ಅದ್ದೂರಿಯಾಗಿ ಜರುಗಿತು ನಿಖಿಲ್ ಕುಮಾರಸ್ವಾಮಿ ಮಗನ ನಾಮಕರಣ.!ಹೆಸರೇನು ಗೊತ್ತಾ.?

Cinema Entertainment
Advertisements

ನಮಸ್ತೆ ಸ್ನೇಹಿತರೇ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಹಿರಿಯ ರಾಜಕಾರಣಿ ದೇವೇಗೌಡರ ಮೊಮ್ಮೊಗನಿಗೆ ನಾಮಕರಣ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಹೌದು, ಸ್ಯಾಂಡಲ್ವುಡ್ ನಟ ಹಾಗೂ ರಾಜಕಾರಣಿಯೂ ಆಗಿರುವ ನಿಖಿಲ್ ಕುಮಾರ್ ಸ್ವಾಮಿ ರೇವತಿ ದಂಪತಿಯ ಮಗನಿಗೆ ನಾಮಕರಣ ಮಹೋತ್ಸವನ್ನ ಅದ್ದೂರಿಯಾಗಿ ಮಾಡಲಾಗಿದೆ. ಹೌದು, ಇಂದು ಬೆಂಗಳೂರಿನ ಜೆಪಿ.ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮೊಮ್ಮಗನಿಗೆ ನಾಮಕರಣವನ್ನ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಇಂದು ಬೆಳಿಗ್ಗೆ 10-30ರಿಂದ 12-20ರವರೆಗೆ ನಡೆದ ಶುಭ ಮಹೂರ್ತದಲ್ಲಿ ನಿಖಿಲ್ ಕುಮಾರಸ್ವಾಮಿ ಮಗನಿಗೆ ನಾಮಕರಣ ಮಾಡಲಾಗಿದೆ.

Advertisements

ದೇವೇಗೌಡರು ಸೇರಿದಂತೆ ಇಡೀ ಕುಟುಂಬದ ಈ ನಾಮಕರಣ ಮಹೋತ್ಸವದಲ್ಲಿ ಭಾಗಿಯಾಗಿದ್ದು, ಮಗುವಿಗೆ ಶುಭ ಹಾರೈಸಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ರೇವತಿ ದಂಪತಿಯ ಪುತ್ರನಿಗೆ ಅವ್ಯಾನ್ ದೇವ್ ಎಂದು ನಾಮಕರಣ ಮಾಡಲಾಗಿದೆ. ಇನ್ನು ಈ ನಾಮಕರಣ ಸಮಾರಂಭದ ವೇಳೆ ಕನಕಾಭಿಷೇಕ, ಪಪೌತ್ರ ಜನನ ಶಾಂತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಎರಡು ಕಡೆಯ ಕುಟುಂಬದವರು ಸೇರಿದಂತೆ ಕೇವಲ ಆಪ್ತ ಬಳಗದವರು ಮಾತ್ರ ಪಾಲ್ಗೊಂಡು ನಿಖಿಲ್ ದಂಪತಿ ಹಾಗೂ ಮಗ ಅವ್ಯಾನ್ ದೇವ್ ಗೆ ಶುಭಕೋರಿದ್ದಾರೆ.

ಇನ್ನು ಸಿನಿಮಾ ಹಾಗೂ ರಾಜಕೀಯ ಎರಡು ರಂಗದಲ್ಲಿಯೂ ಸದಾ ಬ್ಯುಸಿಯಾಗಿರುವ ನಿಖಿಲ್ ಕುಮಾರಸ್ವಾಮಿ ಏಪ್ರಿಲ್ ೧೭, ೨೦೨೦ರಂದು ರಾಜಕೀಯ ಹಿನ್ನಲೆ ಇರುವ ಕುಟುಂಬದ ರೇವತಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕುಮಾರಸ್ವಾಮಿಯವರ ರಾಜಕೀಯ ಕ್ಷೇತ್ರವಾಗಿರುವ ರಾಮನಗರದಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತ್ತು. ಇನ್ನು ನಿಖಿಲ್ ರೇವತಿ ದಂಪತಿಗೆ ಸೆಪ್ಟೆಂಬರ್ ೨೪, ೨೦೨೧ರಂದು ಅವ್ಯಾನ್ ದೇವ್ ಅವರ ಜನನವಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರ ವಿರುದ್ಧ ನಿಂತಿದ್ದ ನಿಖಿಲ್ ಕುಮಾರ ಸ್ವಾಮಿ ಸೋಲು ಕಂಡಿದ್ದು, ಈಗ ಸಿನಿಮಾ ಜೊತೆಗೆ ರಾಜಕೀಯ ರಂಗದಲ್ಲಿಯೂ ಸಕ್ರೀಯರಾಗಿದ್ದಾರೆ.