ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್..ಮದುವೆ ಸಂಭ್ರಮದ ಈ ಫೋಟೋಸ್ ನೋಡಿ..

Cinema News
Advertisements

ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ, ರೇವತಿ ಅವರೊಂದಿಗೆ ಇಂದು ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ರಾಮನಗರದ ಕೇತುಗಾನಹಳ್ಳಿ ಬಳಿ ಇರುವ ತೋಟದ ಮನೆಯ ಬಳಿ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ.

Advertisements

ಲಾಕ್ ಡೌನ್ ಹಿನ್ನಲೆಯಲ್ಲಿ ಮದುವೆ ಕೇತುಗನಹಳ್ಳಿಯ ಕುಮಾರಸ್ವಾಮಿಯವರ ಫಾರ್ಮ್ ಹೌಸ್ ಗೆ ಶಿಫ್ಟ್ ಆಗಿದ್ದು, ಅದ್ದೂರಿಯಾಗಿ ನಿರ್ಮಿಸಲಾಗಿದ್ದ ಕಲ್ಯಾಣ ಮಂಟಪದಲ್ಲಿ ಇಂದು ಬೆಳಿಗ್ಗೆ 9.30 ರಿಂದ 10.20ರ ವರೆಗೆ ನಡೆದ ಶುಭ ಮಹೂರ್ತದಲ್ಲಿ ನಿಖಿಲ್ ಅವರು ರೇವತಿಯವರಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡ ದಂಪತಿ ಹಾಗೂ ಕುಮಾರಸ್ವಾಮಿ ದಂಪತಿಗಳ ಸಮ್ಮುಖದಲ್ಲಿ ಸರಳವಾಗಿ ನಿಖಿಲ್ ರೇವತಿ ಸಪ್ತಪದಿ ತುಳಿದಿದ್ದು, ಹೆಚ್.ಡಿ.ರೇವಣ್ಣ ದಂಪತಿ, ಸಂಸದ ಪ್ರಜ್ವಲ್ ರೇವಣ್ಣ, ಸೇರಿದಂತೆ ಕುಟುಂಬದವರು, ಆಪ್ತರಷ್ಟೇ ಸರಳವಾಗಿ ನಡೆದ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.ಇನ್ನು ಇಂದು ಸಂಜೆಯೇ ಸೊಸೆಯನ್ನ ಕುಮಾರಸ್ವಾಮಿಯವರು ಮನೆ ತುಂಬಿಸಿಕೊಳ್ಳಲಿದ್ದು ಕುಟುಂಬದ ಆಪ್ತರಷ್ಟೇ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.