ಅನುಶ್ರೀ ಕುರಿತಂತೆ ಶಾಕಿಂಗ್ ಹೇಳಿಕೆ ಕೊಟ್ಟ ಸಂಬರ್ಗಿ ! ಯಾರಿದು ಶುಗರ್ ಡ್ಯಾಡಿ ?

Cinema
Advertisements

ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೂಪಕಿ, ನಟಿ ಅನುಶ್ರೀ ಪೆಡ್ಲರ್ ಗಳ ಜೊತೆ ಪಾರ್ಟಿಯಲಿ ಭಾಗಿಯಾಗಿದ್ದರು ಎಂಬ ಮಾಹಿತಿಯ ಮೇರೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದು ವಿಚಾರಣೆಯನ್ನು ಕೂಡ ಎದುರಿಸಿ ಆಗಿದೆ. ವಿಚಾರಣೆಗೆ ಹೋದೆ ಎಂದ ಮಾತ್ರಕ್ಕೆ ನಾನು ಅಪರಾಧಿಯಲ್ಲ ಎಂದಿರುವ ಅನುಶ್ರೀ ನನ್ನ ಕಡೆಯಿಂದ ಏನೇ ಮಾಹಿತಿ ಅಧಿಕಾರಿಗಾಲಿಗೆ ಬೇಕಾದರೂ ಸಂಪೂರ್ಣವಾಗಿ ಸಹಕಾರ ನೀಡುವೆ ಎಂದಿದ್ದಾರೆ. ಇನ್ನು ಇದೆ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅನುಶ್ರೀ ಕುರಿತಂತೆ ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ.

ಹೌದು, ಶುಗರ್ ಡ್ಯಾಡಿ ಎಂದು ಉಲ್ಲೇಖ ಮಾಡಿರುವ ಸಂಬರ್ಗಿ ಅನುಶ್ರೀಯವರ ಬಂಧನವನ್ನ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ..ಆದರೆ ಇದು ಹೆಚ್ಚು ಕಾಲ ನಡೆಯುವುದಿಲ್ಲ.ಸತ್ಯ ಹೊರಗೆ ಬರಲೇಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗಾದ್ರೆ ಯಾರಿದು ಶುಗರ್ ಡ್ಯಾಡಿ ! ಅನುಶ್ರೀಯವರ ರಕ್ಷಣೆಗೆ ನಿಂತಿರುವ ಆ ಪ್ರಭಾವಿ ವ್ಯಕ್ತಿ ಯಾರು ? ಎಂಬುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆಗಳನ್ನ ಕೇಳುತ್ತಿದ್ದಾರೆ.

Advertisements

ಆದರೆ ಶುಗರ್ ಡ್ಯಾಡಿ ಎಂದಷ್ಟೇ ಉಲ್ಲೇಖ ಮಾಡಿ ಅವರ ನಿಜವಾದ ಹೆಸರನ್ನ ಪ್ರಶಾಂತ್ ಸಂಬರ್ಗಿ ಹೇಳದೆ ಮರೆ ಮಾಚಿರುವುದು ಬಾರೀ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಕೆಲವೊಂದು ಮಾಹಿತಿಗಳ ಪ್ರಕಾರ ಅನುಶ್ರೀಯವರಿಗೆ ಅಧಿಕಾರಿಗಳಿಂದ ನೋಟಿಸ್ ತಲುಪುತ್ತಿದ್ದಂತಯೇ ಪ್ರಭಾವಿ ವ್ಯಕ್ತಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.