ಭಾರತೀಯ ಚಿತ್ರರಂಗವೇ ಶೇಕ್ ಆಗುವಂತೆ ಮಾಡಿದ ಪ್ರಶಾಂತ್ ನೀಲ್ ನಿಜಕ್ಕೂ ಯಾರು.!ಹೆಂಡತಿ ಮಕ್ಕಳು ಹೇಗಿದ್ದಾರೆ ನೋಡಿ..

Advertisements

ನಮಸ್ತೇ ಸ್ನೇಹಿತರೇ, ಕೆಜಿಎಫ್ ಚಾಪ್ಟರ್ 2 ಚಿತ್ರ ಈಗ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇಡೀ ದೇಶದಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹವಾ ಜೋರಾಗಿದ್ದು, ಸಿನಿಮಾ ನೋಡಿದವರೆಲ್ಲಾ ಇದು ಇಂಡಿಯನ್ ಸಿನಿಮಾದ ಮಾಸ್ಟರ್ ಪೀಸ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಡೀ ಭಾರತೀಯ ಸಿನಿಮಾರಂಗವೇ ಕನ್ನಡ ಸಿನಿಮಾರಂಗದತ್ತ ನೋಡುವಂತೆ ಮಾಡಿದೆ ಕೆಜಿಎಫ್. ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಇನ್ನು ಇದಲ್ಲದೆ ಕ್ರೆಡಿಟ್ ಎಲ್ಲಾ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸೇರಬೇಕು. ಅಸಲಿಗೆ ಕೆಜಿಎಫ್ ನ ರಿಯಲ್ ಹೀರೊ ಎಂದರೆ ಅದು ಪ್ರಶಾಂತ್ ನೀಲ್. ಹೌದು, ಈಗ ಪ್ರಶಾಂತ್ ನೀಲ್ ಅವರು ಇಂಡಿಯನ್ ಸಿನಿಮಾದ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಕೆಜಿಎಫ್ ಸೀಕ್ವೆಲ್ ಸಿನಿಮಾ ಮೂಲಕ ಇಷ್ಟೆಲ್ಲಾ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ನಮ್ಮ ನಿರ್ದೇಶಕ ಪ್ರಶಾಂತ್ ನೀಲ್ ಅವರ ವೈಯುಕ್ತಿಕ ಜೀವನದ ಬಗ್ಗೆ ಎಷ್ಟೋ ಮಂದಿಗೆ ತಿಳಿದಿಲ್ಲ.

Advertisements

ಹೌದು, ಶ್ರೀಮುರಳಿ ಅಭಿನಯದ ಉಗ್ರಂ ಸಿನಿಮಾ ಬರುವುದಕ್ಕೆ ಮುಂಚೆ ಈ ಪ್ರಶಾಂತ್ ನೀಲ್ ಯಾರೆಂಬುದೇ ನಮ್ಮ ಸಿನಿಮಾ ರಂಗಕ್ಕೆ ಗೊತ್ತಿರಲಿಲ್ಲ ಗೊತ್ತಿರಲಿಲ್ಲ. ಉಗ್ರಂ ಸಿನಿಮಾ ಮೂಲಕ ಶ್ರೀಮುರಳಿಗೆ ಸ್ಟಾರ್ ಪಟ್ಟ ತಂದುಕೊಟ್ಟವರು ಇದೆ ಪ್ರಶಾಂತ್ ನೀಲ್. ಬಳಿಕ ಮಾಡಿದ ಎರಡನೇ ಸಿನಿಮಾ ಕೆಜಿಎಫ್ ಇಡೀ ದೇಶದಾದ್ಯಂತ ಮೋಡಿ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಪ್ರಶಾಂತ್ ನೀಲ್ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಇವರ ಪತ್ನಿಯ ಹೆಸರು ಲಿಖಿತ. ರೋರಿಂಗ್ ಸ್ಟಾರ್ ನಟ ಶ್ರೀಮುರಳಿ ಮದ್ವೆಯಾಗಿರುವ ಹೆಂಡತಿಯ ಅಣ್ಣನೇ ಪ್ರಶಾಂತ್ ನೀಲ್. ಇನ್ನು ಪ್ರಶಾಂತ್ ನೀಲ್ ಲಿಖಿತ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಜೂನ್ 4, 1980ರಲ್ಲಿ ಹಾಸನದಲ್ಲಿ ಹುಟ್ಟಿದ ಪ್ರಶಾಂತ್ ನೀಲ್ ಅವರಿಗೆ ಈಗ 41 ವರ್ಷ ವಯಸ್ಸು. ಇನ್ನು ಇಡೀ ಭಾರತೀಯ ಸಿನಿಮಾ ರಂಗವೇ ತಲ್ಲಣಗೊಳ್ಳುವಂತಹ ಸಿನಿಮಾಗಳನ್ನ ಮಾಡಿರುವ ಪ್ರಶಾಂತ್ ನೀಲ್ ಅವರು ಅಸಲಿಗೆ ಬಹಳ ಸಂಕೋಚದ ಸ್ವಭಾವದವರು. ಹಾಗಾಗಿಯೇ ಅವರು ಹೆಚ್ಚು ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಈ ವಿಷಯದ ಬಗ್ಗೆ ಸ್ವತಃ ಅವರ ಪತ್ನಿ ಲಿಖಿತ ಅವರೇ ಹೇಳಿದ್ದಾರೆ.

