ಚಿನ್ನದ ಶರ್ಟ್ ಧರಿಸುತ್ತಿದ್ದ ಈ ಚಿನ್ನದ ಮಾನವ ಯಾರು ಗೊತ್ತಾ ? ಕೊನೆಗೆ ಈತ ಏನಾದ ಗೊತ್ತಾ ?

Kannada Mahiti

ಸ್ನೇಹಿತರೇ, ಕಾಲವೇ ಹಾಗೇ, ಎಲ್ಲವನ್ನು ಕಲಿಸುತ್ತದೆ. ಇಂದು ನಾನು ನನ್ನದೆಂದು ಮೆರೆದವರು ಒಂದು ದಿನ ಕೆಳಗಡೆ ಬರಲೇಬೇಕು. ಹಾಗೆಯೆ ಕೆಳಗಡೆ ಇದ್ದವರು ಮೇಲೆ ಬರಲೇಬೇಕು. ಇನ್ನು ನಾನೆ ನನ್ನ ಬಿಟ್ಟು ಯಾರಿಲ್ಲ ಎಂದು ಮೆರೆದವರೆಷ್ಟೊ ಜನ ದು’ರಂ’ತ್ಯದ ಅಂ’ತ್ಯವನ್ನ ಕಂಡಿರುವುದರ ಬಗ್ಗೆ ಕೇಳಿದ್ದೇವೆ ನೋಡಿದ್ದೇವೆ. ಈಗ ಇದೆ ರೀತಿಯ ಘಟನೆಯೊಂದು ನಡೆದಿದೆ. ಇನ್ನು ಬಂಗಾರ ಎಂದರೆ ಯಾರಿಗೆ ತಾನೇ ಎಷ್ಟ ಆಗೋಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಅಂತೂ ಚಿನ್ನದ ಮೇಲಿರುವ ವ್ಯಾಮೋಹದ ಬಗ್ಗೆ ಹೇಳುವುದೇ ಬೇಕಾಗಿಲ್ಲ. ಇನ್ನು ಈಗಂತೂ ಪುರುಷರಿಗೂ ಕೂಡ ಚಿನ್ನ ಧರಿಸುವುದೆಂದರೆ ಫ್ಯಾಶನ್ ಆಗಿಬಿಟ್ಟಿದೆ. ಇನ್ನು ಕೆಲವರನ್ನ ನೋಡಿದ್ದೇವೆ ಕೈ, ಕತ್ತಿನ ತುಂಬಾ ಬಂಗಾರವನ್ನ ಧರಿಸುತ್ತಾರೆ.

ಒಂದೊತ್ತಿನ ಊಟಕ್ಕೂ ಕೋಟ್ಯಂತರ ಜನರು ಕಷ್ಟಪಡುವಾಗ ಇಲ್ಲೊಬ್ಬ ವ್ಯಕ್ತಿ ಚಿನ್ನದ ಶರ್ಟನ್ನೇ ಧರಿಸುತ್ತಿದ್ದ. ಪುಣೆ ಮೂಲದ ಈ ವ್ಯಕ್ತಿಯ ಹೆಸರು ದತ್ತಾ ಫುಗೆ ಎಂದು. ಇನ್ನು ಆತ ಧರಿಸುತ್ತಿದ್ದ ಚಿನ್ನದ ಶರ್ಟ್ ನ ಬೆಲೆ ಒಂದು ಕೋಟಿ ಇಪ್ಪತ್ತೇಳು ಲಕ್ಷ ಇತ್ತು. ಉದ್ಯಮಿಯಾಗಿದ್ದ ಈತ ಪುಣೆಯ ಶ್ರೀಮಂತ ವ್ಯಕ್ತಿಯಾಗಿದ್ದ. ಇನ್ನು ಈತನಿಗೆ ಚಿನ್ನ ಎಂದರೆ ಎಲ್ಲಿಲ್ಲದ ತುಂಬಾ ಆಸೆ. ಇನ್ನು ಚಿನ್ನದ ಮೇಲಿನ ಅತಿಯಾದ ವ್ಯಾಮೋಹದಿಂದಾಗಿ ಈತನಿಗೆ ತಾನು ಚಿನ್ನದ ಶರ್ಟ್ ತೊಡಬೇಕು ಎಂಬ ಆಸೆ ಹುಟುತ್ತದೆ. ಹಾಗಾಗಿ ೨೦೧೨ರಲ್ಲಿ ದತ್ತಾ ಫುಗೆ ತಮಗೆ ಪರಿಚಯ ಇರೋ ಚಿನ್ನದ ಅಂಗಡಿಯವರೊಬ್ಬರ ಬಳಿ ಚಿನ್ನದ ಶರ್ಟ್ ತಯಾರು ಮಾಡಿಕೊಡಬೇಕೆಂದು ಕೇಳುತ್ತಾರೆ.

