ನಟಿ ಪ್ರಣೀತಾ ಮದ್ವೆಯಾಗಿರೋ ನಿತಿನ್ ನಿಜಕ್ಕೂ ಯಾರು? ಏನು ಮಾಡ್ತಿದ್ದಾರೆ ಗೊತ್ತಾ ?

Advertisements

ಸ್ನೇಹಿತರೇ, ಸ್ಯಾಂಡಲ್ವುಡ್ ನ ಸುಂದರ ಮೊಗದ ಚೆಲುವೆ ನಟಿ ಪ್ರಣೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹೊಸ ಜೀವನ ಪ್ರಾರಂಭ ಮಾಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚಿರುವ ಕನ್ನಡದ ಈ ನಟಿ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದು, ನಿತಿನ್ ರಾಜು ಎಂಬುವರೊಂದಿಗೆ ಕಳೆದ ಭಾನುವಾರದಂದು ಸಪ್ತಪದಿ ತುಳಿದಿದ್ದಾರೆ. ಕೊ’ರೋನಾ ಲಾಕ್ ಡೌನ್ ಇರೋ ಕಾರಣ ತುಂಬಾ ಸರಳವಾಗಿ ನಡೆದ ಈ ಮದುವೆಗೆ ಕೇವಲ ಕುಟುಂಬಸ್ಥರು ಮಾತ್ರ ಪಾಲ್ಗೊಂಡು ನವ ವಧು ವರರಿಗೆ ಶುಭಾಶಯ ಹೇಳಿದ್ದಾರೆ. ಇನ್ನು ಪ್ರಣೀತಾ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಆಗಿ ವೈರಲ್ ಆದಮೇಲೆ ನಟಿ ಪ್ರಣೀತಾ ಮದ್ವೆಯಾಗಿರುವುದು ಬಹಿರಂಗವಾಗಿದೆ.

[widget id=”custom_html-4″]

Advertisements

ಇನ್ನು ಪ್ರಣೀತಾ ಮದುವೆಯ ಫೋಟೋಗಳು ಈಗ ವೈರಲ್ ಆಗಿದ್ದು ನಟಿಯ ಅಭಿಮಾನಿಗಳು ಸೇರಿದಂತೆ ನಟ, ನಟಿಯರು ಹಾಗೂ ಆಪ್ತರು ಶುಭಾಶಯಗಳನ್ನ ಹೇಳಿದ್ದಾರೆ. ಇನ್ನು ಪ್ರಣೀತಾ ವರಿಸಿರುವ ವರ ಇನ್ ರಾಜು ಅವರ ಬಗ್ಗೆ ಅಭಿಮಾನಿಗಳಲ್ಲಿ ತುಂಬಾ ಕುತೂಹಲ ಮೂಡಿದೆ. ಸ್ನೇಹಿತರೊಬ್ಬರ ಮೂಲಕ ಇವರಿಬ್ಬರ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿ ಈಗ ಮದ್ವೆಯಾಗಿದ್ದಾರೆ ಹೇಳಲಾಗಿದೆ. ಇನ್ನು ವರ ನಿತಿನ್ ರಾಜು ಅವರು ಬುಜಿನೆಸ್ ಮೆನ್ ಎಂದು ಹೇಳಲಾಗಿದ್ದು, ಹಾಸ್ಪಿಟಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿದ್ದಾರೆ. ಇನ್ನು ನಿತಿನ್ ಅವರು ಬೆಂಗಳೂರಿನಲ್ಲಿರುವ ಮಾಲ್ ವೊಂದರ ಓನರ್ ಎಂದು ಹೇಳಲಾಗಿದ್ದು, ಬ್ಲೂ ಹಾರಿಜನ್ ಹೋಟೆಲ್ ಡೈರೆಕ್ಟರ್ ಕೂಡ ಆಗಿದ್ದಾರೆ. ಇನ್ನು ಇದರ ಜೊತೆಗೆ ಹಲವು ಸಂಸ್ಥೆಗಳ ನಿರ್ದೇಶಕರಾಗಿರುವ ಇವರು ನೂರಾರು ಜನರಿಗೆ ಕೆಲಸ ನೀಡಿ ಯಶಸ್ವಿ ಉದ್ಯಮಿಯಾಗಿ ಖ್ಯಾತಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

[widget id=”custom_html-4″]

ಇನ್ನು ಮೊನ್ನೆ ಭಾನುವಾರವಷ್ಟೇ ಕನಕಪುರ ರಸ್ತೆ ಬಳಿ ಇರೋ ಪ್ರೈವೇಟ್ ರೆಸಾರ್ಟ್ ವೊಂದರಲ್ಲಿ ತುಂಬಾ ಸರಳವಾಗಿ ಮದುವೆಮಾಡಿಕೊಂಡಿದ್ದಾರೆ ನಟಿ ಪ್ರಣೀತಾ. ಸಾಮಾಜಿಕ ಕೆಲಸಗಳಲ್ಲಿಯೂ ಸೈ ಎನಿಸಿಕೊಂಡಿರುವ ನಟಿ ಪ್ರಣೀತಾ ಇದುವರೆಗೂ ತಾವು ಮದುವೆಯಾಗುತ್ತಿರುವ ಬಗ್ಗೆಯಾಗಲಿ, ಹುಡುಗ ಯಾರು ಎಂಬುದರ ಬಗೆಯಾಗಲಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇವರ ಮದುವೆಗೆ ಹೋಗಿದ್ದ ಸ್ನೇಹಿತರೊಬ್ಬರು ಪೋಸ್ಟ್ ಮಾಡಿದ ಫೋಟೋಗಳಿಂದಾಗಿ ಪ್ರಣೀತಾ ಮದುವೆ ಬಗ್ಗೆ ಬಹಿರಂಗವಾಗಿದೆ. ಇನ್ನು ಕೊ’ರೋನಾ ಇದ್ದ ಕಾರಣ ನಾನು ಮದ್ವೆಯಾಗುತ್ತಿರುವುದರ ಬಗ್ಗೆ ಹೇಳುವುದ್ಕಕೆ ಆಗಲಿಲ್ಲ, ದಯವಿಟ್ಟು ನನ್ನನ್ನ ಕ್ಷಮಿಸಿ, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ ನಟಿಗಿ ಪ್ರಣೀತಾ..