ಕೈ ತುಂಬಾ ಸಿನಿಮಾಗಳಿದ್ರೂ ನಾನು ನಟಿಸೋದಿಲ್ಲ ಎಂದು ಗುಡ್ ಬೈ ಹೇಳಿದ್ದ ಸ್ಟಾರ್ ನಟಿ ! ಹಳ್ಳಿ ಸೇರಿ ಮಾಡ್ತಿರದೇನು ಗೊತ್ತಾ ?

Cinema

ಸ್ನೇಹಿತರೇ, ಬಣ್ಣದ ಲೋಕ ಎಂಬ ಮಾಯಾಲೋಕಕ್ಕೆ ಒಂದು ಬಾರಿ ಎಂಟ್ರಿ ಕೊಟ್ಟ ಮೇಲೆ ಮುಗಿತು ಅದರಿಂದ ತಪ್ಪಿಸಿಕೊಂಡು ಆಚೆ ಬರೋದು ತುಂಬಾ ಕಷ್ಟ. ಅದರಲ್ಲೂ ನಟ ನಟಿಯರು ಚಿತ್ರರಂಗದಲ್ಲಿ ಸ್ಟಾರ್ ಗಳಾಗಿಬಿಟ್ಟರೆ ಅದನ್ನ ಬಿಟ್ಟು ಬರಲು ಹೇಗೆ ಸಧ್ಯ ನೀವೇ ಹೇಳಿ. ಆದರೆ ಇಲ್ಲೊಬ್ಬ ನಟಿ ಮಾಡಿದ್ದೆ ಬೇರೆ. ಹೌದು, ಸಿನಿಮಾಗಳ್ಲಲಿ ನಟಿಸಲು ಸಾಲು ಸಾಲು ಅವಕಾಶಗಳು ಇದ್ದರೂ ಬಣ್ಣದ ಲೋಕಕ್ಕೆ ಬಾಯ್ ಬಾಯ್ ಹೇಳಿದ ಈ ನಟಿ ಈಗ ಹಳ್ಳಿಯೊಂದರಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗಾದ್ರೆ ಆ ನಟಿ ಯಾರು ಅವರು ಹಳ್ಳಿಯಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ ನೋಡೋಣ ಬನ್ನಿ..

ಡಾ. ರಾಜ್ ಕುಮಾರ್ ಜೊತೆ ಸೇರಿದಂತೆ ಆಗಿನ ಸ್ಟಾರ್ ನಂತರ ಜೊತೆ ನಟಿಸಿರುವ ಈ ನಟಿ ನಾನಿರುವುದೇ ನಿನಗಾಗಿ, ಧ್ರುವತಾರೆ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೇ ನಟಿ ದೀಪಾ. ಆಗಿನ ಕಾಲಕ್ಕೆ ಸ್ಟಾರ್ ನಟಿಯಾಗಿ ಮೆರೆದ ನಟಿಯರಲ್ಲಿ ಇವರೂ ಕೂಡ ಒಬ್ಬರಾಗಿದ್ದರು. ಮೂಲತಃ ಕೇರಳ ರಾಜ್ಯದ ಮೂಲದವರಾದ ನಟಿ ದೀಪಾ ಹೆಚ್ಚಾಗಿ ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕೇರಳದಲ್ಲಿ ಇವರಿಗೆ ಉನ್ನಿ ಮೇರಿ ಎಂಬ ಹೆಸರಿದೆ. ಇನ್ನು ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಮಯದಲ್ಲೇ ೧೯೮೨ರಲ್ಲಿ ಕಾಲೇಜಿನ ಪ್ರೊಫೆಸರ್ ಆಗಿದ್ದ ರೆಜೊರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮದುವೆಯ ಬಳಿಕ ಬಹುತೇಕ ನಟಿಯರು ಸಿನಿಮಾದಿಂದ ದುರುವಾಗುವುದು ಮಾಮೂಲಿಯೇ. ಆದರೆ ನಟಿ ದೀಪಾ ಅವರಿಗೆ ಮದುವೆಯಾದ ಬಳಿಕವೂ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಮತ್ತಷ್ಟು ಸಿನಿಮಾ ಅವಕಾಶಗಳು ಅವರ ಕೈನಲ್ಲಿದ್ದವು.

