ಮದುವೆಯ ಬಳಿಕ ಮೊದಲ ಬಾರಿಗೆ ಜನರ ಮುಂದೆ ಕಾಣಿಸಿಕೊಂಡ ನಿಖಿಲ್ ರೇವತಿ ಜೋಡಿ ಮಾಡಿದ್ದೇನು ನೋಡಿ

Cinema News
Advertisements

ಇತ್ತೀಚೆಗಷ್ಟೇ ದಾಂಪತ್ಯಜೀವನಕ್ಕೆ ಕಾಲಿಟ್ಟನಿಖಿಲ್ ಹಾಗೂ ರೇವತಿ ಜೋಡಿ ಮದುವೆ ಬಳಿಕ ಹೊರಗಡೆಯಾಗಲಿ, ಮಾಧ್ಯಮಗಳ ಮುಂದೆ ಆಗಲಿ ಕಾಣಿಸಿಕೊಂಡಿರಲಿಲ್ಲ. ಲಾಕ್ ಡೌನ್ ಇದ್ದ ಹಿನ್ನಲೆಯಲ್ಲಿ, ಏಪ್ರಿಲ್ ೧೭ರಂದು ರಾಮನಗರದ ಕೇತುಗಾನಹಳ್ಳಿ ಬಳಿ ಇರುವ ಕುಮಾರ ಸ್ವಾಮಿಯವರ ತೋಟದ ಮನೆ ಬಳಿ ಸರಳವಾಗಿ ನಿಖಿಲ್ ವಿವಾಹನೆರವೇರಿತ್ತು.

Advertisements

ಕೊರೋನಾ ಹಬ್ಬುವ ಹಿನ್ನಲೆಯಲ್ಲಿ ಕೇವಲ ಕುಟುಂಬದವರು, ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು. ಇನ್ನು ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡಿಲ್ಲ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘಿಸಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿತ್ತು.ಇನ್ನು ಮದುವೆಯಾದ ಬಳಿಕ ಕಾಣಿಸಿಕೊಳ್ಳದ ಈ ಜೋಡಿ ಈಗ ಇದ್ದಕಿದ್ದಂತೆ ರಾಮನಗರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು, ರಾಮನಗರದ ಜನರು ಸಂಕಷ್ಟದಲ್ಲಿ ಇದ್ದಾರೆ ಎಂದು ನಟ ರಾಜಕಾರಣಿ ನಿಖಿಲ್ ತಮ್ಮ ಮಡದಿ ರೇವತಿಯವರ ಜೊತೆಗೆ ರಾಮನಗರಕ್ಕೆ ಬಂದಿದ್ದು, ಸಂಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ. ಇನ್ನು ಇದೆ ಸಂಧರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್, ರೇವತಿ ಎಲ್ಲರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಲಾಕ್ ಡೌನ್ ಇದ್ದ ಕಾರಣ ನಿಖಿಲ್ ಮದುವೆಯನ್ನ ಅಂದುಕೊಂಡಂತೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಮದುವೆ ಆದ ನಂತರ ಮೊದಲ ಬಾರಿಗೆ ಜನರ ಮುಂದೆ ಬಂದಿದ್ದು ನಿಖಿಲ್ ರೇವತಿ ಜೋಡಿ ಬಡವರಿಗೆ ಆಹಾರ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ. ಇನ್ನು ಮುಂದೆಯೂ ರಾಮನಗರ ಜಿಲ್ಲೆಯ ಸಂಕಷ್ಟಕ್ಕೆ ನಿಲ್ಲುವುದಾಗಿ ಹೇಳಿರುವ ನಿಖಿಲ್, ನಾನು ಒಬ್ಬ ನಾಯಕ ನಟನಾಗಿ ಹೇಳುವುದಾದರೆ ಸಿನಿಮಾ ರಂಗದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರಿಂದಲೇ ಚಿತ್ರರಂಗ ಉಳಿದಿರುವುದು. ನಾನು ಕೂಡ ಈಗಾಗಲೇ ಅವರಿಗೆ ಸಹಾಯ ಮಾಡಿದ್ದೇನೆ (ನಿಖಿಲ್ ಸಿನಿಮಾ ಕಾರ್ಮಿಕರಿಗಾಗಿ 32ಲಕ್ಷಗಳ ಸಹಾಯ ಮಾಡಿದ್ದರು) ಸರ್ಕಾರ ಕೂಡ ಚಿತ್ರರಂಗದ ಕಾರ್ಮಿಕರ ಸಂಕಷ್ಟಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.