ನಡುರಾತ್ರಿಯಲ್ಲಿ ತನ್ನ ಮನೆ ಮೇಲೆ ಪಟಾಕಿ ಎಸೆದಿದ್ದ ಸ್ಟಾರ್ ನಟನ ಹೆಸರು ಬಹಿರಂಗ ಮಾಡಿದ ನಟಿ ನಿಧಿ ಸುಬ್ಬಯ್ಯ !

Entertainment
Advertisements

ಸ್ನೇಹಿತರೇ, ಈಗಾಗಲೇ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೮ ಶುರುವಾಗಿದ್ದು ಅದಾಗಲೇ ಒಂದೊಂದೇ ಸ್ವಾರಸ್ಯಕರ ವಿಷಯಗಳನ್ನ ಬಹಿರಂಗ ಮಾಡುತ್ತಿದ್ದಾರೆ ಬಿಗ್ ಮನೆ ಸ್ಪರ್ಧಿಗಳು. ಹೌದು, ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ನಲ್ಲಿ ನಟಿಸಿರುವ ನಟಿ ನಿಧಿ ಸುಬ್ಬಯ್ಯ ತಮ್ಮ ಓಲ್ಡ್ ಡೇಸ್ ನ ಕೆಲವೊಂದು ಅಚ್ಚರಿಯ ವಿಚಾರಗಳನ್ನ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಇದು ನಿಧಿ ಸುಬ್ಬಯ್ಯ ಅವರ ತಾತ ಅಜ್ಜಿಯ ಜೊತೆ ಮೈಸೂರಿನಲ್ಲಿ ವಾಸ ಮಾಡುತ್ತಿದ್ದಾಗ ನಡೆದಿದ್ದ ಘಟನೆಯಂತೆ.

[widget id=”custom_html-4″]

Advertisements

ಕೆಳಗಿನ ಮಹಡಿಯಲ್ಲಿ ತಾತ ಅಜ್ಜಿ ಇದ್ದರೆ ಮೇಲಿನ ಮಹಡಿಯಲ್ಲಿ ನಟಿ ನಿಧಿ ಸುಬ್ಬಯ್ಯ ಇದ್ದರಂತೆ. ಇನ್ನು ಹೀಗಿದ್ದಾಗ ಅದೊಂದು ದಿನ ರಾತ್ರಿ ವೇಳೆ ನಿಧಿ ಸುಬ್ಬಯ್ಯ ಮನೆಯ ಹತ್ತಿರ ಮೂರ್ನಾಲ್ಕು ಬೈಕ್ ಗಳಲ್ಲಿ ಎಂಟು ಜನ ಬಂದಿದ್ದು, ನಟಿ ನಿಧಿ ಸುಬ್ಬಯ್ಯ ಕೆಳಗಿನ ಮಹಡಿಯಲ್ಲಿ ಇರುತ್ತಾರೆಂದು ತಿಳಿದು ಪಟಾಕಿಯ ಸರಮಾಲೆಯನ್ನ ಎಸೆದು ಹೋದರಂತೆ. ಇನ್ನು ಆಗ ಮಧ್ಯರಾತ್ರಿಯಾಗಿದ್ದು ಪಟಾಕಿ ಒಡೆದು ದೊಡ್ಡ ಶಬ್ದವಾಗಿತ್ತು.

[widget id=”custom_html-4″]

ಎಚ್ಚರಗೊಂಡು ಆಚೆ ಬಂದು ನೋಡಿದಾಗ, ಅಲ್ಲಿಂದ ನಾಲ್ಕು ಬೈಕ್ ಗಳು ಹೋಗುವುದನ್ನ ನೋಡಿದೆ. ಬಳಿಕ ಪೊಲೀಸ್ ಠಾಣೆಗೆ ದೂರು ಕೊಟ್ಟೆ ಎಂದು ಹೇಳಿದ ನಿಧಿ ಸುಬ್ಬಯ್ಯ ಇದನ್ನ ಮಾಡಿದ್ದು, ಒಬ್ಬ ಸ್ಟಾರ್ ನಟ ಎಂದು ಹೇಳುವ ಮೂಲಕ ಅಲ್ಲಿದ್ದ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಹೌದು, ಅದು ಬೇರೆ ಯಾರೂ ಅಲ್ಲ, ಅಂದು ಪಟಾಕಿ ಎಸೆದವರು ರಾಕಿಂಗ್ ಸ್ಟಾರ್ ಯಶ್ ಎಂದು ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದು, ಸ್ಪರ್ಧಿಗಳೆಲ್ಲಾ ಇದನ್ನ ಕೇಳಿ ಅಚ್ಚರಿಗೊಂಡಿದ್ದಾರೆ.