ಚಪ್ಪಾಳೆ ತಟ್ಟಿದ ಜನ..ಯಥಾ ರಾಜ ತಥಾ ಪ್ರಜಾ ಎಂದು ವ್ಯಂಗ್ಯವಾಡಿದ ಪ್ರಕಾಶ್ ರಾಜ್.?

News

ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ವಿರುದ್ಧ ಹೊರೊಡುವ ಸಲುವಾಗಿ ನೆನ್ನೆ ಕರೆ ಕೊಟ್ಟಿದ್ದ ಜನತಾ ಕರ್ಪ್ಯೂ ಸಂಪೂರ್ಣ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಅಭೂತಪೂರ್ವ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅದೇ ದಿನ ಸಂಜೆ ೫ಗಂಟೆಯ ವೇಳೆಗೆ ಪ್ರಧಾನಿ ಅವರು ಹೇಳಿದಂತೆ ತಮ್ಮ ತಮ್ಮ ಮನೆಯ ಗೇಟ್ ಮುಂದೆ, ಬಾಲ್ಕನಿಗಳ ಮೇಲೆ ನಿಂತ ಜನ ತಟ್ಟೆ, ಜಾಗಟೆ ಹೊಡೆಯುವ ಮೂಲಕ, ಚಪ್ಪಾಳೆ ತಟ್ಟುವ ಮೂಲಕ ರಾತ್ರಿ ಹಗಲೆನ್ನದೆ ನಮಗೋಸ್ಕರ ದುಡಿಯುತ್ತಿರುವ ವೈದ್ಯರು, ನರ್ಸ್ ಗಳು, ಹಾಗೂ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ತಿಳಿಸಲಾಯಿತು.

ಆದರೆ ಅದೇ ರೀತಿ ಧನ್ಯವಾದ ತಿಳಿಸಿದ ವಿಡಿಯೋವೊಂದನ್ನ ಟ್ಯಾಗ್ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಯಥಾ ರಾಜ ತಥಾ ಪ್ರಜಾ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜನತಾ ಕರ್ಪ್ಯೂ ದಿನ ೫ ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ವೈದ್ಯರು, ನರ್ಸ್ ಗಳು ಹಾಗೂ ಇನ್ನಿತೆರೆ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿ ಎಂದು ಹೇಳಿದ್ದರು. ಆದರೆ ಅಹಮದಾಬಾದ್ ನ ಖಾದಿಯಾ ಪ್ರದೇಶದಲ್ಲಿದ್ದ ಜನರು ಮಾಡಿದ್ದೆ ಬೇರೆ. ಅವರೆಲ್ಲಾ ತಟ್ಟೆ, ಜಾಗಟೆಗಳನ್ನ ಹಿಡಿದು ಗುಂಪು ಗುಂಪಾಗಿ ಬೀದಿಗೆ ಇಳಿದಿದ್ರು. ಮೆರವಣಿಗೆ ನಡೆಸಿ ವೈದ್ಯರಿಗೆ ಧನ್ಯವಾದ ತಿಳಿಸಿದ್ರು.

ಆದರೆ ಅವರಿಗೆ ಗೊತ್ತಿಲ್ಲದಂತೆಯೇ ಜನತಾ ಕರ್ಪ್ಯೂ ಮೂಲ ಉದ್ದೇಶವೇ ಅಲ್ಲೇ ಮಣ್ಣು ಪಾಲಾಗಿತ್ತು. ಯಾವ ಉದ್ದೇಶಕ್ಕಾಗಿ ಜನತಾ ಕರ್ಪ್ಯೂ ಮಾಡಿ ಲಾಕ್ ಡೌನ್ ಮಾಡಲಾಗಿತ್ತೋ, ಅದರ ಉದ್ದೇಶವನ್ನೇ ಮರೆತ ಜನ ಗುಂಪು ಗುಂಪಾಗಿ ಬೀದಿಗೆ ಇಳಿದಿದ್ರು. ಇದು ಕೊರೋನಾ ಸೋಂಕು ಹರಡಲು ಕಾರಣವಾಗಬಹುದು ಎಂಬ ವಿಷಯವನ್ನೇ ಅವರು ಮರೆತುಬಿಟ್ಟಿದ್ದರು. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಇವರ ಪೆದ್ದುತನಕ್ಕಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಸದಾ ಪಧಾನಿ ನರೇಂದ್ರ ಮೋದಿಯವರ ಕಾರ್ಯಗಳನ್ನ ಟೀಕಿಸುತ್ತಲೇ ಬಂದಿರುವ ನಟ ಪ್ರಕಾಶ್ ರಾಜ್ ಅದೇ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಯಥಾ ರಾಜ, ತಥಾ ಪ್ರಜಾ ಎಂದು ವ್ಯಂಗ್ಯ ಭರಿತವಾಗಿ ಬರೆದುಕೊಂಡಿದ್ದಾರೆ.