ಮೂಲವ್ಯಾಧಿ ಹೇಗೆ ಬರುತ್ತೆ ಗೊತ್ತಾ ? ಇಲ್ಲಿದೆ ನೋಡಿ ಸರಳ ಮನೆ ಮ’ದ್ದುಗಳು..

Advertisements

ಮೂಲವ್ಯಾಧಿ, ಪಿಸ್ತೂಲದಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆ ಆಗಿಬಿಟ್ಟೆವೆ. ಮೂಲವ್ಯಾಧಿ ಮತ್ತು ಇಂತಹ ಸಮಸ್ಯೆಗಳಿಗೆ ಮುಖ್ಯ ಕಾರಣ ಮಲಬದ್ಧತೆ, ಅಜೀರ್ಣ, ಗ್ಯಾಸ್ಟ್ರಿಯಾಟಿಸ್ ಸಮಸ್ಯೆಗಳು. ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಅತಿಯಾಗಿ ತಿನ್ನುವುದು, ಆಹಾರದಲ್ಲಿ ನಾರಿನ ಪದಾರ್ಥಗಳನ್ನು ಸೇವಿಸದೇ ಇರುವುದು, ಅಗತ್ಯಕ್ಕಿಂತ ಕಡಿಮೆ ನೀರು ಕುಡಿಯುವುದು, ಸರಿಯಾದ ಆಹಾರ ಕ್ರಮ ಪಾಲಿಸದೇ ಇರುವುದು ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಮೂಲಕ ಮೂಲವ್ಯಾಧಿಗೂ ಕಾರಣವಾಗುತ್ತದೆ. ಅಲ್ಲದೆ ಹೊಟ್ಟೆಯ ಭಾಗಕ್ಕೆ ಒತ್ತಡ ಬೀಳುವುದು, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೇಯಿರುವುದು ಕೂಡ ಮೂಲವ್ಯಾಧಿಗೆ ಕಾರಣವಾಗುತ್ತದೆ.

[widget id=”custom_html-4″]

ಪುರುಷರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ ಮತ್ತು ಮಹಿಳೆಯರಲ್ಲಿ ಮುಖ್ಯವಾಗಿ ಹೆರಿಗೆಯ ಸಮಯದಲ್ಲಿ ಹೊಟ್ಟೆಯ ಭಾಗದ ಒತ್ತಡದಿಂದ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಮೂಲವ್ಯಾಧಿಗೆ ಮನೆ ಮ’ದ್ದನ್ನ ಮಾಡೋದು ಹೇಗೆ ಅಂತ ನೋಡೋಣ ಬನ್ನಿ..

ಕಲ್ಲು ಸಕ್ಕರೆ : ಒಂದು ಲೋಟ ನೀರಿಗೆ ಕಲ್ಲು ಸಕ್ಕರೆ, ಒಣ ದ್ರಾಕ್ಷಿ ಸೇರಿಸಿ ಒಂದು ರಾತ್ರಿ ಬಿಡಬೇಕು. ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಇದರ ಜೊತೆಗೆ ಒಂದು ಚಮಚ ಕಾಮ ಕಸ್ತೂರಿ ಬೀಜ ನೆನೆಸಿ ಸೇವಿಸುವುದರಿಂದ ಅದ್ಭುತ ಪರಿಣಾಮ ಕಾಣಬಹುದು.

ಇನ್ನು ಮೆಂತ್ಯ ದೇಹಕ್ಕೆ ತಂಪು. ಜೀರ್ಣಕ್ರಿಯೆಗೆ ಉತ್ತಮ. ಮೆಂತ್ಯವನ್ನು ಹುರಿಯದೆ ಹಾಗೆ ಹಸಿಯಾಗಿ ಪುಡಿಮಾಡಿ ಒಂದು ಲೋಟ ಮಜ್ಜಿಗೆಯಲ್ಲಿ ಒಂದು ಚಮಚ ಬೆರೆಸಿ ಕುಡಿಯುವುದರಿಂದ ಗಾಷ್ಟ್ರಿಕ್ ಸಮಸ್ಯೆ ದೂರವಾಗುವುದು. ಅಲ್ಲದೆ ಮೂಲವ್ಯಾಧಿಯು ಗುಣವಾಗುತ್ತದೆ.

[widget id=”custom_html-4″]

Advertisements

ಲೋಳೆರಸ : ಲೋಳೆ ಎಲೆಯ ಮಧ್ಯಭಾಗದ ಬಿಳಿ ಬಣ್ಣದ ಜೆಲ್ ಅನ್ನು ತೆಗೆದು ಇದನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರ’ಕ್ತ ಸ್ತ್ರಾ’ವ ನಿಲ್ಲುತ್ತದೆ.

