ಸಾಮಾನ್ಯ ಪತ್ರಕರ್ತರಾಗಿದ್ದ ರಂಗಣ್ಣ ಇಷ್ಟು ಎತ್ತರಕ್ಕೆ ಬೆಳೆದಿದ್ದೇಗೆ ಗೊತ್ತಾ ? ಹೆಂಡತಿ ಮಕ್ಕಳು ಹೇಗಿದ್ದಾರೆ ನೋಡಿ..

Inspire

ಸ್ನೇಹಿತರೇ, ಈಗಂತೂ ಮಾಧ್ಯಮರಂಗ ತುಂಬಾ ಪ್ರಭಲವಾಗಿ ಬೆಳೆದಿದೆ. ಇನ್ನು ಕನ್ನಡದ ಟಾಪ್ ನ್ಯೂಸ್ ಚಾನೆಲ್ ಗಳಲ್ಲಿ ಪಬ್ಲಿಕ್ ಟಿವಿ ಕೂಡ ಒಂದು. ಈ ಚಾನೆಲ್ ಹುಟ್ಟು ಹಾಕಿದ್ದು ಹೆಚ್.ಆರ್.ರಂಗನಾಥ್ ಅವರು. ಅವರೇ ಈ ಚಾನೆಲ್ ನ ಚೇರ್ಮೆನ್ ಹಾಗೂ ಎಂಡಿ ಕೂಡ. ಮೂಲತಃ ಮೈಸೂರಿನವರಾದ ರಂಗನಾಥ್ ಅವರ ಪೂರ್ಣ ಹೆಸರು ಹೆಬ್ಬಾಳೆ  ರಾಮಕೃಷ್ಣಯ್ಯ ರಂಗನಾಥ್ ಎಂದು. ರಾಜಕೀಯ ನಾಯಕರಾಗಿರಲಿ ಅಧಿಕಾರಿಗಳಾಗಿರಲಿ ನೇರವಾಗಿ ಮಾತನಾಡಿ ಅವರಿಗೆ ಬೆವರಿಳಿಸುವ ರಂಗಣ್ಣ ಪಬ್ಲಿಕ್ ಟಿವಿಯನ್ನ ಹುಟ್ಟುಹಾಕಿದ್ದೆ ಒಂದು ರೋಚಕ..ಮಾಧ್ಯಮ ಲೋಕದಲ್ಲಿ ಏನಾದರು ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಬಂದು ಪತ್ರಿಕೆಗಳಲ್ಲಿ ವರದಿಗಾರರಾಗಿ, ಚೀಪ್ ಎಡಿಟರ್ ಆಗಿ ತನ್ನ ವೃತ್ತಿಯನ್ನ ಶುರು ಮಾಡಿದ್ರು ರಂಗಣ್ಣ..ಇನ್ನು ರಂಗಣ್ಣ ಅವರ ರಿಯಲ್ ಲೈಫ್ ಹೇಗಿದೆ, ಅವರ ಕುಟುಂಬ ಹೇಗಿದೆ ಎಂಬುದನ್ನ ತಿಳಿಯೋಣ ಬನ್ನಿ..

