ರೋಡಲ್ಲಿ ಒಬ್ಬಂಟಿಯಾಗಿ ತಿರುಗಾಡುತ್ತಿದ್ದ 10ವರ್ಷದ ಪುಟ್ಟ ಬಾಲಕ ! ಅಸಲಿ ವಿಷಯ ತಿಳಿದು ಕಣ್ಣೀರು ಹಾಕಿದ ಪೊಲೀಸ್ ಅಧಿಕಾರಿ.?

Inspire
Advertisements

ಸ್ನೇಹಿತರೇ, ನಿಮಗೆಲ್ಲಾ ಗೊತ್ತಿರುವ ಹಾಗೆ ಕಳೆದ ವರ್ಷ ಕೊರೋನಾ ಸೋಂಕಿನ ಕಾರಣದಿಂದಾಗಿ ಸುಮಾರು ಮೂರು ತಿಂಗಳುಗಳ ಕಾಲ ಇಡೀ ದೇಶದಾದ್ಯಂತ ಮಾಡಲಾಗಿತ್ತು. ಇನ್ನು ಈ ಸಮಯದಲ್ಲಿ ಹೆಚ್ಚು ತೊಂದರೆಗೆ ಒಳಗಾಗಿದ್ದು ಜನಸಾಮಾನ್ಯರು. ಇದರ ನಡುವೆಯೇ ಭಾವನಾತ್ಮಕವಾದ ಘಟನೆಗಳು ನಡೆದಿದ್ದು ಕೆಲವೊಂದು ಮಾತ್ರ ಬಹಿರಂಗವಾಗಿವೆ. ಅದರಲ್ಲಿ ಒಂದು ಹತ್ತು ವರ್ಷದ ಪುಟ್ಟ ಹುಡುಗನ ಈ ಸ್ಟೋರಿ..ಈ ಮುಸ್ಲಿಂ ಹುಡುಗನ ಕತೆಯನ್ನ ಕೇಳಿದ್ರೆ ನಿಮ್ಮ ಕಣ್ಣಲ್ಲೂ ಕೂಡ ತೇವ ಆಗುತ್ತೆ. ಹೌದು, ಲಾಕ್ ಡೌನ್ ವೇಳೆ ಸುಖಾ ಸುಮ್ಮನೆ ಮನೆ ಬಿಟ್ಟು ಯಾರೂ ಹೊರಗಡೆ ಬರಬಾರದು ಎಂಬ ಕಾನೂನನ್ನ ಮಾಡಲಾಗಿತ್ತು. ಇನ್ನು ಇದೆ ವೇಳೆ ಹತ್ತು ವರ್ಷದ ಪುಟ್ಟ ರಸ್ತೆಯಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ.

[widget id=”custom_html-4″]