ಇನ್ನು ದತ್ತಾ ಫುಗೆ ಅವರು ಹೇಳಿದಂತೆ ಚಿನ್ನದ ಅಂಗಡಿಯವನು ಚಿನ್ನದ ಶರ್ಟ್ ಮಾಡಲು ಶುರುಹಚ್ಚಿಕೊಳ್ಳುತ್ತಾನೆ. ಅದಕ್ಕಾಗಿ ೨೨ ಕ್ಯಾರೆಟ್ ಗುಣಮಟ್ಟದ ೪ ಸಾವಿರ ಚಿನ್ನಡ ಬಿಸ್ಕೆಟ್ ಗಳಿಂದ ಚಿನ್ನದ ನೂಲುಗಳನ್ನ ತಯಾರು ಮಾಡಿ ಸುಮಾರು ೧೫ ಜನ ಅಕ್ಕಸಾಲಿಗರು ೧೫ ದಿನಗಳ ಕಾಲ ವೆಲ್ವೆಟ್ ಬಟ್ಟೆಯ ಮೇಲೆ ಚಿನ್ನದ ನೂಲುಗಳಿಂದ ಚಿನ್ನದ ಶರ್ಟ್ ತಯಾರು ಮಾಡುತ್ತಾರೆ. ಇನ್ನು ವಿಶೇಷವಾದ ಈ ಶರ್ಟ್ ನ್ನ ಸಭೆ ಸಮಾರಂಭಗಳಲ್ಲಿ ಧರಿಸುತ್ತಿದ್ದರು ಉದ್ಯಮಿ ದತ್ತಾ ಫುಗೆ. ಇನ್ನು ಇವರ ಶ್ರೀಮಂತಿಕೆಯ ಪ್ರದರ್ಶನವನ್ನ ಕಂಡ ಎಷ್ಟೋ ಜನರು ದೇಶದಲ್ಲಿ ಎಷ್ಟೋ ಜನರು ಒಂದೊತ್ತಿನ ಊಟಕ್ಕೂ ಕಷ್ಟ ಪಡುವಾಗ ಈ ರೀತಿಯ ನಿಮ್ಮ ಈ ಶ್ರೀಮಂತಿಕೆಯ ಪ್ರದರ್ಶನ ಎಷ್ಟು ಸರಿ ಎಂದು ಹೇಳಿದಾಗ, ಅದಕ್ಕೆ ದತ್ತಾ ಫುಗೆ ಕೊಡುತ್ತಿದ್ದ ಉತ್ತರವೇ ಬೇರೆಯಾಗಿತ್ತು. ಈಗ ಎಷ್ಟೋ ಜನ ತಮ್ಮ ಫ್ಯಾಶನ್ ಗಾಗಿ ದುಬಾರಿಯಾದ ಕಾರ್ ಗಳನ್ನ ಕೊಂಡುಕೊಳ್ಳುತ್ತಾರೆ. ಅವರಿಗೆ ದುಬಾರಿ ಕಾರ್ ಗಳ ಮೇಲೆ ಹೇಗೆ ಆಸೆಯೋ ನನಗೆ ಚಿನ್ನದ್ ಮೇಲೆ ಆಸೆ ಎಂದು ಅವರು ಉತ್ತರ ಕೊಡುತ್ತಿದ್ದರು.

ಆದ್ರೆ ದತ್ತಾ ಫುಗೆ ಅವರ ಈ ಆಡಂಬರ ಹೆಚ್ಚು ದಿನ ಉಳಿಯಲಿಲ್ಲ. ಸುಮಾರು ವರ್ಷಗಳ ಕಾಲ ಚಿನ್ನದ ಶರ್ಟ್ ನ್ನ ಧರಿಸಿ ಮೆರೆದಿದ್ದ ದತ್ತಾ ಫುಗೆ ಅವರನ್ನ ಮಗನ ಮುಂದೆಯೇ 2016 ಜುಲೈನಲ್ಲಿ ಹ’ತ್ಯೆ ಮಾಡಲಾಗುತ್ತದೆ. ಇನ್ನು ಇದರ ಬಗ್ಗೆ ಪೋಲೀಸರ ತನಿಖೆಯಲ್ಲಿ ಗೊತ್ತಾಗಿದ್ದು ಕಾರಣ ಏನೆಂದರೆ, ದತ್ತಾ ಫುಗೆ ಚಿಟ್ ಫಂಡ್ ವೊಂದನ್ನ ನಡೆಸುತ್ತಿದ್ದು, ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಜನರಿಂದ ಹಣ ಕಲೆಕ್ಟ್ ಮಾಡುತ್ತಿದ್ದರಂತೆ. ಇನ್ನು ಜನರಿಗೆ ಬರಬೇಕಾದ ಬಡ್ಡಿಯ ಹಣ ಕೇಳಿದಾಗ ಕೊಡದೆ ಸ’ತಾಯಿಸುತ್ತಿದ್ದರಂತೆ. ಹೀಗೆ ಜನರನ್ನ ವಂ’ಚಿಸಿ ಚಿನ್ನದ ಶರ್ಟ್ ಧರಿಸಿ ಮೆರೆಯುತ್ತಿದ್ದ ದತ್ತಾ ಫುಗೆಯ ಮೇಲೆ ಕೆಲವರಿಗೆ ಕೋಪ ಇತ್ತೆಂದು ಹೇಳಲಾಗಿದ್ದು, ಇದೆ ಕಾರಣದಿಂದ ಅವರ ಮನೆಗೆ ಹೋಗಿದ್ದ ಕೆಲವರು ಹುಟ್ಟುಹಬ್ಬದ ನೆಪ ಹೇಳಿ ದತ್ತಾ ಫುಗೆಯನ್ನ ಹುಟ್ಟುಹಬಕ್ಕೆ ಬರುವಂತೆ ಮಾಡಿ, ಸಮಯ ನೋಡಿ ಮಗನ ಮುಂದೆಯೇ ದತ್ತಾ ಫುಗೆಯನ್ನ ಹ’ತ್ಯೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.