ಅಬ್ಬಬ್ಬಾ.!ಅದ್ದೂರಿಯಾಗಿ ನಡೆದ ಮದುವೆಯಲ್ಲಿ ನಯನತಾರಾ ಧರಿಸಿದ್ದ ಆಭರಣದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

Cinema
Advertisements

ನಮಸ್ತೇ ಸ್ನೇಹಿತರೇ, ಕನ್ನಡದ ಸೂಪರ್ ಸಿನಿಮಾದಲ್ಲಿ ಉಪ್ಪಿ ಜೊತೆ ನಟಿಸಿದ್ದ ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟಿ ನಯನತಾರಾ ಅವರು ತಮಿಳಿನ ಖ್ಯಾತ ನಿರ್ದೇಶಕ ಎನಿಸಿರುವ ವಿಘ್ನೇಶ್ ಶಿವನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಎನಿಸಿಕೊಂಡಿರುವ ನಯನತಾರ ಅವರು ಕಳೆದ ಏಳು ವರ್ಷಗಳಿಂದ ವಿಘ್ನೇಶ್ ಶಿವನ್ ಅವರನ್ನ ಪ್ರೀತಿ ಮಾಡುತ್ತಿದ್ದು, ಈಗ ಖ್ಯಾತ ನಿರ್ದೇಶಕನ ಜೊತೆ ಸಪ್ತಪದಿ ತುಳಿದಿದ್ದಾರೆ. ಇನ್ನು ಈ ಮದುವೆಗೆ ಸೂಪರ್ ಸ್ಟಾರ್ ರಜನೀಕಾಂತ್, ಬಾಲಿವುಡ್ ನ ಕಿಂಗ್ ಖಾನ್ ಎನಿಸಿರುವ ಶಾರುಖ್ ಖಾನ್, ಫೇಮಸ್ ಡೈರೆಕ್ಟರ್ ಅಟ್ಲಿ ಸೇರಿದಂತೆ ಹಲವು ಸ್ಟಾರ್ ನಟನಟಿಯರು ಭಾಗಿಯಾಗಿ ನವದಂಪತಿಗೆ ಶುಭ ಕೋರಿದ್ದಾರೆ.

Advertisements

ಇನ್ನು ನವವಧುವಾಗಿ ಕಂಗೊಳಿಸುತ್ತಿದ್ದ ನಟಿ ನಯನತಾರಾ ಧರಿಸಿದ ಆಭರಣ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗುತ್ತಿದೆ. ಹೌದು, ನಟಿ ನಯನತಾರಾ ತಮ್ಮ ಮದುವೆಯಲ್ಲಿ ಧರಿಸಿದ್ದ ಗ್ರಾಂಡ್ ಆಭರಣ ಬರೋಬ್ಬರಿ 5 ಕೋಟಿ ಮೌಲ್ಯದ್ದು ಎಂದು ಹೇಳಲಾಗಿದೆ. ಇನ್ನು ಈ ಮದುವೆಯಲ್ಲಿ ನಯನತಾರಾ ಹಾಗೂ ವಿಘ್ನೇಶ್ ಧರಿಸಿದ್ದ ಕಾಸ್ಟ್ಯೂಮ್ಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಹೌದು, ನಿರ್ದೇಶಕ ವಿಘ್ನೇಶ್ ಶಿವನ್ ಅವರು ತುಂಬಾ ಸಿಂಪಲ್ ಆಗ್ ಶರ್ಟ್ ಪಂಚೆ ಹಾಗೂ ಶಲ್ಯ ತೊಟ್ಟು ಮಿಂಚಿದ್ರೆ, ನಟಿ ನಯನತಾರಾ ರೆಡ್ ಕಲರ್ ಸೀರೆ ಉಟ್ಟು ನವವಧುವಾಗಿ ಮಿಂಚಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ನಯನತಾರಾ ವಿಘ್ನೇಶ್ ಶಿವನ್ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲಿ ಭಾರೀ ವೈರಲ್ ಆಗಿದ್ದು, ನಯನ ತಾರಾ ಅವರು ತಮ್ಮ ಮದುವೆಯನ್ನ ವಿಡಿಯೋವನ್ನ ಕೋಟ್ಯಂತರ ರುಪಾಯಿಗೆ OTTಯವರಿಗೆ ಮಾರಿದ್ದಾರೆ ಎನ್ನಲಾಗಿದೆ..