ಆಗ ಕರ್ತವ್ಯದಲ್ಲಿದ್ದ ಮಹಾಂತೇಶ್ ಎನ್ನುವ ಕರ್ನಾಟಕದ ಮೂಲದವರಾದ ಪೊಲೀಸ್ ಅಧಿಕಾರಿ, ಯಾಕಪ್ಪಾ ಒಬ್ಬನೇ ಹೀಗೆ ಓಡಾಡುತ್ತಿದ್ದೀಯಾ..ನಿಮ್ಮ ಯಾರು ? ನಿಮ್ಮ ಮನೆ ಎಲ್ಲಿದೆ ಎಂದು ಪ್ರಶ್ನೆಗಳನ್ನ ಕೇಳಿದ್ದಾರೆ. ಆಗ ಆ ಪುಟ್ಟ ಬಾಲಕ ಕೊಟ್ಟ ಉತ್ತರ ನೋಡಿ ಆ ಪೊಲೀಸ್ ಆಧಿಕಾರಿ ಕಣ್ಣಲ್ಲಿ ಕಣ್ಣೀರು ಬಂದಿದೆ. ಪೊಲೀಸ್ ಅಧಿಕಾರಿ ಮಹಾಂತೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಗಾಬರಿಯಾದ ಆ ಹುಡುಗ ಭಯದಿಂದ ಕಣ್ಣೀರು ಹಾಕಿದ್ದಾನೆ. ಆಗ ಆ ಪೊಲೀಸ್ ಅಧಿಕಾರಿ ಅಳಬೇಡಪ್ಪಾ, ಭಯ ಬೀಳಬೇಡ.ನನ್ನನ್ನ ನಿನ್ನ ಫ್ರೆಂಡ್ ಅಂತ ತಿಳ್ಕೊ..ನಿಮ್ಮ ಅಪ್ಪ ಎಲ್ಲಿ..ನಿಮ್ಮ ಮನೆ ಎಲ್ಲಿದೆ ಹೇಳು ಎಂದು ಕೇಳಿದ್ದಾರೆ. ಆಗ ಧೈರ್ಯ ತೆಗೆದುಕೊಂಡ ಹತ್ತು ವರ್ಷದ ಆ ಹುಡುಗ ನಮ್ಮಪ ತೀರಿಕೊಂಡಿದ್ದಾರೆ.ಇಲ್ಲಿಯೇ ಹತ್ತಿರದಲ್ಲಿ ನಮ್ಮ ಮನೆ ಇದೆ. ಪಕ್ಕದ ರೋಡಿನಲ್ಲಿ ನಮ್ಮ ಸ್ನೇಹಿತನ ಮನೆಯಿದ್ದು ನಾನು ಓದಿಕೊಳ್ಳಲು ಅಲ್ಲಿಗೆ ಹೋಗುತ್ತಿದ್ದೇನೆ. ಇನ್ನು ನನ್ನ ಕೈನಲ್ಲಿರುವುದು ೫ನೇ ತರಗತಿಯ ಪಠ್ಯ ಪುಸ್ತಕಗಳು. ಇನ್ನು ನಾನು ದೊಡ್ಡವನಾಗಿ ಬೆಳೆದ ಮೇಲೆ ನಿಮ್ಮಂತಯೇ ಪೊಲೀಸ್ ಅಧಿಕಾರಿಯಾಗಬೇಕು ಎಂದು ಆ ಪುಟ್ಟ ಬಾಲಕ ಹೇಳುತ್ತಾನೆ.

[widget id=”custom_html-4″]

Advertisements

ಇನ್ನು ಆ ಹುಡುಗನ ಮಾತುಗಳನ್ನ ಕೇಳಿದ ಪೊಲೀಸ್ ಅಧಿಕಾರಿ ಮಹಾಂತೇಶ್ ಅವರಿಗೆ ತಮ್ಮ ಬಾಲ್ಯ ಜೀವನದ ಬಗ್ಗೆ ನೆನಪುಗಳು ಮರುಕಳಿಸಿದ್ದು ಭಾವುಕರಾಗಿದ್ದಾರೆ. ಬಳಿಕ ತಮ್ಮ ಜೇಬಿನಿಂದ ೧೦೦ರೂ ನ ನೋಟನ್ನ ತೆಗೆದು ಆ ಹುಡುಗನಿಗೆ ಕೊಟ್ಟು, ನೀನು ದೊಡ್ಡವನಾದ ಮೇಲೆ ನನ್ನಂತೆ ಪೊಲೀಸ್ ಅಧಿಕಾರಿ ಆಗಬೇಕಾದಎ ಈಗಿನಿಂದಲೇ ಕಷ್ಟಪಟ್ಟು ಚೆನ್ನಾಗಿ ಓದಬೇಕು ಎಂದು ಹೇಳುತ್ತಾರೆ. ಬಳಿಕ ತಮ್ಮ ತಲೆಯ ಮೇಲಿದ್ದ ಪೊಲೀಸ್ ಟೋಪಿಯನ್ನ ಆ ಹುಡುಗನ ತಲೆಯ ಮೇಲಿಟ್ಟು ಸೆಲ್ಫಿ ಫೋಟೋ ತೆಗೆದುಕೊಂಡು ಸಂತಸಪಟ್ಟಿದ್ದಾರೆ. ಇದೆಲ್ಲದರ ಬಳಿಕ ಆ ಪುಟ್ಟ ಬಾಲಕನನ್ನ ತಮ್ಮ ಜೀಪಿನಲ್ಲಿ ಕುಳ್ಳರಿಸಿಕೊಂಡು ಕರೆದುಕೊಂಡು ಹೋಗಿ ಆ ಹುಡುಗನ ಮನೆ ಬಳಿ ಬಿಟ್ಟು ಬಂದಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಯ ಈ ಉದಾರತೆಗೆ ನೆಟ್ಟಿಗರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.