ದೊಡ್ಡ ಗೌಡರ ಮನೆಯಲ್ಲಿ ಅರಿಶಿನ ಚಪ್ಪರ ಶಾಸ್ತ್ರದ ಸಂಭ್ರಮ..

Cinema News
Advertisements

ಕೊರೋನಾ ಹಿನ್ನಲೆಯೆಲ್ಲಿ ರಾಮನಗರದ ಬಳಿ ಇರುವ ಜಾನಪದ ಲೋಕದ ಬಳಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ನಿಖಿಲ್ ಮದುವೆ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಬಳಿಕ ನಿಗದಿ ಆದ ದಿನಾಂಕದಂದೇ ಸರಳವಾಗಿ ಕುಮಾರಸ್ವಾಮಿಯವರ ಮನೆಯ ಬಳಿಯೇ ಮದುವೆ ಮಾಡಲು ದೊಡ್ಡ ಗೌಡರು ನಿರ್ಧಾರ ಮಾಡಿದ್ದರು. ಆದರೆ ಬೆಂಗಳೂರು ಕೊರೋನಾ ರೆಡ್ ಜೋನ್ ಲಿಸ್ಟ್ ನಲ್ಲಿ ಬಂದ ಕಾರಣ ಮತ್ತೆ ರಾಮನಗರಕ್ಕೆ ಮದುವೆ ಶಿಫ್ಟ್ ಆಯಿತು.

Advertisements

ಹೌದು, ರಾಮನಗರದ ಕೇತಗಾನಹಳ್ಳಿ ಬಳಿ ಇರುವ ತೋಟದ ಮನೆ ಬಳಿ ನಿಖಿಲ್ ಹಾಗೂ ರೇವತಿಯವರ ಮದುವೆಯ ಸಂಭ್ರಮ ಜೋರಾಗಿಯೇ ನಡೆದಿದೆ. ಲಾಕ್ ಡೌನ್ ಇರುವದರಿಂದ ಎರಡೂ ಕುಟುಂಬದ ಕಡೆಯವರಿಂದ ೭೦ ರಿಂದ ೧೦೦ ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇನ್ನು ನೆನ್ನೆ ಅರಿಶಿನ ಶಸ್ತ್ರ, ಚಪ್ಪರ ಪೂಜೆಯ ಕಾರ್ಯಕ್ರಮಗಳು ನೆರವೇರಿವೆ. ಇನ್ನು ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಗೆಹೆಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅರಿಶಿನದ ನೀರನ್ನ ಹಾಕಿ ಆಶೀರ್ವಾದ ಮಾಡಿದ್ದಾರೆ. ಇನ್ನು ಅರಿಶಿನ ಶಾಸ್ತ್ರದ ಕಾರ್ಯಕ್ರಮದಲ್ಲಿ ವಧು ರೇವತಿ ತಿಳಿ ಬಿಳಿ ಬಣ್ಣದ ಸೀರೆ ಉಟ್ಟು ಕಂಗೊಳಿಸಿದ್ದಾರೆ.

ಇನ್ನು ನೆನ್ನೆ ಚಪ್ಪರ ಶಾಸ್ತ್ರವಾದ ಕಾರಣ ಕುಮಾರಸ್ವಾಮಿ ಅವರ ಮನೆ ಮುಂದೆ ಭರ್ಜರಿಯಾಗಿ ಚಪ್ಪರ ಹಾಕಿದ್ದು ಚಪ್ಪರ ಪೂಜೆಯನ್ನ ನಿಖಿಲ್ ಕುಮಾರಸ್ವಾಮಿ ನೆರವೇರಿಸಿದ್ದರು. ಚಪ್ಪರ, ಅರಿಶಿನ ಶಸ್ತ್ರ ಸೇರಿದಂತೆ ಕೆಲವೊಂದು ಶಾಸ್ತ್ರಗಳು ವರ ನಿಖಿಲ್ ಅವರ ಮನೆಯಲ್ಲೇ ನಡೆದಿದ್ದು ಮಹೂರ್ತದ ಕಾರ್ಯಕ್ರಮ ಮಾತ್ರ ಇಂದು 9.30ರ ಸುಮಾರಿಗೆ ನಡೆಯಲಿದೆ ಎಂದು ಹೇಳಲಾಗಿದೆ.