾದರೂ ಮಾಡಿ ತನ್ನ ತಂದೆಯನ್ನ ನೋಡಲೇಬೇಕು ಎಂದು ಸೈಕಲ್ ನಲ್ಲಿಯೇ ಗುರುವಾರ ಬೆಳಿಗ್ಗೆ ಹತ್ತು ಗಂಟೆಗೆ ಮುಂಬೈ ಬಿಟ್ಟಿದ್ದಾನೆ. ಇನ್ನು ಆರಿಫ್ ಹೇಳುವ ಪ್ರಕಾರ ಆತನಿಗೆ ಅಣ್ಣ ತಮ್ಮಂದಿರಾಗಲಿ, ಅಕ್ಕ ತಂಗಿಯರಾಗಲಿ ಇಲ್ಲ. ಹಾಗಾಗಿ ತನ್ನ ತಂದೆಯನ್ನ ನೋಡಿಕೊಳ್ಳಲು ಯಾರೂ ಇಲ್ಲ. ಇನ್ನು ಕೊನೆಯ ಕ್ಷಣದಲ್ಲಿ ಆದರೂ ತನ್ನ ತಂದೆಯನ್ನ ನೋಡಲೇಬೇಕು ಎಂದು ಸೈಕಲ್ ತುಳಿದುಕೊಂಡು ಹೊರಟಿದ್ದಾರೆ. ಇನ್ನು ಜಮ್ಮು ಕಾಶ್ಮೀರದ ರಾಜೌರಿಯನ್ನು ತಲುಪಲು ಎಷ್ಟು ದಿವಸ ಆಗುತ್ತೋ ನನಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಮುಂಬೈನಿಂದ ಸೈಕಲ್ ನಲ್ಲಿ ಹೊರಟ ಆರಿಫ್ ತಮ್ಮ ಜೊತೆಗೆ ಕೇವಲ ೮೦೦ರೂ ಹಣ ಮತ್ತು ನೀರನ್ನ ತೆಗೆದುಕೊಂಡು ಹೊರಟಿದ್ದಾರೆ. ಇನ್ನು ದಾರಿ ಮಧ್ಯದಲ್ಲಿ ಆರಿಫ್ ಅವರಿಗೆ ಪೊಲೀಸರು ಎದುರಾಗಿದ್ದು, ಆತ ತನ್ನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಪೊಲೀಸರು ಏನೂ ಸಹಾಯ ಮಾಡಲಿಲ್ಲ, ಆದರೆ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಮಾರ್ಗ ಮಧ್ಯ ಅವರ ಫೋನ್ ಕೂಡ ಸ್ವಿಚ್ ಆಪ್ ಆಗಿದ್ದು, ಅಂಗಡಿಯೊಂದರಲ್ಲಿ ಫೋನ್ ಚಾರ್ಜ್ ಮಾಡಿಕೊಂಡು ಮನೆಗೆ ಫೋನ್ ಮಾಡಿದ್ದಾರೆ. ಇನ್ನು ತಂದೆಯ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಅವರನ್ನ ಆಸ್ಪತ್ರೆಗೂ ಕರೆದುಕೊಂಡು ಹೋಗಲು ಯಾರೂ ಇಲ್ಲ ಎಂದು ತಮ್ಮ ನೋವನ್ನ ಹೇಳಿಕೊಂಡಿದ್ದಾರೆ.

ಇನ್ನು ಲಾಕ್ ಡೌನ್ ಮಧ್ಯಯೂ ಸೈಕಲ್ ಪ್ರಯಾಣ ಬೆಳೆಸಿರುವ ಆರಿಫ್ ಮಾರ್ಗ ಮಧ್ಯ ಸಿಗುವ ದಿನಸಿ ಅಂಗಡಿಗಳಲ್ಲಿ ಬಿಸ್ಕೆಟ್ ತಿಂದು ಹಸಿವು ನೀಗಿಸಿಕೊಳ್ಳುತಿದ್ದಾರೆ. ಇನ್ನು ರಸ್ತೆಯಲ್ಲೇ ಮಲಗುತ್ತಿದ್ದಾರೆ. ಬೆಳಿಗ್ಗೆ ಎದ್ದು ಮಾಮೂಲಿಯಂತೆ ತಮ್ಮ ಪ್ರಯಾಣ ಮುಂದುವರಿಸುತ್ತಿದ್ದಾರೆ. ಇನ್ನು ಸದ್ಯಕ್ಕೆ ಮೊಹಮದ್ ಆರಿಫ್ ರವರು ಮಹಾರಾಷ್ಟ್ರ ಗುಜರಾತ್ ಗಡಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಆರಿಫ್ ರವರಿಗೆ ಜಮ್ಮು ಕಾಶ್ಮೀರದ ಪೊಲೀಸ್ರು ಸಹಾಯ ಮಾಡಲು ಮುಂದಾಗಿದ್ದು, ಅವರು ಯಾವ ಸ್ಥಳದಲ್ಲಿದ್ದಾರೆ ಎಂದು ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ.

ಹೋಗಲಾಡಿಸಾಲು ಒಟ್ಟಿನಲ್ ತನ್ನ ತಂದೆಯನ್ನ ಕಾಣಲು ಹೊರಟಿರುವ ಆರಿಫ್ ರವರ ಕಣ್ಣೀರಿನ ಕತೆಯನ್ನ ಹೋಗಲಾಡಿಸಲು ಸರ್ಕಾರ ಮುಂದೆ ಬರಬೇಕು. ಇನ್ನು ಆರಿಫ್ ರವರಿಗೆ ಸರ್ಕಾರ ಸಹಾಯ ಮಾಡಬೇಕು ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಶೇರ್ ಮಾಡಿ.