80ಕೋಟಿ ಜನರಿಗೆ ಈ ತಿಂಗಳವರೆಗೆ ಉಚಿತ ರೇಷನ್ ! ಎಲ್ಲರಿಗೂ ಉಚಿತ ವ್ಯಾಕ್ಸಿನ್ !ಮಹತ್ವದ ಘೋಷಣೆ ಮಾಡಿದ ಪ್ರಧಾನಿ ಮೋದಿ..

Kannada News

ಸ್ನೇಹಿತರೇ, ಕರ್ನಾಟಕ ಸೇರಿದಂತೆ ಇಡೀ ದೇಶದಾದ್ಯಂತ ಕೊರೋನಾದ ಎರಡನೇ ಅಲೆಯಿಂದಾಗಿ ಸಾಕಷ್ಟು ಸಾವು ನೋವುಗಳು ಉಂಟಾದವು. ಇನ್ನು ನಿಯಂತ್ರಣಕ್ಕಾಗಿ ದೇಶದ ಹಲವು ರಾಜ್ಯಗಳಲ್ಲಿ ರಾಜ್ಯಸರ್ಕಾರಗಳು ಲಾಕ್ ಡೌನ್ ಗೆ ಮೊರೆ ಹೋಗಿರುವುದು ನಮಗೆಲ್ಲರಿಗೂ ಗೊತ್ತಿರುವುದೇ. ಇನ್ನು ಈ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದ ಕಾರಣ ಜನರು ಸಂಕಷ್ಟದ ಪರಿಸ್ಥಿತಿಯಲಿದ್ದರು. ಇನ್ನು ಸರಿಯಾದ ಸಮಯಕ್ಕೆ ಲಸಿಕೆ ಕೂಡ ದೊರೆಯುತ್ತಿಲ್ಲ. ಖಾಸಗಿ ಆಸ್ಪತ್ರೆಗೆಳಿಗೆ ಹೋದ್ರೆ ಹಣ ಕೊಟ್ಟು ಲಸಿಕೆ ಪಡೆಯಬಹುದಾದ ಪರಿಸ್ಥಿತಿ ಎದುರಾಗಿತ್ತು. ಈಗ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭಾಷಣದಲ್ಲಿ ಮಾತನಾಡುತ್ತಾ ದೇಶದ ೮೦ ಕೋಟಿ ಜನರಿಗೆ ಉಚಿತ ರೇಷನ್ ಜೊತೆಗೆ ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಹಾಗಾದ್ರೆ ಎಲ್ಲಿಯವರೆಗೆ ಉಚಿತ ಪಡಿತರ ಕೊಡುತ್ತಾರೆ, ಯಾರಿಗೆಲ್ಲಾ ಉಚಿತ ಲಸಿಕೆ ಸಿಗಲಿದೆ ಎಂಬುದನ್ನ ನೋಡೋಣ ಬನ್ನಿ..

ಹೌದು, ಪ್ರಧಾನಿ ಮೋದಿಯವರು ಇಂದು ದೇಶವನ್ನ ಉದ್ದೇಶಿಸಿ ಮಾತನಾಡಿದ್ದು, ಮಹತ್ವದ ಘೋಷಣೆಯೊಂದನ್ನ ಮಾಡಿದ್ದು, ಕೊರೊನದಂತಹ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬಡವರು ಹಸಿವಿನಿಂದ ಮಲಗಬಾರದು ಎಂದು ಈ ವರ್ಷದ ನವಂಬರ್ ತಿಂಗಳವರೆಗೆ ೮೦ಕೋಟಿ ಭಾರತೀಯರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ಮೋದಿಯವರು ಹೇಳಿದ್ದಾರೆ. ಅಂದರೆ ದೀಪಾವಳಿ ಹಬ್ಬದವರೆಗೆ ದೇಶದ 80ಕೋಟಿ ಜನರಿಗೆ ಉಚಿತ ಪಡಿತರ ಸಿಗುವುದು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ.

ಇನ್ನು ಲಸಿಕೆಯ ಬಗ್ಗೆಯೂ ಮಾತಾನಾಡಿರುವ ಮೋದಿ ಕೇಂದ್ರ ಸರ್ಕಾರವೇ ಲಸಿಕೆಯನ್ನ ಖರೀದಿ ಮಾಡಿ ಎಲ್ಲಾ ರಾಜ್ಯಗಳಿಗೂ ಉಚಿತವಾಗಿ ನೀಡಲಿದ್ದು ಭಾರತದ ಪ್ರತಿಯೊಬ್ಬ ನಾಗರೀಕನೂ ಕೂಡ ಉಚಿತ ಲಸಿಕೆಯನ್ನ ಪಡೆದುಕೊಳ್ಳಬಹುದಾಗಿದೆ ಎಂದು ಮೋದಿ ಹೇಳಿದ್ದಾರೆ. ಉಚಿತವಾಗಿ ಬೇಡವಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಲಸಿಕೆಯ ವೇಗ ಹೆಚ್ಚಿಸಲಿದ್ದು, ದೇಶದ ಹಲವು ಕಂಪನಿಗಳು ಲಸಿಕೆಯ ತಯಾರಿಕೆಯಲ್ಲಿ ತೊಡಗಿವೆ. ಇನ್ನು ಲಸಿಕೆಗೆ ಸಂಬಂಧಪಟ್ಟ ಹಾಗೆ ಮೂರೂ ಟ್ರಯಲ್ ಗಳು ನಡೆಯುತ್ತಿದ್ದು ಇದರಲ್ಲಿ ಸಫಲತೆ ಸಿಕ್ಕಿದಲ್ಲಿ ಭಾರತದ ಸರ್ಕಾರದ ಲಸಿಕೆ ಅಭಿಯಾನ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಸ್ನೇಹಿತರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..