ರಾತ್ರಿ ಎರಡು ಗಂಟೆಯಾದ್ರೂ ನಿದ್ದೆ ಬರುತ್ತಿಲ್ಲವಾ ! ಹಾಗಾದ್ರೆ ಹೀಗೆ ಮಾಡಿ..ಕ್ಷಣ ಮಾತ್ರದಲ್ಲಿ

Health

ನೀವು ನಿದ್ದೆ ಇಂದ ವಂಚಿಂತರಾಗಿದ್ದೀರಾ, ಎಷ್ಟು ಹರ ಸಾಹಸ ಮಾಡಿದರು ನಿದ್ರಾ ದೇವಿ ನಿಮ್ಮ ಬಳಿ ಸುಳಿಯುತ್ತಿಲ್ಲವಾ.? ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ, ನಿಮಷಗಳಲ್ಲಿ ನಿದ್ದೆ ಹೋಗುವ ಸುಲಭವ ಮಾರ್ಗವನ್ನು ನಿಮ್ಮದಾಗಿಸಿಕೊಳ್ಳಿ. ಕೆಲವು ಮಂದಿ ಹಾಸಿಗೆಗೆ ಹೋದ ಕೂಡಲೇ ನಿದ್ದೆ ಮಾಡುತ್ತಾರೆ, ಇನ್ನು ಒಂದಷ್ಟು ಮಂದಿ ಇದ್ದರೆ ಅರ್ಧ ಗಂಟೆಯದರು ನಿದ್ದೆ ಬರದೇ ನಿದ್ದೆಯಿಂದ ವಂಚಿತರಾಗುತ್ತಾರೆ. ಹೀಗೆ ಹಾಸಿಗೆ ಏರಿದ ತಕ್ಷಣ ನಿದ್ದೆ ಮಾಡುವವರು ಪಣ್ಯವಂತರು ಎಂದು ಆಡು ಭಾಷೆಯಲ್ಲಿ ಹೇಳುವುದು ಉಂಟು. ಇನ್ನು ಒಂದಷ್ಟು ಜನ ಇದ್ದಾರೆ ಅವರುಗಳಿಗೆ ಸಂತೆಯಲ್ಲೂ ನಿದ್ದೆ. ಅದೆಂತ ಸ್ಥಳದಲ್ಲಿ ಇದ್ದರು ಕೂತಲ್ಲೇ ಗೊರಕೆಯನ್ನು ಶಿಳ್ಳೆಯಂತೆ ಹೊಡೆಯುತ್ತಾರೆ. ಇಂತವರು ನಿದ್ರೆಯಲ್ಲಿ ಸುಖಪಡುವ ಮನುಷ್ಯರು.

ಒಬ್ಬ ಆರೋಗ್ಯವಂತ ಮನುಷ್ಯ ಕಡಿಮೆ ಎಂದರು ಎಂಟು ಗಂಟೆ ನಿದ್ದೆ ಮಾಡಬೇಕು ಎಂದು ವೈದ್ಯರು ಸಲಹೆ ಕೊಡುತ್ತಾರೆ. ಹೀಗೆ ಎಂಟು ಗಂಟೆ ನಿದ್ದೆ ಮಾಡುವುದರಿಂದ ಆರೋಗ್ಯ ಅಭಿರುದ್ದಿಯಾಗಿ, ನಿಶ್ಚಿಂತೆ ಇಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗೆ ನಿದ್ದೆಯೇ ಬರದೇ, ಅತೀ ಕಮ್ಮಿ ಹೊತ್ತು ನಿದ್ದೆ ಮಾಡುವವರಿಗೆ ಸುಲಭವಾದ ಟಿಪ್ಸ್ ಇಲ್ಲಿದೆ.

*ಸ್ನೇಹಿತರೆ ಒತ್ತಡ, ಚಿಂತೆ, ಆತಂಕಗಳು ಇಲ್ಲದೆ ಇರುವವರು ಯಾರಿದ್ದಾರೆ. ಒಳ್ಳೆಯ ನಿದ್ದೆ ಬರಲು ಹಾಗೂ ಮಾಡಲು ಮೊದಲಿಗೆ ತಿಳಿಯಾದ ಮನಸು ಇರಬೇಕು. ಇಂತಹ ಮನಸಿನಲ್ಲಿ ಚಿಂತೆ ಇರಬಾರದು. ಆಫೀಸ್ನಲ್ಲಿ ಕೆಲಸ ಮಾಡುವರು ಆ ಕೆಲಸದ ಒತ್ತಡಗಳನ್ನು ಆಫೀಸ್ನಲ್ಲಿಯೇ ಬಿಟ್ಟು ಮನೆಗೆ ಬರುವುದು ಉತ್ತಮ. ಇದರಿಂದ ಮನ್ಸಶಾಂತಿ ಸಿಗುತ್ತದೆ ಇಲ್ಲವಾದಲ್ಲಿ ಕಿರಿಕಿರಿ. ಮನೆಯ ಸದಸ್ಯರೂಗಳೊಂದಿಗೆ ಉತ್ತಮ ಸಂಬಂದವನ್ನು ಇಟ್ಟುಕೊಳ್ಳುವುದು ಅವಶ್ಯಕ.

