ನಿಖಿಲ್ ರೇವತಿ ಮದ್ವೆಗೆ ಭರ್ಜರಿ ತಯಾರಿ..ರಾಮನಗರ ಚನ್ನಪಟ್ಟಣ ಜನರಿಗೆ ಸಿಗಲಿದೆ ಭರ್ಜರಿ ಗಿಫ್ಟ್.?

Cinema News
Advertisements

ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ರೇವತಿಯವರ ಮದುವೆ ಏಪ್ರಿಲ್ ೧೭ರಂದು ನಡೆಯಲಿದ್ದು ಈಗಾಗಲೇ ಭರ್ಜರಿ ತಯಾರಿಗಳು ನಡೆದಿವೆ. ಇನ್ನು ಎರಡೂ ಕಡೆಯ ಕುಟುಂಬದವರಲ್ಲಿ ಮದುವೆಯ ಸಂಭ್ರಮ ಜೋರಾಗಿದೆ.

Advertisements

ನಾನು ರಾಜಕೀಯವಾಗಿ ಬೆಳೆಯಲು ರಾಮನಗರ ಮತ್ತು ಚನ್ನಪಟ್ಟಣದ ಜನರು ಕಾರಣ ಎಂದು ಕುಮಾರಣ್ಣ ಹೇಳಿದ್ದರು.ಹಾಗಾಗಿಯೇ ಮಗನ ಮದುವೆಯನ್ನ ರಾಮನಗರದ ಬಳಿ ಮಾಡಬೇಕೆಂದು ನಿರ್ಧಾರ ಮಾಡಿದ್ದರು. ಅದರಂತೆ ಈಗ ರಾಮನಗರದ ಬಳಿ ಇರುವ ಜಾನಪದ ಲೋಕದ ಹತ್ತಿರ ನಿಖಿಲ್ ರೇವತಿ ಮದುವೆಗಾಗಿ ಅದ್ದೂರಿಯಾದ ಕಲ್ಯಾಣಮಂಟಪವನ್ನೇ ನಿರ್ಮಾಣ ಮಾಡಲಾಗುತ್ತಿದೆ.

ಇನ್ನು ರಾಮನಗರ ಮತ್ತು ಚನ್ನಪಟ್ಟಣದ ಜನರ ಋಣ ನನ್ನ ಮೇಲೆ ಇದೆ. ಹಾಗಾಗಿ ಪ್ರತಿಯೊಂದು ಮನೆಗೂ ಲಗ್ನಪತ್ರಿಕೆ ಹಂಚಲಾಗುವುದು ಎಂದು ಹೇಳಿದ್ದರು. ಹಾಗಾಗಿ ನಿಖಿಲ್ ಮದುವೆಗಾಗಿ ೮ ಲಕ್ಷ ಲಗ್ನ ಪತ್ರಿಕೆಗಳನ್ನ ಮುದ್ರಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಹಿಂದೂ ಮುಸ್ಲಿಮರು ಸೇರಿದನೇ ಎಲ್ಲಾ ಧರ್ಮದವರಿಗೆ ಜಾತಿ ಧರ್ಮ ಭೇದವಿಲ್ಲದೆ ಮದುವೆ ಆಮಂತ್ರಣ ಪತ್ರಿಕೆ ಹಂಚಲಾಗುವುದು ಎಂದು ಹೇಳಿದ್ದಾರೆ.

ಇನ್ನು ರಾಮನಗರ ಸೇರಿದಂತೆ ಚನ್ನಪಟ್ಟಣದ ಪ್ರತಿ ಮನೆ ಮನೆಗೂ ಲಗ್ನಪತ್ರಿಕೆಯನ್ನ ಹಂಚಲಾಗುತ್ತಿದ್ದು, ಮದುವೆ ಆಹ್ವಾನ ಪತ್ರಿಕೆ ಜೊತೆಗೆ ಉಡುಗೊರೆಯಾಗಿ ಸೀರೆ, ಪಂಚೆ, ಶರ್ಟ್ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ವಿಶೇಷವಾಗಿ ಮಹಿಳೆಯರಿಗಾಗಿ ಸೀರೆಯ ಜೊತೆಗೆ ಅರಿಶಿನ ಕುಂಕುಮದ ಭರಣಿಗಳನ್ನ ಉಡುಗೊರೆಯಾಗಿ ಕುಮಾರಣ್ಣನ ನೀಡಲಿದ್ದಾರೆ ಎಂದು ಹೇಳಲಾಗಿದೆ.