ಅವಲಕ್ಕಿ : ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ನೆನೆಸಿ ಅದಕ್ಕೆ ಹುಳಿ ಇಲ್ಲದ, ಆಗ ತಾನೇ ತಯಾರಿಸಿದ ಫ್ರೆಶ್ ಮೊಸರನ್ನು ಸೇರಿಸಿ ಚೆನ್ನಾಗಿ ಕಲಸಿ ಕಾಲಿ ಹೊಟ್ಟೆಯಲ್ಲಿ ಬೆಳಗ್ಗೆ , ಮಧ್ಯಾನ ಅಥವಾ ಸಂಜೆ ಯಾವುದೇ ಸಮಯ ಸೇವಿಸಿ ಬಹುದು. ಈ ಮೇಲಿನ ಮನೆ ಮದ್ದುಗಳನ್ನು ಉಷ್ಣ ಶರೀರದವರು ಯಾವುದೇ ತೊಂದರೆ ಇಲ್ಲದೇ ಉಪಯೋಗಿಸ ಬಹುದು. ಅವೆಲ್ಲವೂ ದೇಹಕ್ಕೆ ತಂಪಾದ ಪದಾರ್ಥಗಳು. ಇನ್ನು ಶೀತ ಶರೀರ ಹೊಂದಿರುವವರು ಕೆಳಕಂಡ ಮನೆಮದ್ದು ಉಪಯೋಗಿಸುವುದು ಉತ್ತಮ. ಶೀತ ಶರೀರ ಉಳ್ಳವರು ಮೂಲಂಗಿಯನ್ನು ತುರಿದು ಮೊಸರಿನೊಂದಿಗೆ ಬೆರೆಸಿ ಊಟಕ್ಕೆ ಮೊದಲು ಸೇವಿಸಬೇಕು. ಬೆಳ್ಳಗೆ ಮಧ್ಯಾಹ್ನ ಮತ್ತು ರಾತ್ರಿಯ ಸಮಯ ಸೇವಿಸಬೇಕು.

ಮುಟ್ಟಿದರೆ ಮುನಿ, ಗರಿಕೆ ಕಷಾಯ : ಮುಟ್ಟಿದರೆ ಮುನಿ ಅಥವಾ ಗರಿಕೆ ಯನ್ನು ಚೆನ್ನಾಗಿ ತೊಳೆದು ಇದರ ಕಷಾಯ ತಯಾರಿಸಿ ಕುಡಿಯುವುದು ರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ. ಉರಿ ಊತ ರಕ್ತ ಸ್ರಾವ ಕಡಿಮೆಯಾಗುತ್ತದೆ.

ಬೀಟ್ ರೂಟ್ ಜ್ಯೂಸ್ : ಕ್ಯಾರೆಟ್ ಅಥವಾ ಬೀಟ್ ರೂಟ್ ರಸಕ್ಕೆ ಬ್ಲಾಕ್ ಸಾಲ್ಟ್ ಸೇರಿಸಿ ಕುಡಿಯುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.

ತುಪ್ಪ : ರಾತ್ರಿ ಮಲಗುವ ಮುನ್ನ ಸ್ವಲ್ಪ ಬಿಸಿ ನೀರಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಮಲ ಬದ್ಧತೆ ಮಾಯವಾಗುತ್ತದೆ. ಈ ಮನೆ ಮದ್ದುಗಳ ಜೊತೆ ಕೆಲ ಆಹಾರ ಪದ್ಧತಿಯ ಅನುಸರಿಸುವುದು ಮುಖ್ಯ. ಗಟ್ಟಿಯಾದ ಆಹಾರ ಪದಾರ್ಥಗಳು, ಎಣ್ಣೆಯಲ್ಲಿ ಕರೆದ ತಿಂಡಿಗಳು, ಮಸಾಲ ತಿಂಡಿಗಳು, ಚಕ್ಕೆ ಲವಂಗ ಮೆಣಸು ಹಸಿ ಮೆಣಸಿನ ಕಾಯಿ ಹಾಕಿ ತಯಾರಿಸಿದ ಆಹಾರ ಇವುಗಳನ್ನು ಸೇವಸಿಬಾರದು. ನಿಮ್ಮ ದೇಹಕ್ಕೆ ಸಾಕಾಗುವಷ್ಟು ನೀರು ಕುಡಿಯಬೇಕು. ಬೆಳಗ್ಗೆ ಸ್ವಲ್ಪವಾದರೂ ವ್ಯಾಯಾಮ ಮಾಡಬೇಕು. ಹೆಚ್ಚು ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಸೇವಿಸಬೇಕು. ಹಣ್ಣುಗಳನ್ನು ತಿನ್ನಬೇಕು. ಇದರ ಬಳಿಕವೂ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದಾದರೆ ಕೂಡಲೇ ನುರಿತ ತಜ್ಞರನ್ನು ಸಂಪರ್ಕಿಸಿ. ಇದು ಒಂದು ಗಂಭೀರ ಕಾ’ಯಿಲೆಯಾಗಿದ್ದು ಇದರ ನಿರ್ಲಕ್ಷ ನಿಮ್ಮ ಪ್ರಾ’ಣವನ್ನು ಬ’ಲಿ ತೆಗೆದುಕೊಳ್ಳಬಹುದು.