ಬ್ರೇಕಿಂಗ್ ನ್ಯೂಸ್..ಲಾಕ್ ಡೌನ್ ಆಯ್ತು ಇಡೀ ಭಾರತ..ಎಷ್ಟು ದಿವಸ ಗೊತ್ತಾ.?

News
Advertisements

ಮಹಾಮಾರಿ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರೂ, ಸಾರ್ವಜನಿಕರು ತಲೆಕೆಡಿಸಿಕೊಂಡಂತಿಲ್ಲ.

Advertisements

ಹಾಗಾಗಿ ಇಂದು ದೇಶವನ್ನ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ ಭಾರತವನ್ನ ಲಾಕ್ ಡೌನ್ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ. ಕೊರೋನಾ ಸೋಂಕಿನಿಂದ ಇಡೀ ಜಗತ್ತಿನಲ್ಲಿ ಏನಾಗುತ್ತಿದೆ ಅಂತ ನೀವು ನೋಡಿದ್ದೀರಿ. ಅಮೆರಿಕಾದಂತ ಮುಂದುವರಿದ ದೇಶಗಳೇ ಈ ಕೊರೋನಾ ಸೋಂಕಿನಿಂದ ಏನೂ ಮಾಡಲಾಗದೆ ನರಳುತ್ತಿವೆ.

ಇನ್ನು ಇಂದು ಮಧ್ಯ ರಾತ್ರಿ ೧೨ ಗಂಟೆಯಿಂದ ಏಪ್ರಿಲ್ ೧೪ ರವರೆಗೆ ಬರೋಬ್ಬರಿ 21 ದಿನಗಳ ಕಾಲ ಮನೆಯಿಂದ ಹೊರಗಡೆ ಬರದಂತೆ, ಇಡೀ ಇಂಡಿಯಾವನ್ನ ಲಾಕ್ ಡೌನ್ ಮಾಡಿ ಘೋಷಣೆ ಮಾಡಿದ್ದು, ಮನೆಯಿಂದ ಹೊರಬರದಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರು.

ಒಂದು ವೇಳೆ 21ದಿನಗಳ ಕಾಲ ಭಾರತವನ್ನ ಲಾಕ್ ಡೌನ್ ಮಾಡದಿದ್ದರೆ, ೨೧ವರ್ಷ ಹಿಂದಕ್ಕೆ ಹೋಗುತ್ತೆ ಎಂದು ಪ್ರಧಾನಿಗಳು ಹೇಳಿದ್ದಾರೆ. ನೀವು ದೇಶದ ಯಾವುದೇ ಭಾಗದಲ್ಲಿರಿ, ಮುಂದಿನ ೩ವಾರಗಳ ಕಾಲ ಅಲ್ಲೇ ಉಳಿದುಕೊಳ್ಳಿ, ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಎಂದು ಕೇಳಿಕೊಂಡಿದ್ದಾರೆ.

ನಿಮ್ಮ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಿ, 21ದಿನಗಳ ಕಾಲ ಮನೆಯಿಂದ ಹೊರಬರದೆ ನಿಮ್ಮನ್ನ ನಿಮ್ಮ ಕುಟುಂಬವನ್ನ ಉಳಿಸಿಕೊಳ್ಳಿ. ನಿಮ್ಮ ಬೇಜವಾಬ್ದಾರಿತನ ಮುಂದಿನ ದಿನಗಳಲ್ಲಿ ದೊಡ್ಡ ಸಂಕಷ್ಟಕ್ಕೆ ಕಾರಣವಾಗಬಹುದು ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ.