ಸ್ಟಾರ್ ನಟಿಯಾಗಿದ್ದ ನಿಧಿ ಸುಬ್ಬಯ್ಯ ಅವರ ಜೀವನದಲ್ಲಿ ಮದ್ವೆಯಾದ ಎರಡೇ ವರ್ಷಕ್ಕೆ ಆಗಿದ್ದೇನು ಗೊತ್ತಾ ?

Cinema
Advertisements

ಸ್ನೇಹಿತರೇ, ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ನಿಧಿ ಸುಬ್ಬಯ್ಯ ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟಿ. ಪಂಚರಂಗಿ ಸಿನಿಮಾ ಮೂಲಕ ೨೦೧೦ರಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಿಧಿ ಸುಬ್ಬಯ್ಯ ಸಿನಿಮಾ ರಂಗಕ್ಕೆ ಬರುವ ಮೊದಲು ಮಾಡೆಲ್ ಆಗಿದ್ದವರು. ಮೂಲತಃ ಕೊಡಗಿನವರಾದ ನಿಧಿ ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ. ಸ್ಯಾಂಡಲ್ವುಡ್ ಅಲ್ಲದೆ ಬಾಲಿವುಡ್ ಚಿತ್ರಗಳಲ್ಲೂ ನಟಿಸಿದ್ದಾರೆ ನಿಧಿ ಸುಬ್ಬಯ್ಯ. ಇವರು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದರೂ ಅವರ ವೈಯುಕ್ತಿಕ ಜೀವನ ಮಾತ್ರ ಹೇಳಿಕೊಳ್ಳುವಂತಿಲ್ಲ.

[widget id=”custom_html-4″]

Advertisements

ಹೌದು, ಫೆಬ್ರುವರಿ 2017ರಂದು ನಿಧಿ ತಾನು ಪ್ರೇಮಿಸುತ್ತಿದ್ದ ಲವೇಶ್ ಖೈರಾಜನಿ ಎಂಬುವವರ ಜೊತೆ ಕೊಡವ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ನಿಧಿ ಹಾಗೂ ಲವೇಶ್ ಅವರು ಮೊದಲಿಗೆ ಸ್ನೇಹಿತರಾಗಿದ್ದು ಬಳಿಕ ಪ್ರೀತಿಸಿ ಮದುವೆಯಾದವರು. ಇನ್ನು ಲವೇಶ್ ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ತುಂಬಾ ಸುಂದರವಾಗಿದ್ದ ಇವರ ದಾಂಪತ್ಯ ಜೀವನ ತಿಂಗಳುಗಳು ಕಳೆದಂತೆ ಇವರಿಬ್ಬರ ಮಧ್ಯೆ ಮನಸ್ತಾಪ ಬರಲು ಶುರುವಾಗಿ ಜ’ಗಳಗಳಿಗೆ ಕಾ’ರಣವಾಗುತ್ತದೆ. ಹೀಗೆ ದಾಂಪತ್ಯಜೀವನದಲ್ಲಿ ಸರಸದ ಬದಲು ವಿರಸವೇ ಹೆಚ್ಚಾದ ಕಾರಣ ನಟಿ ನಿಧಿ ಸುಬ್ಬಯ್ಯ ಅವರು ೨೦೧೯ರಲ್ಲಿ ಲವೇಶ್ ಅವರಿಂದ ಡೈ’ವರ್ಸ್ ಪಡೆದುಕೊಳ್ಳುತ್ತಾರೆ.

[widget id=”custom_html-4″]

ಕೇವಲ ಎರಡೇ ವರ್ಷಗಳಲ್ಲೇ ನಟಿ ನಿಧಿ ಸುಬ್ಬಯ್ಯ ತನ್ನ ಗಂಡನಿಂದ ವಿ’ಚ್ಚೇಧನ ಪಡೆದು ದೂರವಾಗಿದ್ದು, ಅವರ ಜೀವನದಲ್ಲಿ ಹಲವಾರು ಸವಾಲ್ ಗಳನ್ನ ಹುಟ್ಟುಹಾಕಿತು. ನಿಧಿ ಸುಬ್ಬಯ್ಯ ಅವರಿಗೆ ಈಗ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿವೆಯೋ ಇಲ್ಲವೋ ಗೊತ್ತಿಲ್ಲ..ಆದರೆ ಇತ್ತೀಚಿಗೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಒಟ್ಟಿನಲ್ಲಿ ಎಂತ ದೊಡ್ಡ ನಟ ನಟಿಯರೇ ಇದ್ದರೂ ಅವರ ಜೀವನದಲ್ಲೂ ದೊಡ್ಡ ದೊಡ್ಡ ನೋವಿನ ಕತೆ ಇರುತ್ತದೆ ಎಂಬುದಕ್ಕೆ ನಿಧಿ ಸುಬ್ಬಯ್ಯ ಅವರೇ ಒಂದು ನಿದರ್ಶನ.

ಇನ್ನು ಈಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ನಿಧಿ ಎರಡು ಮೂರೂ ವಾರಗಳಿಂದ ಸತತವಾಗಿ ನಾಮಿನೇಟ್ ಆಗಿದ್ದರೂ ಸೇಫ್ ಆಗಿದ್ದು ಬಿಗ್ ಮನೆಯಲ್ಲಿ ತನ್ನ ಆಟವನ್ನ ಮುಂದುವರಿಸಿದ್ದಾರೆ. ಸ್ನೇಹಿತರೇ, ನಿಧಿ ಸುಬ್ಬಯ್ಯ ಅವರು ಈಗ ಆಡುತ್ತಿರುವುದನ್ನ ನೋಡಿದ್ರೆ ಎಷ್ಟು ವಾರಗಳ ಕಾಲ ಬಿಗ್ ಮನೆಯಲ್ಲಿ ಉಳಿಯಬಹುದು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..