ಮೇ ೧೨, ೧೯೬೬ರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಿಸಿದ ರಂಗಣ್ಣ ಅವರಿಗೆ ಮತ್ತೊಂದು ಅಡ್ಡ ಹೆಸರಿದೆ. ಕ್ಯಾಪ್ಟನ್ ರಂಗಣ್ಣ ಎಂದು. ಈಗ ರಂಗನಾಥ್ ಅಲಿಯಾಸ್ ರಂಗಣ್ಣ ಅವರಿಗೆ ೫೫ ವರ್ಷ. ಬೆಂಗಳೂರಿಗೆ ಬಂದ ಇವರು ಮೊದಲಿಗೆ ಹಲವಾರು ಪತ್ರಿಕೆಗಳಿಗೆ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ್ರು. ಇವರೊಬ್ಬರೇ ಪಬ್ಲಿಕ್ ಟಿವಿಯ ಸಂಸ್ಥಾಪರಾಗಿದ್ದು ಇದರ ಹೆಡ್ ಆಫೀಸ್ ಬೆಂಗಳೂರಿನ ಯಶವಂತಪುರದಲ್ಲಿದೆ. ಇನ್ನು ರಂಗನಾಥ್ ಅವರ ತಂದೆಯ ಹೆಸರು ರಾಮಕೃಷ್ಣಯ್ಯ ಹಾಗೂ ತಾಯಿಯ ಹೆಸರು ಲೀಲಾ ಎಂದು. ರಂಗಣ್ಣ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವುದಕ್ಕೆ ಮೊದಲು ಆರ್ಕೆಸ್ಟ್ರಾದಲ್ಲಿ ಗಾಯಕರಾಗಿದ್ದರು ಎಂಬುದು ವಿಶೇಷ. ಫೇಸ್ ಆಫ್ ಬೆಂಗಳೂರು, ವಾಯ್ಸ್ ಆಫ್ ಕರ್ನಾಟಕ ಎಂಬ ಬಿದುರುದುಗಳು ಕೂಡ ಇವರಿಗಿವೆ.

ರಾಜಕೀಯದವರಾಗಿರಲಿ ಇಲ್ಲವೇ ಅಧಿಕಾರಿಗಳಾಗಲಿ ನೇರವಾಗಿ ಮಾತನಾಡುವ ರಂಗಣ್ಣ ಪ್ರತೀ ದಿನ ೯ ಗಂಟೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ಕಾರ್ಯಕ್ರಮವನ್ನ ಇವೇ ನಡೆಸಿಕೊಡುತ್ತಾರೆ. ರಂಗನಾಥ್ ನೇರ ನುಡಿ, ಮಾತಿನ ಶೈಲಿಗೆ ಮಾರುಹೋಗಿರುವ ಅನೇಕರು ಇವರ ಅಭಿಮಾನಿಗಳಾಗಿದ್ದಾರೆ. ರಂಗನಾಥ್ ಅವರ ಪತ್ನಿಯ ಹೆಸರು ಶಾರದಾ ಎಂದು. ಈ ದಂಪತಿಗೆ ತೇಜಸ್ವಿನಿ ಎಂಬ ಒಬ್ಬ ಮಗಳಿದ್ದಾಳೆ. ರಂಗಣ್ಣ ಅವರಿಗೆ ನಾಲ್ಕು ಜನ ಸಹೋದರಿಯರು, ಇಬ್ಬರು ಸಹೋದರರು ಇದ್ದಾರೆ. ಅವರ ಹೆಸರು ವೈದೇಹಿ, ಮಣಿಕರ್ಣಿಕಾ, ಕಾತ್ಯಾಯಿನಿ, ಸರ್ವಮಂಗಳ ಸಹೋದರಿಯಾದ್ರೆ, ಕೇಶವ ಮತ್ತು ವೆಂಕಟೇಶ್ ಸಹೋದರರು. ರಂಗನಾಥ್ ಅವರು ಬೆಳೆದು ಬಂದ ದಾರಿ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ ಎಂದರೆ ತಪ್ಪಾಗುವುದಿಲ್ಲ. ಹಲವಾರು ಬಾರಿ ತಮ್ಮನ್ನ ಅರಸಿ ಬಂದ ಅವಾರ್ಡ್ ಗಳನ್ನ ತಿರಸ್ಕರಿಸಿರುವ ರಂಗಣ್ಣ, ೨೦೧೬ರಲ್ಲಿ ಜೀ ಕನ್ನಡ ವಾಹಿನಿ ದಶಕದ ಜರ್ನಲಿಸ್ಟ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಸಮಾನ್ಯ ಪತ್ರಕರ್ತರಾಗಿದ್ದವರು ಒಂದು ನ್ಯೂಸ್ ಚಾಲೆನ್ ಕಟ್ಟುವಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದರೆ ಗ್ರೇಟ್ ಅಲ್ಲವೇ..