ಏಪ್ರಿಲ್ 5 ರಾತ್ರಿ 9ಗಂಟೆಗೆ 9ನಿಮಿಷ ಈ ಕೆಲಸ ಮಾಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಂಡ ಮೋದಿ.?

News

ಕೊರೋನಾ ಸೋಂಕು ತಡೆಯುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನ ಕುರಿತು ಇಂದು ಮೂರನೇ ಬಾರಿಗೆ ಮಾತನಾಡಿದ್ದಾರೆ. ಇನ್ನು ಪ್ರಧಾನಿಯವರು ಪ್ರತೀ ಬಾರೀ ದೇಶದ ಜನತೆಗೆ ಸಂದೇಶ ಕೊಡಲು ಬಂದಾಗ ಎಲ್ಲರಲ್ಲೂ ಏನು ಹೇಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿರುತ್ತದೆ.

ಇನ್ನು ಕೊರೋನಾ ಕುರಿತಂತೆ ಮೊದಲ ಬಾರಿಗೆ ದೇಶದ ಜನರನ್ನ ಕುರಿತು ಮಾತನಾಡಿದ್ದ ಮೋದಿಯವರು ಮಾರ್ಚ್ ೨೨ರಂದು ಜನತಾ ಕರ್ಪ್ಯೂ ಏರಿದ್ದು, ಅಂದು ಸಂಜೆ ೫ಗಂಟೆಗೆ ಎಲ್ಲರೂ ಅವರ ಮನೆಯಗೇಟ್ ಅಥ್ವಾಬಾಲ್ಕನಿ ಮೇಲೆ ಬಂದು ಚಪ್ಪಾಳೆ ತಟ್ಟುವ ಮುಖಾಂತರ ನಮ್ಮೆಲ್ಲರ ಆರೋಗ್ಯಕ್ಕಾಗಿ ದುಡಿಯುತ್ತಿರುವ ವೈದ್ಯರು, ನರ್ಸ್ ಗಳು, ಪೊಲೀಸರು, ಪೌರ ಕಾರ್ಮಿಕರೆಲ್ಲರಿಗೂ ಧನ್ಯವಾದ ತಿಳಿಸಬೇಕೆಂದು ಕೇಳಿಕೊಂಡಿದ್ದರು.

ಬಳಿಕ ಎರಡನೇ ಬಾರಿಗೆ ದೇಶದ ೧೩೦ಕೋಟಿ ಪ್ರಜೆಗಳನ್ನ ಕುರಿತು ಮಾತನಾಡಿದ್ದ ಮೋದಿಯವರು ಕೊರೋನಾ ವೈರಸ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಏಪ್ರಿಲ್ ೧೪ರವರಿಗೂ ೨೧ದಿನ ಇಡೀ ದಿನ ಲಾಕ್ ಡೌನ್ ಘೋಷಣೆ ಮಾಡಿದ್ದರು.

ಈಗ ಇಂದು ದೇಶದ ಜನರನ್ನ ಉದ್ದೇಶಿಸಿ ಮಾತನಾಡಿದ ಮೋದಿಯವರು ಇದೆ ಏಪ್ರಿಲ್ ೫ ಭಾನುವಾರದಂದು ರಾತ್ರಿ 9 ಗಂಟೆಗೆ ಕೇವಲ 9ನಿಮಿಷಗಳ ಸಮಯವನ್ನ ನಮಗೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ಅಂದು ರಾತ್ರಿ ೯ ಗಂಟೆಗೆ ನಿಮ್ಮ ಮನೆಯ ಲೈಟ್ ದೀಪಗಳನಂ ಆರಿಸಿ, ಮನೆಯಿಂದ ಹೊರಬಂದು ಕ್ಯಾಂಡಲ್, ಟಾರ್ಚ್, ಮೊಬೈಲ್ ಫ್ಲಾಶ್ ಲೈಟ್, ದೀಪಗಳನ್ನ ೯ ನಿಮಿಷಗಳ ಕಾಲ ಹಚ್ಚಿ. ತಾಯಿ ಭಾರತಿಯನ್ನ ಪ್ರಾರ್ಥನೆ ಮಾಡಿ. ಇನ್ನು ಈ ದೀಪಗಳ ಬೆಳಕಿನಿಂದ ನಮ್ಮ ಮನಸ್ಸು ಗಟ್ಟಿಯಾಗಲಿದೆ.ಕೊರೋನಾ ವಿರುದ್ಧ ಹೋರಾಡಲು ಶಕ್ತಿ ನೀಡಲಿದೆ. ೧೩೦ಕೋಟಿ ಜನ ದೀಪವನ್ನ ಬೆಳಗಿಸಿ ದೇಶವನ್ನ ಗೆಲ್ಲಿಸಿ ಎಂದು ಜನರಲ್ಲಿ ಪ್ರಧಾನಿ ಮೋದಿಯವರು ಮನವಿ ಮಾಡಿಕೊಂಡಿದ್ದಾರೆ.

ಜೊತೆಗೆ ನಿಮ್ಮ ಮನೆಯ ಗೇಟ್, ಬಾಲ್ಕನಿ, ಟೆರೇಸ್ ಗಳ ಮೇಲೆ ದೀಪಗಳನ್ನ ಬೆಳಗಿಸಿ, ಮನೆಯಿಂದ ಹೊರಗಡೆ ಬರಬೇಡಿ, ರಸ್ತೆಗಳ ಮೇಲೆ ಬರಬೇಡಿ, ಸೋಷಿಯಲ್ ಡಿಸ್ಟೆನ್ಸ್ ಅನ್ನ ಉಲ್ಲಂಘನೆ ಮಾಡಬೇಡಿ ಎಂದು ಮೋದಿಯವರು ಮನವಿ ಮಾಡಿಕೊಂಡಿದ್ದಾರೆ. ಇನ್ನು ಮೋದಿಯವರ ಸಂದೇಶದ ಹಿಂದೆ ಇರುವ ಉದ್ದೇಶ ಜನರಲ್ಲಿ ಆತ್ಮ ಶಕ್ತಿ ತುಂಬುವುದು. ಇನ್ನು ಮೋದಿಯವರ ಈ ಸಂದೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..