ಚಿತ್ರರಂಗದ ಕಾರ್ಮಿಕರ ಕಷ್ಟಕ್ಕೆ ಮಿಡಿದ ನಿಖಿಲ್..ಕೊಟ್ಟ ಹಣ ಎಷ್ಟು ಗೊತ್ತಾ.?

Cinema
Advertisements

ಕೊರೋನಾ ಸೋಂಕು ಅತೀ ವೇಗದಲ್ಲಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆಗಿದ್ದು, ಸಿನಿಮಾ ಸೇರಿದಂತೆ ಕಿರುತೆರೆಯ ಚಿತ್ರೀಕರಣಗಳು ಕೂಡ ನಿಂತುಹೋಗಿವೆ. ಇನ್ನು ಪ್ರತಿ ದಿನ ದುಡಿದ ಹಣದಲ್ಲೇ ಜೀವನ ಸಾಗಿಸುತ್ತಿದ್ದ ಚಲನ ಚಿತ್ರ ಕಾರ್ಮಿಕರು ಆತಂಕಕ್ಕೆ ಸಿಲುಕಿದ್ದಾರೆ.

Advertisements

ಹೌದು, ಪ್ರತೀ ದಿನದ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಚಲನಚಿತ್ರ ಕಾರ್ಮಿಕರು, ಕೊರೋನಾ ಸೋಂಕು ಹಿನ್ನಲೆಯಲ್ಲಿ ಸಿನಿಮಾ ಚಿತ್ರಕರಣದ ಕೆಲಸಗಳು ನಿಂತುಹೋಗಿರುವುದರಿಂದ ಆತಂಕಕ್ಕೆ ಗುರಿಯಾಗಿದ್ದಾರೆ. ಇದರ ನಡುವೆಯೇ ಸ್ಯಾಂಡಲ್ವುಡ್ ಯುವರಾಜ ನಟ ಹಾಗೂ ರಾಜಕಾರಣಿಯೂ ಆಗಿರುವ ನಿಖಿಲ್ ಕುಮಾರಸ್ವಾಮಿಯವರು ಸಿನಿಮಾ ಕಾರ್ಮಿಕರ ಕಷ್ಟಕ್ಕೆ ಮಿಡಿಯಲು ಮುಂದಾಗಿದ್ದಾರೆ.

ಹೌದು, ನಿಖಿಲ್ ತನ್ನ ತಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಚಲನ ಚಿತ್ರ ಕಾರ್ಮಿಕರು ಆತಂಕಕ್ಕೆ ಸಿಲುಕಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಸಿನಿಮಾ ರಂಗದಲ್ಲಿ ದುಡಿಯುತ್ತಿರುವ ೨೦ಕ್ಕೂ ಹೆಚ್ಚಿರುವ ಕಾರ್ಮಿಕ ಸಂಘಟನೆಗಳ ಸದಸ್ಯರಿಗೆ ಬರೋಬ್ಬರಿ ೩೭ ಲಕ್ಷ ರೂಪಾಯಿಗಳನ್ನ ದಾನವಾಗಿ ನೀಡಿದ್ದು, ಚಿತ್ರರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕ್ರೆಡಿಟ್ ಆಗಲಿದೆ ಎಂದು ಹೇಳಿದ್ದಾರೆ.

ಇನ್ನು ಚಲಚಿತ್ರ ಕಾರ್ಮಿಕರಿಗೆ ೩೨ಲಕ್ಷ ಹಾಗೂ ಕಿರುತೆರೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ೫ಲಕ್ಷ ಸೇರಿ ಒಟ್ಟು ೩೭ಲಕ್ಷ ಹಣವನ್ನ ದೇಣಿಗೆಯಾಗಿ ಚೆಕ್ ಮೂಲಕ ನಿಖಿಲ್ ಕುಮಾರಸ್ವಾಮಿಯವರು ನೀಡಿದ್ದಾರೆ. ಇನ್ನು ನಿಖಿಲ್ ರವರ ಹೃದಯವಂತಿಕೆಗೆ ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ಮಾಡಿ ತಿಳಿಸಿ..ಮರೆಯದೆ ಶೇರ್ ಮಾಡಿ.