ಜನರ ನಡುವೆಯೇ ಆರತಕ್ಷತೆ ಮಾಡಿಕೊಂಡ ನಾಗಿಣಿ2 ಖ್ಯಾತಿಯ ತ್ರಿಶೂಲ್ ಶಿವಾನಿ ! ನಡೆದಿದ್ದಲ್ಲಿ ಗೊತ್ತಾ ?

Entertainment

ಕನ್ನಡ ಕಿರುತೆರೆಯ ನಂಬರ್ ಒನ್ ಚಾನೆಲ್ ಆಗಿ ಗುರುತಿಸಿಕೊಂಡಿರುವ ಜೀ ಕನ್ನಡ ವಾಹಿನಿ ವಿಭಿನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನ ಪ್ರಸಾರ ಮಾಡುವ ಮೂಲಕ ತನ್ನ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನ ನೀಡುತ್ತಿದೆ. ವಿಭಿನ್ನ ಕಾರ್ಯಕ್ರಮಗಳನ್ನ ಪ್ರಸಾರಮಾಡುವ ಮೂಲಕ ಮತ್ತಷ್ಟು ವೀಕ್ಷಕರನ್ನ ತನ್ನತ್ತ ಸೆಳೆಯುತ್ತಲೇ ಇದೆ ಜೀ ವಾಹಿನಿ. ಇನ್ನು ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ೨ ಧಾರವಾಹಿ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈಗಾಗಲೇ ಸೀರಿಯಲ್ ನಲ್ಲಿ ತ್ರಿಶೂಲ್ ಶಿವಾನಿಗೆ ಗೊತ್ತಾಗದಂತೆ ತಾಳಿ ಕಟ್ಟುವ ಮೂಲಕ ಮದುವೆಯಾಗಿರುವ ಎಪಿಸೋಡ್ ನ್ನ ನೀವೆಲ್ಲಾ ನೋಡಿದ್ದೀರಿ..

ಆದರೆ ಈಗ ಶಿವಾನಿ ಮತ್ತು ತ್ರಿಶೂಲ್ ಅವರ ಮದುವೆಯ ಆರತಕ್ಷತೆ ಮಂಡ್ಯದಲ್ಲಿ ನಡೆದಿದೆ. ಈ ಆರತಕ್ಷತೆಗೆ ಮಂಡ್ಯ ಜನರನ್ನ ಕೂಡ ಆಹ್ವಾನ ಮಾಡಲಾಗಿದ್ದು ಭೋಜನವನ್ನು ಸಹ ಏರ್ಪಡಿಸಲಾಗಿತ್ತು. ಹಾಗಾದ್ರೆ, ತ್ರಿಶೂಲ್ ಶಿವಾನಿ ರಿಯಲ್ ಲೈಫ್ ನಲ್ಲಿ ಮದ್ವೆಯಾಗುತ್ತಿದ್ದಾರಾ ಎಂಬ ಕುತೂಹಲ ನಾಗಿಣಿ 2 ಸೀರಿಯಲ್ ವೀಕ್ಷಕರಲ್ಲಿ ಮನೆ ಮಾಡಿದೆ. ಹೌದು, ಹಲವಾರು ಪ್ರಥಮಗಳಿಗೆ ಕಾರಣವಾಗಿರುವ ಜೀ ವಾಹಿನಿಯವರು, ಈಗ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡುವ ಮೂಲಕ ಜನರಿಗೆ ವಿಭಿನ್ನವಾಗಿ ಮನರಂಜನೆ ನೀಡಲು ಮುಂದಾಗಿದ್ದಾರೆ. ಪ್ರಪ್ರಥಮ ಬಾರಿಗೆ ಕಿರುತೆರೆ ಇತಿಹಾಸದಲ್ಲಿ ಸೀರಿಯಲ್ ನಲ್ಲಿ ನಡೆಯುವ ಅರತಕ್ಷತೆಯನ್ನ ಜನರ ನಡುವೆ ನಡೆಸಿ, ಅವರಿಗೆ ಭೋಜನದ ವ್ಯವಸ್ಥೆ ಕೂಡ ಆಯೋಜಿಸಿದ ಕೀರ್ತಿ ಜೀ ವಾಹಿನಿಗೆ ಸಿಕ್ಕಿದೆ.

ಮಂಡ್ಯ ಜಿಲ್ಲೆಯಲ್ಲಿ ನಾಗಿಣಿ ೨ ಧಾರಾವಾಹಿಯ ಶಿವಾನಿ ಹಾಗೂ ತ್ರಿಶೂಲ್ ಅವರ ಮದುವೆ ಅರತಕ್ಷತೆಯನ್ನ ಜೀ ವಾಹಿನಿ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಜನರಿಗೂ ಕೂಡ ಆಹ್ವಾನ ನೀಡಲಾಗಿತ್ತು. ಇನ್ನು ಮಂಡ್ಯ ಜಿಲ್ಲೆಯ ಚೌಟ್ರಿಯೊಂದರಲ್ಲಿ ನಡೆದ ಈ ಅರತಕ್ಷತಾ ಕಾರ್ಯಕ್ರಮದಲ್ಲಿ ಜನರು ಮತ್ತು ನಾಗಿಣಿ ಸೀರಿಯಲ್ ತಂಡದ ನಡುವೆ ಸಂವಾದವನ್ನ ಜೀ ವಾಹಿನಿಯವರು ಆಯೋಜನೆ ಮಾಡಿದ್ದರು. ಇನ್ನು ತಮ್ಮ ಊರಿನ, ಕುಟುಂಬದ ಮದ್ವೆ ಎಂಬಂತೆ ಈ ಅರತಕ್ಷತೆಯಲ್ಲಿ ಭಾಗವಹಿಸಿದ್ದ ಮಂಡ್ಯ ಜನ ನಾಗಿಣಿ ೨ ಸೀರಿಯಲ್ ತಂಡದೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡು ಸಂಭ್ರಮ ಪಟ್ಟಿದ್ದು, ಭರ್ಜರೀ ಊಟ ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಜೀ ವಾಹಿನಿ ಜನರ ನಡುವೆ ಆಯೋಜಿಸಿದ್ದ ಈ ಸೀರಿಯಲ್ ಅರತಕ್ಷತಾ ಕಾರ್ಯಕ್ರಮ ಕಿರುತೆರೆ ಲೋಕದಲ್ಲೇ ಪ್ರಥಮವಾಗಿದ್ದು, ಬಂದ ಜನರಿಗೂ ಕೂಡ ಅದ್ದೂರಿ ಸತ್ಕಾರ ಮಾಡಿ ಕಳುಹಿಸಲಾಗಿದೆ.