ಗೃಹಪ್ರವೇಶದ ಆಚರಣೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ ?ಅಂತಹ ಮಹತ್ವ ಏನಿದೆ ನೋಡಿ..

Adhyatma

ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಎರಡು ರೀತಿಯ ಗೃಹಪ್ರವೇಶಗಳು ಇವೆ. ಒಂದು ನಾವು ಹೊಸಮನೆ ಕಟ್ಟಿಸಿದಾಗ ಅಥವಾ ಕೊಂಡಾಗ ಮಾಡುವ ಗೃಹಪ್ರವೇಶ ಮತ್ತೊಂದು ಹೊಸದಾಗಿ ಮದುವೆಯಾದ ಹೆಣ್ಣು ಮಗಳು ಗಂಡನ ಮನೆ ಪ್ರವೇಶಿಸುವ ವಧುವಿನ ಗೃಹಪ್ರವೇಶ ಕಾರ್ಯ. ಅಷ್ಟಕ್ಕೂ ಈ ಕಾರ್ಯಗಳಲ್ಲಿ ಅಂತ ಮಹತ್ವ ಪ್ರಜೋಜನ ಏನಿದೆ ಎಂದು ನೋಡುತ್ತಾ ಹೋದರೆ ಗೃಪ್ರವೇಶ ಮಾಡುವುದು ಎಷ್ಟು ಮುಖ್ಯವೆಂದು ತಿಳಿಯುತ್ತದೆ. ಹಿಂದಿನ ಕಾಲದಲ್ಲಿ ಮದುವೆಯ ನಂತರವೇ ಹೆಣ್ಣು ಗಂಡನ ಮನೆಗೆ ಮೊದಲಬಾರಿ ಪ್ರವೇಶ ಮಾಡುತಿದ್ದಳು.

ಹೀಗೆ ಪ್ರವೇಶ ಮಾಡುವಾಗ ತಮ್ಮ ಸೊಸೆಯನ್ನು ಗೌರವವಾಗಿ ಪ್ರೀತಿ ಪೂರ್ವಕವಾಗಿ ಬರ ಮಾಡಿಕೊಳ್ಳಲು ಅದ್ದೂರಿಯ ಕಾರ್ಯಕ್ರಮ ಹಾಗೂ ಕೆಲ ಧಾರ್ಮಿಕ ಕೆಸಲ ಏರ್ಪಾಡು ಮಾಡುತಿದ್ದರು. ಅದು ಕ್ರಮೇಣ ಕಡಿಮೆ ಯಾಗುತ್ತಾ ಬಂದು ಈಗ ಸೇರು ಒದೆಯುವ ಸಂಪ್ರದಾಯ ಮಾತ್ರ ಉಳಿದಿದೆ. ಹೆಣ್ಣು ಶಕ್ತಿಯ ಸ್ವರೂಪ. ಆಕೆಯ ಮನಸ್ಸು ಆಲೋಚನೆ ಬಹಳ ಶಕ್ತಿಯುತವಾದದ್ದು. ಆಕೆಗೆ ಒಂದು ಮನೆಯನ್ನು ಬೆಳಗುವ ಅಥವಾ ಸರ್ವನಾ’ಶ ಮಾಡುವ ಶಕ್ತಿ ಇರುತ್ತದೆ. ಇಂತಹ ಹೆಣ್ಣು ಗಂಡನ ಮನೆಯನ್ನು ಮೊದಲ ಬಾರಿಗೆ ಪ್ರವೇಶಿಸುವಾಗ ಪ್ರೀತಿಯಿಂದ, ಶಾಂತಿಯಿಂದ ಒಳ್ಳೆಯ ಮನಸಿನಿಂದ ಇರುವುದು ತುಂಬಾ ಮುಖ್ಯ.

ಆದ್ದರಿಂದಲೇ ಅವಳನ್ನು ಅಷ್ಟು ಗೌರವ ಹಾಗು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಿದ್ದರು. ಮತ್ತು ಆ ಸಮಯ ಎಲ್ಲರ ಒಳಿತಿಗಾಗಿ ಕೆಲ ಧಾರ್ಮಿಕ ಕಾರ್ಯಗಳನ್ನು ಮಾಡುತಿದ್ದರು. ಇದನ್ನು ಗೃಹಪ್ರವೇಶ ಕಾರ್ಯಕ್ರಮವಾಗಿ ಆಚರಿಸುತ್ತಿದ್ದರು. ಈಗಲೂ ಈ ಪದ್ಧತಿ ಜಾರಿಯಲ್ಲಿದೆ. ಒಂದುವೇಳೆ ಶಕ್ತಿ ಸ್ವರೂಪಿಯಾದ ಹೆಣ್ಣು ಕೆಟ್ಟ ಆಲೋಚನೆ ಅಥವಾ ತಿರಸ್ಕಾರ ಮನೋಭಾವದಿಂದ ಗಂಡನ ಮನೆ ಪ್ರವೇಶಿಸಿದರೆ ಆಲ್ಲಿ ಜ’ಗಳ, ಅಶಾಂತಿ ನೆಲೆಸುತ್ತದೆ. ಅವಳು ಅಂತ ಕೆ’ಟ್ಟ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಒಳ್ಳೆಯ ಮನಸಿನಿಂದ ಹೆಣ್ಣು ಗೃಹಪ್ರವೇಶ ಮಾಡದಿದ್ದರೆ ಆ ಮನೆ ಸರ್ವನಾ’ಶ ಆದಂತೆ.

ಆದ್ದರಿಂದ ಹೆಣ್ಣಿನ ಗೃಹಪ್ರವೇಶ ಕಾರ್ಯ ಅಷ್ಟು ಮಹತ್ವದ್ದು. ಆದರೆ ಮದುವೆಗೆ ಮುಂಚೆಯೇ ತಮ್ಮ ಭಾವಿ ಗಂಡನ ಮನೆ ಪ್ರವೇಶಿಸುವುದು ಈಗ ಸಹಜವಾಗಿಬಿಟ್ಟಿದೆ. ಇದೇ ರೀತಿ ನಾವು ನಮ್ಮ ಹೊಸ ಮನೆ ಪ್ರವೇಶಿಸುವಾಗ ನಮ್ಮ ಜೀವನ ಚೆನ್ನಾಗಿರಲಿ, ಈ ಮನೆಯಲ್ಲಿ ಶುಭ ಕಾರ್ಯಗಳೇ ನಡೆಯಲಿ, ಇಲ್ಲಿ ಶಾಂತಿ ನೆಮ್ಮದಿ ನೆಲಸಲಿ ಎಂದು ಸಂತೋಷದಿಂದ, ಒಳ್ಳೆ ಮನಸಿನಿಂದ ಮನೆ ಪ್ರವೇಶಿಸಬೇಕು. ನಮ್ಮ ನಮ್ಮ ಕೈಲಾದ ಮಟ್ಟಕ್ಕೆ ಗೃಹಪ್ರವೇಶ ಕಾರ್ಯಕ್ರಮ ಆಚರಿಸಿ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು.