ಅಪ್ಪು ಸಮಾಧಿ ನೋಡಿ ವಿಷ್ಣು ಅಪ್ಪಾಜಿ ಸಮಾಧಿಯ ವಿಚಾರ ಮಾತಾಡಿದ ಅನಿರುದ್ದ್.!ಒಬ್ಬರೂ ಸಪೋರ್ಟ್ ಮಾಡಲಿಲ್ಲ ಎಂದಿದ್ದೆಕೆ.?

Cinema

ಕನ್ನಡ ಸಿನಿಮಾರಂಗದ ಖ್ಯಾತ ಮೇರು ನಟ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರು ನಮ್ಮಿಂದ ಅಗಲಿ ಮುಂದಿನ ತಿಂಗಳಿಗೆ 12 ವರ್ಷ ಕಂಪ್ಲೀಟ್ ಆಗುತ್ತವೆ. ಈಗಲೂ ಸಹ ನಮ್ಮ ರಾಜ್ಯದ್ಯಂತ ವಿಷ್ಣು ದಾದಾ ಅವರ ಅಭಿಮಾನಿಗಳು ವಿಷ್ಣುದಾದಾರ ಪ್ರತಿಮೆಗೆ ಪ್ರತಿದಿನ ಪೂಜೆ ಮಾಡುತ್ತಾರೆ. ಕೆಲವು ಸಂಘಗಳ ಮೂಲಕವೇ ಸಮಾಜಸೇವೆ ಕೂಡ ನಡೆಯುತ್ತಿವೆ. ಇಷ್ಟೆಲ್ಲಾ ಆದರೂ ಕೂಡ ವಿಷ್ಣು ಅಪ್ಪಾಜಿಯ ಒಂದು ಸ’ಮಾಧಿ ಆಗಿಲ್ಲವಲ್ಲ ಎಂಬ ಕೊರಗು ಕುಟುಂಬಕ್ಕೆ ಹಾಗೂ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಈಗಲೂ ಇದೆ. ಹೌದು ವಿಷ್ಣು ಅಪ್ಪಾಜಿಯ ಸ’ಮಾಧಿ ನಿರ್ಮಾಣಕ್ಕೆ ಒಟ್ಟು ಆರು ವರ್ಷಗಳ ಕಾಲ ನಟ ಅನಿರುದ್ಧ್ ಅವರು ಅಲೆದಾಡಿದ್ದು, ಮುಂದಿನ ವರ್ಷ ಮೈಸೂರಿನಲ್ಲಿ ವಿಷ್ಣು ಅಪ್ಪಾಜಿಯ ಸ್ಮಾರಕ ತಯಾರು ಆಗಲಿದೆ ಎಂದು ಹೇಳಿ, ಭರವಸೆ ಮಾತುಗಳನ್ನು ಆಡಿ, ತಮ್ಮಲ್ಲಿರುವ ಅಭಿಪ್ರಾಯವನ್ನು ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ್ದು ಈ ರೀತಿ ವ್ಯಕ್ತಪಡಿಸಿದರು..