*ನಿದ್ದೆ ಮಾಡಲು ಹಾಸಿಗೆಗೆ ಬರುವ ಮುನ್ನ ಒಂದು ಲೋಟ ಬೆಚ್ಚನೇ ನೀರನ್ನು ಕುಡಿದು ಬಂದರೆ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ. ನಾವು ರಾತ್ರಿ ಊಟ ಮಾಡಿದ ನಂತರ ಕೆಲವೊಮ್ಮೆ ಹೊಟ್ಟೆ ಉಬ್ಬುತ್ತದೆ, ಇದರಿಂದ ನಿದ್ದೆ ಕುಂಟಿತವಾಗುತ್ತದೆ. ರಾತ್ರಿ ಹೊತ್ತು ಆದಷ್ಟು ಕಮ್ಮಿ ಆಹಾರ ಸೇವನೆ ಉತ್ತಮ. ನಮ್ಮ ರಾತ್ರಿ ನಿದ್ದೆಗು ಊಟದ ಸಮಯಕ್ಕು 1 ಗಂಟೆ ಅಂತರ ಇರಬೇಕು. ಉದಾಹರಣೆಗೆ 9 ಗಂಟೆಯ ಒಳಗೆ ಊಟ ಮುಗಿಸಿಕೊಂಡು ಒಂದು ಗಂಟೆ ಅಂತರ ಕೊಟ್ಟು ಮಲಗುವ ಅರ್ಧ ಗಂಟೆ ಮುನ್ನ ಬೆಚ್ಚನೇ ನೀರು ಕುಡಿದು ಮಲಗಿದರೆ ಉತ್ತಮ. ಹೀಗೆ ಮಾಡುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ, ಬೇಗ ಜೀರ್ಣವಾದರೆ ನಿದ್ದೆ ಬೇಗ ಬರುತ್ತದೆ.

*ಬೇಗನೆ ಮಲಗಿ ಬೇಗ ಏಳಬೇಕು. ಇದು ಹಿಂದಿನಿಂದ ನಮ್ಮ ಹಿರಿಯರು ಹೇಳುತ್ತಲೇ ಬರುತ್ತಿರುವ ಮಾತು.
ಮುಂಜಾನೆ ಎದ್ದ ಕೂಡಲೇ ಒಂದು ಲೀಟರ್ ನೀರು ಕುಡಿಯಬೇಕು, ಕುಡಿದು ಸಹಜ ಕೆಲಸ ಮುಗಿಸಿಕೊಂಡು. ಕಮ್ಮಿಯೆಂದರೂ ಅರ್ಧ ಗಂಟೆ ಯೋಗ ಮಾಡುವ ಅಭ್ಯಾಸ ಇಟ್ಟುಕೊಂಡರೆ ಉತ್ತಮ. ಪ್ರಾಣಾಯಾಮದಿಂದ ನಿದ್ದೆಗೆ ದಾರಿ ಸಿಗುತ್ತದೆ.

*ಮಲಗುವ ಮುಂಚೆ 1 ಲೋಟ ಹಾಲು ಕುಡಿದು ಮಲಗಿದ್ರೆ ಒಳ್ಳೆ ನಿದ್ದೆ ಜೊತೆಗೆ ನೆಮ್ಮದಿಯು ಸಿಗುತ್ತದೆ. ಹಾಲು ಮನುಷ್ಯನ ಜೀರ್ಣಕ್ರಿಯೆಯಲ್ಲಿ ಅತ್ತ್ಯತ್ತಮ ಪಾತ್ರವಹಿಸುತ್ತದೆ.. ಅದೆಂತ ಊಟವನ್ನೇ ಮಾಡಿ, ಮಲಗುವ ಮುನ್ನ ಹಾಲು ಕುಡಿದು ಮಲಗಿದ್ರೆ ಸರಿಯಾದ ಕ್ರಮದಲ್ಲಿ ತಿಂದ ಊಟ ಜೀರ್ಣವಾಗಿ ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಸರಿಯಾಗಿ ನಿದ್ದೆ ಆದಲ್ಲಿ ಬೆಳಗಿನ ಮುಂಜಾನೆ ಎದ್ದಾಗ ಹೊಸ ಹುಮ್ಮಸು ಹೊರುಪು ಕೂಡ ಇರುತ್ತದೆ. ಸ್ನೇಹಿತರೇ, ಈ ಮೇಲೆ ತಿಳಿಸಿದ ಸುಲಭ ಕ್ರಮಗಳನ್ನ ದಿನನಿತ್ಯ ಪಾಲಿಸಿದ್ದೇ ಆದಲ್ಲಿ ಸುಖವಾದ ನಿದ್ದೆ ನಿಮ್ಮದಾಗುವುದು ಖಂಡಿತ.