ಆದರೆ ಇದ್ದಕಿದ್ದಂತೆ ೧೯೯೨ರಲ್ಲಿ ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಇನ್ನು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ ನಿರ್ಧಾರದ ಬಳಿಕ ಹೊಸದಾದ ಕೆಲಸಕ್ಕೆ ಮುಂದಾಗುತ್ತಾರೆ. ಹೌದು, ಸಮಾಜಿಕ ಕಳಕಳಿ ಹೊಂದಿರುವ ಕೆಲಸ ಮಾಡಲು ಮುಂದಾದ ನಟಿ ದೀಪಾ ಅವರು ಹಳ್ಳಿ ಮತ್ತು ಬುಡಕಟ್ಟು ಜನಾಂಗದವರ ಜೊತೆ ಬೆರೆತು ಅವರ ಜೀವನದ ಸಂಕಷ್ಟ ಪರಿಸ್ಥಿತಿಗಳ ಬಗ್ಗೆ ತಿಳಿಯುತ್ತಾರೆ. ಹಳ್ಳಿಯಲೆ ಉಳಿದುಕೊಳ್ಳುವ ನಟಿ ದೀಪಾ ಶಾಲೆಗೆ ಹೋಗದಿರುವ ಮಕ್ಕಳನ್ನ ಶಾಲೆಗೆ ಸೇರಿಸುವುದಾಗಲಿ, ಹಳ್ಳಿ ಹಾಗೂ ಬುಡಕಟ್ಟು ಜನಾಂಗದವರ ಆರೋಗ್ಯವನ್ನ ಗಮನದಲ್ಲಿಟ್ಟುಕೊಂಡು ಮೆಡಿಕಲ್ ಕ್ಯಾಂಪ್ ಗಳನ್ನ ಏರ್ಪಡಿಸೋದು ಹೀಗೆ ಹಳ್ಳಿಗರ ಕಷ್ಟ ಸುಖಗಳನ್ನ ಅರಿತು ಸುತ್ತ ಮುತ್ತ ಹಳ್ಳಿಗಳ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದಾರೆ.

ತಮ್ಮ ಕೈತುಂಬಾ ಸಾಲು ಸಾಲು ಸಿನಿಮಾ ಅವಕಾಶಗಳು ಇದ್ದರೂ ಕೂಡ ಅದೆಲ್ಲೇನವನ್ನ ಬಿಟ್ಟು ಹಳ್ಳಿಯ ಜನ ಹಾಗೂ ಬುಡಕಟ್ಟು ಜನಾಂಗದವರ ಅಭಿವೃದ್ದಿಗಾಗಿ ಶ್ರಮಿಸುತ್ತಾ ಸಾಮಾಜಿಕ ಸಕ್ರಿಯರಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಟಿ ದೀಪಾ ಅವರನ್ನ ಮಾಧ್ಯಮದವರೊಬ್ಬರು ನೀವು ಮತ್ತೆ ಚಂದನವಕ್ಕೆ ಬ್ಯಾಕ್ ಆಗಿ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆಗೆ, ನಾನು ಚಿತ್ರಗಗಳನ್ನ ನೋಡಿಯೇ ಹಲವಾರು ವರ್ಷಗಳೆ ಕಳೆದುಹೋಗಿವೆ. ಸಿನಿಮಗಳಲ್ಲಿ ನಟಿಸುವಂತಹ ಯಾವುದೇ ಆಸೆ ಈಗ ನನ್ನಲ್ಲಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿರುವ ಜನರ ಸೇವೆ ಮಾಡುವುದರಲ್ಲಿ ನನಗೆ ಸಂತೋಷವಿದೆ ಎಂದು ಹೇಳಿದ್ದಾರೆ. ನಟಿ ದೀಪಾ ಅವರು ಮತ್ತಷ್ಟು ಸಾಮಾಜಿಕ ಕೆಲಸಗಳನ್ನ ಮಾಡುವಂತಹ ಶಕ್ತಿ ಆ ದೇವರು ನೀಡಲಿ ಎಂಬುದೇ ನಮ್ಮ ಆಶಯ.