ಹಾಗಾದ್ರೆ ನಟ ಅನಿರುದ್ದ್ ಅವರು ಹೇಳಿದ್ದೇನು ನೋಡೋಣ ಬನ್ನಿ..ಬೆಂಗಳೂರಿನಲ್ಲಿ ವಿಷ್ಣು ಅಪ್ಪಾಜಿ ಸ’ಮಾಧಿಯನ್ನ ಮಾಡಬೇಕೆಂಬುದು ನಮ್ಮೆಲ್ಲರ ಆಸೆಯಾಗಿತ್ತು. ಆದರೆ ಅದು ಸಾಧಯವಾಗಲಿಲ್ಲ. ವರ್ಷಗಳಿಂದ ಪ್ರಯತ್ನ ಮಾಡಿದ್ದೇವೆ. ಜಾಗ, ಸರ್ಕಾರಿ ಕಚೇರಿಗಳನ್ನ ಅಲೆದು ಸಾಕಾಗಿಹೋಗಿದೆ. ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿಯಾಗಿದೆ. ಹೀಗೆ ಆರು ವರ್ಷಗಳ ಕಾಲ ಅಪ್ಪಾಜಿಯ ಸ’ಮಾಧಿಗಾಗಿ ಅಲೆದು ಅಲೆದು ಸಾಕಾಗಿದೆ. ನಮಗೆ ಯಾರಿಂದಲೂ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಸರ್ಕಾರ ಕೆಲ ಜಾಗಗಳನ್ನ ತೋರಿಸಿತ್ತು, ಆದರೆ ಅವೆಲ್ಲಾ ಗಾಡಿಗಳು ಕೂಡ ಓಡಾಡುವುದಕ್ಕೆ ಸಾಧ್ಯಾವಾಗದ ಬೆಟ್ಟ ಹಾಗೂ ಕಾಡಿನ ಜಾಗಗಳು. ಅಪ್ಪಾಜಿ ನಮ್ಮನ್ನೆಲ್ಲಾ ಬಿಟ್ಟು ಹೋದಾಗಿನಿಂದಲೂ ಎಲ್ಲಾ ಮುಖ್ಯಮಂತ್ರಿಗಳ ಬಳಿ ಜಾಗಕ್ಕಾಗಿ ಮಾತನಾಡಿದ್ದಲ್ಲದೆ, ಸಿಕ್ಕ ಜಾಗಕ್ಕೂ ಕೋರ್ಟ್ ಕೇಸ್ ಗಳನ್ನ ಎದುರಿಸುತ್ತಿದ್ದೇವೆ.

ಇನ್ನು ಅಭಿಮಾನ್ ಸ್ಟುಡಿಯೋದ ಬಳಿ ಜಾಗವೊಂದು ಫೈನಲ್ ಆಗಿತ್ತು. ಇನ್ನೇನು ಸ’ಮಾಧಿ ಕೆಲಸಗಳನ್ನ ಎನ್ನುವಷ್ಟರಲ್ಲಿ ಅದಕ್ಕೂ ಯಾರೂ ತಕರಾರು ಮಾಡಿದ್ರು. ಇದು ಆದ ಮೇಲೆ ಬಿಜಿಎಸ್ ಕಾಲೀಜಿನ ಮುಂಗಡಲ್ಲಿ ಸಮಾಧಿಗಾಗಿ ಶಂಕುಸ್ಥಾಪನೆ ನೆರವೇರುಸುವಷ್ಟರಲ್ಲಿ ಅದಕ್ಕೂ ಕೂಡ ಸ್ಟೇ ಆರ್ಡರ್ ತರಲಾಯಿತು. ಇದು ಫಾರೆಸ್ಟ್ ಬಫರ್ ಝೋನ್ ಆಗಿದ್ದು ಇಲ್ಲಿ ಸ’ಮಾಧಿ ಮಾಡುವ ಆಗಿಲ್ಲ ಎಂದು ಸ್ಟೇ ಆರ್ಡರ್ ತರಲಾಯಿತು. ಹೀಗೆ ನೋಡ ನೋಡುತ್ತಲೇ ಆರು ವರ್ಷಗಳೇ ಕಳೆದುಹೋದವು. ವರ್ಷಗಳ ಕಾಲ ಅಲೆದಿದ್ದೇವೆ ಹೊರತು ಬೆಂಗಳೂರಿನಲ್ಲಿ ಸಮಾಧಿ ಮಾಡಲು ಸರಿಯಾದ ಜಾಗ ಸಿಗಲಿಲ್ಲ ಎಂದು ಅನಿರುದ್ದ್ ಹೇಳಿದ್ದಾರೆ. ಇನ್ನು ಭಾರತಿ ಅಮ್ಮ ಸೇರಿದಂತೆ ಅಂಬರೀಷ್ ಹಾಗೂ ಬಾಲಣ್ಣ ಅವರ ಕೂರಂಬ ಕೂಡ ಪ್ರಯತ್ನ ಮಾಡಿದ್ದರು ಸಾಧ್ಯವಾಗಲಿಲ್ಲ. ಬಳಿಕ ಕೊನೆಯಲ್ಲಿ ಅಪ್ಪಾಜಿಯ ಅಭಿಮಾನಿಗಳನ್ನ ಕರೆದು ಮೈಸೂರಿನಲ್ಲಿ ಸಮಾಧಿ ಮಾಡೋಣ ಎಂದು ಬೆಂಗಳೂರಿನಲ್ಲಿ ಆಗುತ್ತಿಲ್ಲವೆಂದು ಹೇಳಿದೆ..ಬೆಂಗಳೂರಿನಲ್ಲೇ ಅಪ್ಪಾಜಿಯ ಸಮಾಧಿ ಸಾಧ್ಯವಾಗುವ ಆಗಿದ್ದರೆ, ಮೈಸೂರಿನಲ್ಲಿ ಸ’ಮಾಧಿ ಮಾಡೋದೇ ಇಲ್ಲ.

