ಮಗಳ ಮದುವೆ ಸಂಭ್ರಮದಲ್ಲಿ ಪಬ್ಲಿಕ್ ಟಿವಿ ರಂಗಣ್ಣ..ಯಾರೆಲ್ಲಾ ಬಂದಿದ್ರು.?ವಿಡಿಯೋ ನೋಡಿ..

Entertainment News

ಸ್ನೇಹಿತರೇ, ಕನ್ನಡದ ಖ್ಯಾತ ಸುದ್ದಿವಾಹಿನಿ ಪಬ್ಲಿಕ್ ಟಿವಿ ಎಂದ ಕೂಡಲೇ ನೆನಪಿಗೆ ಬರುವುದೇ ರಂಗನಾಥ್ ಅವರು. ಜನರು ಪ್ರೀತಿಯಿಂದ ರಂಗಣ್ಣ ಎಂದು ಕರೆಯುತ್ತಾರೆ. ತಮ್ಮ ನೇರ ನುಡಿಯ ಮಾತಿನ ಶೈಲಿಯ ಮೂಲಕ ಖಡಕ್ ಆಗಿ ಹಿರಿಯ ಪತ್ರಕರ್ತರು ಆಗಿರುವ ರಂಗಣ್ಣ ಅವರು ಕನ್ನಡ ಸುದ್ದಿಲೋಕದಲ್ಲಿ ತುಂಬಾನೇ ಫೇಮಸ್.. ಎಷ್ಟರ ಮಟ್ಟಿಗೆ ಎಂದರೆ ರಂಗಣ್ಣ ಅವರನ್ನ ಕಂಡರೆ ರಾಜಕಾರಣಿಗಳಿಗೂ ಕೂಡ ಸ್ವಲ್ಪ ಭಯನೇ..ಇನ್ನು ಪ್ರತೀ ದಿನ ರಾತ್ರಿ ೯ಗಂಟೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ಎಲ್ಲರಿಗು ಅಚ್ಚುಮೆಚ್ಚು. ಇನ್ನು ಮಾಧ್ಯಮ ಲೋಕದಲ್ಲಿ ಎಷ್ಟೆಲ್ಲಾ ಖ್ಯಾತಿ ಹೊಂದಿರುವ ರಂಗಣ್ಣ ಅವರು ತಮ್ಮ ಮಗಳ ಮದುವೆಯನ್ನ ಭರ್ಜರಿಯಾಗಿಯೇ ಮಾಡಿದ್ದಾರೆ.

ಹೌದು, ಕೆಲ ದಿನಗಳಿಂದ ಕನ್ನಡ ಸಿನಿಮಾರಂಗದ ಸೆಲೆಬ್ರೆಟಿ ನಟರ ಮನೆಗಳಿಗೆ ಹೋಗಿ ತಮ್ಮ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನ ಕೊಟ್ಟು ಅವರನ್ನ ಮದುವೆಗೆ ಆಹ್ವಾನಿಸಿರುವುದು ಜೊತೆಗೆ ರಾಜಕಾರಣಿಗಳಿಗೂ ಕೂಡ ಲಗ್ನ ಪತ್ರಿಕೆ ಹಂಚಿ ಬಂದಿದ್ದರು. ಈಗ ರಂಗಣ್ಣ ಅವರು ತಮ್ಮ ಮಗಳಾದ ವೈಷ್ಣವಿ ಅವರನ್ನ ನಿಖಿಲ್ ಎಂಬುವವರ ಜೊತೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಇನ್ನು ಮದುವೆಗೆ ಆಹ್ವಾನಿತರಾಗಿದ್ದ ಗಣ್ಯರು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನು ಮಗಳ ಮದುವೆ ಎಂದರೆ ಆ ತಂದೆಯ ಸಂತೋಷವನ್ನ ಬಣ್ಣಿಸಲು ಸಾಧ್ಯವೇ ಇಲ್ಲ..ಕೆಳಗಿರುವ ಮದುವೆಯ ವಿಡಿಯೋ ನೋಡಿ..

ಹೌದು, ಪಬ್ಲಿಕ್ ಟಿವಿಯಲ್ಲಿ ಖಡಕ್ ಆಗಿ ಮಾತನಾಡುವ ರಂಗನಾಥ್ ಅವರು ಮಗಳ ಮದುವೆಯಲ್ಲಿ ತುಂಬಾ ಸಂಭ್ರಮದಿಂದ ಒಬ್ಬರ ಸಾಮಾನ್ಯ ವ್ಯಕ್ತಿಯಂತೆ ಕಂಡುಬಂದಿದ್ದು, ರಂಗಣ್ಣ ಎಷ್ಟು ಸರಳ ವ್ಯಕ್ತಿ ಅಲ್ಲವಾ ಎಂದು ನೋಡಿದವರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ರಂಗಣ್ಣ ಅವರ ಮಗಳ ಮದುವೆಯ ವೀಡಿಯೊ ಫೋಟೋಗಳಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ನವ ವಧು ವರರಿಗೆ ಶುಭ ಕೋರಿದ್ದಾರೆ. ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ದೊಡ್ಡ ಸಾಧನೆ ಮಾಡಿರುವ ರಂಗಣ್ಣ ಅವರ ಮಗಳ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ನೀವೆಲ್ಲಾ ಹಾರೈಸಿ..