ನಿಖಿಲ್ ಮದ್ವೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಆಗಿದೆ ಎಂದಿದ್ದಕ್ಕೆ ಸಿಎಂ ಹೇಳಿದ್ದೇನು ಗೊತ್ತಾ.?

News
Advertisements

ಲಾಕ್ ಡೌನ್ ಹಿನ್ನಲೆಯಲ್ಲಿ ನಿಖಿಲ್ ರೇವತಿ ಮದುವೆಯನ್ನ ರಾಮನಗರದ ಬಳಿ ಇರುವ ಕೇತುಗಾನಹಳ್ಳಿ ಬಳಿ ಇರುವ ಕುಮಾರಸ್ವಾಮಿರವರ ಫಾರಂ ಹೌಸ್ ಬಳಿ ಸರಳವಾಗಿ ನೆರವೇರಿದೆ. ಆದರೆ ಇದರ ನಡುವೆ ಲಾಕ್ ಡೌನ್ ನಿಯಮವನ್ನ ಉಲ್ಲಂಘಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

Advertisements

ನಿಖಿಲ್ ಮದುವೆಯಲ್ಲಿ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಸ್ವತಹ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರು ಪ್ರತಿಕ್ರಿಯಿಸಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಇದ್ರ ಬಗ್ಗೆ ಪ್ರತಿಕ್ರಯಿಸಿದ ಮುಖ್ಯಮಂತ್ರಿಗಳು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿಯವರದ್ದು ದೊಡ್ಡ ಕುಟುಂಬ.

ತುಂಬಾ ಸರಳವಾಗಿ ಮದುವೆ ಮಾಡಿದ್ದು, ಲಾಕ್ ಡೌನ್ ನಿಯಮಗಳು ಉಲ್ಲಂಘನೆಯಾಗಿಲ್ಲ. ಕಾನೂನಿನ ಪ್ರಕಾರವೇ ಮದುವೆ ಮಾಡಿದ್ದಾರೆ.ಇದರ ಬಗ್ಗೆ ಚರ್ಚೆಅನಾವಶ್ಯಕ. ನವದಂಪತಿಗಳಿಗೆ ಶುಭಾಶಯಗಳು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಇನ್ನು ಸ್ವತಹ ಉಪಮುಖ್ಯಮಂತ್ರಿಗಳು ಮದುವೆ ಸಮಯದಲ್ಲಿ ಲಾಕ್ ಡೌನ್ ಉಲ್ಲಂಘನೆ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಕೇಳಿದ್ದರು. ಆದರೆ ಈಗ ಯಡಿಯೂರಪ್ಪನವರು ಏನೂ ಆಗಿಲ್ಲ ಎಲ್ಲವೂ ಸರಿಯಾಗಿದೆ ಎಂದು ಹೇಳುವುದರ ಮೂಲಕ ಆರೋಪಗಳಿಗೆ ಮಂಗಳ ಹಾಡಿದ್ದಾರೆ.