ಇನ್ನು ಏಪ್ರಿಲ್ 14ರಂದು ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತ ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಬಾಕ್ಸ್ ಆಫೀಸ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಕೇವಲ ನಾಲ್ಕೇ ದಿನದಲ್ಲಿ 550 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದು, ಇದುವರೆಗಿನ ಭಾರತೀಯ ಸಿನಿಮಾರಂಗದ ಎಲ್ಲಾ ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಇನ್ನು ಒಂದೇ ವಾರದಲ್ಲಿ ಸಾವಿರ ಕೋಟಿಗಿಂತ ಹೆಚ್ಚು ಕಲೆಕ್ಷನ್ ಪಕ್ಕಾ ಮಾಡಲಿದೆಯೆಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಕೆಜಿಎಫ್ ಸಿನಿಮಾಗಳ ಕ್ರೀಡೆತಿ ನಮ್ಮ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸೇರಬೇಕು. ಇನ್ನು ಕೆಜಿಎಫ್ ಚಾಪ್ಟರ್ 3 ಸಿನಿಮಾ ಕೂಡ ಬರಲಿದ್ದು, ವಿದೇಶಗಳಲ್ಲಿ ಸಂಪೂರ್ಣವಾಗಿ ರೆಟ್ರೋ ಸ್ಟೈಲ್ ನಲ್ಲಿ ಚಿತ್ರಿಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರಶಾಂತ್ ನೀಲ್ ಅವರು ಈಗಾಗಲೇ ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಇದರ ಬಳಿಕ ಜೂನಿಯರ್ NTR ಅವರ ಜೊತೆ ಕೂಡ ಒಂದು ಸಿನಿಮಾ ಮಾಡಲಿದ್ದಾರೆ. ಇನ್ನು ಶ್ರೀಮುರಳಿ ಜೊತೆ ಕೂಡ ಒಂದು ಪ್ರೊಜೆಕ್ಸ್ ಇದೆ ಎಂದು ಪ್ರಶಾಂತ್ ನೀಲ್ ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಮ್ಮ ಕನ್ನಡದ ಪ್ರಶಾಂತ್ ನೀಲ್ ಅವರು ಕೇವಲ ಭಾರತೀಯ ಸಿನಿಮಾ ರಂಗ ಮಾತ್ರವಲ್ಲದೆ, ಹಾಲಿವುಡ್ ಸಿನಿಮಾ ರಂಗವೇ ತಲ್ಲಣಗೊಳ್ಳುವಂತಹ ಸಿನಿಮಾ ಮಾಡಲಿ, ಸಿನಿಮಾ ಜಗತ್ತಿನಲ್ಲಿ ಭಾರತಕ್ಕೆ ಒಳ್ಳೆಯ ಹೆಸರು ತಂದುಕೊಡಲಿ ಎಂಬುದು ನಮ್ಮೆಲ್ಲರ ಆಶಯ..