ಸಂಬರಗಿಗೆ ಖಡಕ್ ವಾರ್ನಿಂಗ್ ಕೊಟ್ಟ ದಿವ್ಯ ! ಅಷ್ಟಕ್ಕೂ ಪ್ರಶಾಂತ್ ಮಾಡಿದ್ದೇನು ಗೊತ್ತಾ ?

Entertainment

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಳೆದೆರಡು ದಿನಗಳಿಂದ ತುಂಬಾ ರೋಚಕವಾದ ಟಾಸ್ಕ್ ಗಳು ನಡೆಯುತ್ತಿವೆ. ಹೌದು, ಜಾತ್ರೆ ಮತ್ತು ಅನುಬಂಧ ತಂಡಗಳ ಮಧ್ಯೆ ನಡೆಯುತ್ತಿರುವ ಗಡಿ ಗೋಪುರ ಟಾಸ್ಕ್ ಗಳು ತುಂಬಾ ರೋಚಕವಾಗಿವೆ. ಆಟದ ನಡುವೆಯೇ ಮಾತಿನ ಚಕಮಕಿ ಜ’ಗಳ ಜೋರಾಗಿದೆ. ಆದರೆ ಆಟದ ನಡುವೆ ಪ್ರಶಾಂತ್ ಸಂಬರಗಿಯವರು ಹೇಳಿದ ಮತ್ತೊಂದು ಸ್ಪರ್ಧಿ ದಿವ್ಯಾ ಅವರಿಗೆ ಸಿಟ್ಟಿಗೇಳುವಂತೆ ಮಾಡಿದ್ದು ಸಂಬರಗಿಗೆ ವಾರ್ನ್ ಮಾಡಿದ್ದಾರೆ.

ಹೌದು, ಟಾಸ್ಕ್ ನ ಭಾಗವಾಗಿ ಇಟ್ಟಿಗೆ ಹೊಡೆಯುವ ಟಾಸ್ಕ್ ನೀಡಿದ್ದು, ನಾ ಮುಂದು ತಾ ಮುಂದೆ ಅಂತ ಸ್ಪರ್ಧಿಗಳು ಬಾರಿ ಪೈಪೋಟಿಗೆ ಇಳಿದಿದ್ದರು. ಇನ್ನು ಆಟದ ನಡುವೆ ಸ್ಪರ್ಧಿ ದಿವ್ಯ ಉರುಡುಗ ಅವರ ಕೈನಲ್ಲಿದ್ದ ಇಟ್ಟಿಗೆಯೊಂದನ್ನ ಸಂಬರಗಿ ದಿವ್ಯಾ ಕೈ ಎಳೆದು ಹೊ’ಡೆದುಹಾಕುತ್ತಾರೆ. ಇದನ್ನ ನೋಡಿದ ಅರವಿಂದ್ ಅವರು ಸಂಬರಗಿ ವಿರುದ್ಧ ಕೋ’ಪದಿಂದ ಫೌಲ್ ಆಗಿದೆ ಎಂದು ಹೇಳುತ್ತಾರೆ. ಇದರಿಂದ ಸಿ’ಟ್ಟಿಗೆದ್ದ ಸಂಬರಗಿ ನಿನ್ನ ಗರ್ಲ್ ಪ್ರೆಂಡ್ ಕೈ ಹಿಡಿದು ಎಳೆದದ್ದಕ್ಕೆ ಬೇಜಾರಾಯ್ತಾ ಎಂದು ಸಿ’ಟ್ಟಿನಿಂದಲೇ ಹೇಳುತ್ತಾರೆ. ಇನ್ನು ಅಲ್ಲೇ ಇದ್ದ ದಿವ್ಯ ಪ್ರಶಾಂತ್ ಹೇಳಿದ ಮಾತನ್ನ ಕೇಳಿಸಿಕೊಂಡು ನೆಟ್ಟಗೆ ಮಾತನಾಡುವುದನ್ನ ಕಲಿಯಿರಿ ಎಂದು ಸಂಬರಗಿಗೆ ವಾರ್ನಿಂಗ್ ಕೊಡುತ್ತಾರೆ.

ಇನ್ನು ಇವರ ಜ’ಗಳದ ನಡುವೆ ಎಂಟ್ರಿ ಕೊಟ್ಟ ರಾಜೀವ್ ಅವರು ಹುಡುಗಿಯರು ಹೆಸರು ಹೇಳಿಕೊಂಡು ಜ’ಗಳ ಮಾಡುವುದನ್ನ ಬಿಟ್ಟು ನೇರವಾಗಿ ಅರವಿಂದ್ ಜೊತೆ ಜ’ಗಳ ಮಾಡು ಎಂದು ಸಿಟ್ಟಿನಿಂದ ಹೇಳುತ್ತಾರೆ. ಇನ್ನು ಇದೆ ವೇಳೆ ದಿವ್ಯ ಉರುಡುಗ ಕೂಡ ನನ್ನ ತಂಟೆಗೆ ಬಂದ್ರೆ ಅಷ್ಟೇ ನಾನು ಸುಮ್ಮನಿರೋದಿಲ್ಲ..ಉಷಾರ್ ಎಂದು ಪ್ರಶಾಂತ್ ವಿರುದ್ಧ ಸಿ’ಟ್ಟಿಗೇಳುತ್ತಾಳೆ. ಇನ್ನು ಈ ಗಲಾಟೆ ಎಲ್ಲಾ ಮುಗಿದ ಬಳಿಕ ಪ್ರಶಾಂತ್ ಪರವಾಗಿ ಮಾತನಾಡಿದ ದಿವ್ಯ ಸುರೇಶ ಅವರು ದಿವ್ಯ ಉರುಡುಗ ಅವರ ಬಳಿ ಬಂದು ಪ್ರಶಾಂತ್ ಅವರು ಗರ್ಲ್ ಫ್ರೆಂಡ್ ಅಂತ ಹೇಳಿದ್ದೇನೋ ನಿಜ. ಆದರೆ ಈ ವೇಳೆ ಅವರು ನಿನ್ನ ಹೆಸರು ಹೇಳಲಲಿಲ್ಲ, ನಿಮ್ಮ ಗ’ಲಾಟೆಯ ಸಮಯದಲ್ಲಿ ನಾನು ಅದೇ ಜಾಗದಲ್ಲಿದ್ದೆ ಎಂದು ದಿವ್ಯ ಸುರೇಶ ಹೇಳುತ್ತಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲಿ ನಡೆಯುತ್ತಿರುವ ಟಾಸ್ಕ್ ಗಳು ಸ್ಪರ್ಧಿಗಳ ಮಧ್ಯೆ ವೈ’ಮನಸ್ಸು ತಂದಿಟ್ಟಿರುವಂತೂ ನಿಜ.