ಆದ್ರೆ ಕನ್ನಡದ ಮೇರು ನಟರಲ್ಲಿ ಒಬ್ಬರೆನಿಸಿಕೊಂಡಿರುವ ಇಂತಹ ಮಹಾನ್ ನಟನಿಗೆ ಸ’ಮಾಧಿ ಮಾಡುವ ಸಲುವಾಗಿ ಯಾರಿಂದಲೂ ಪ್ರೋತ್ಸಾಹ ದೊರೆಯಲಿಲ್ಲ. ಸುಮ್ಮನೆ ಮೀಡಿಯಾಗಳ ಮುಂದೆ ಕೂತು ಮಾತನಾಡುತ್ತಾರೆ ಅಷ್ಟೇ..ಆದ್ರೆ ಪ್ರಯತ್ನ ಮಾತ್ರ ಇಲ್ಲ. ಆದ್ರೆ ಅಂಬರೀಷ್ ಅವರು ಪ್ರಾಮಾಣಿಕವಾಗಿ ಅಪ್ಪಾಜಿಯ ಸ’ಮಾಧಿಗಾಗಿ ಪ್ರಯತ್ನ ಮಾಡಿದ್ದರು ಎಂದು ಅನಿರುದ್ದ್ ಹೇಳಿದ್ದಾರೆ. ಅಪ್ಪಾಜಿ ಇದ್ದಾಗ ಮಾತ್ರ ಎಲ್ಲರು ಹಿಂದೆ ಮುಂದೆ ಇದ್ದರು. ಆದರೆ ಈಗ ಮಾತ್ರ ಯಾರೂ ಇಲ್ಲ. ಡಾ.ರಾಜ್ ಕುಮಾರ್, ಡಾ. ಅಂಬರೀಷ್, ಹಾಗೂ ಅಪ್ಪು ಎಲ್ಲರು ಕೂಡ ಮೇರು ನಟರೇ. ಅವರಿಗೆಲ್ಲಾ ಸಂದಿರುವ ಗೌರವಕ್ಕೆ ನನಗೆ ಖುಷಿ ಇದೆ. ಆದರೆ ಅಪ್ಪಾಜಿಯ ವಿಚಾರದಲ್ಲಿ ಮಾತ್ರ ಏನಿದು, ಮೋಸ, ತಾರತಮ್ಯದ ಭಾವನೆ, ನೀವೇ ಹೇಳಿ..ಅಪ್ಪಾಜಿ ಕೂಡ ಅವರದ್ದೇ ಆದ ದೊಡ್ಡ ಕೊಡುಗೆ ಇದೆ ಈ ಕನ್ನಡ ಚಿತ್ರರಂಗಕ್ಕೆ. ಕೊನೆ ತನಕ ಕಲೆಗಾಗಿ ಜೀವನ ಸವೆಸಿದವರನ್ನ ಈ ರೀತಿ ನಡೆಸಿಕೊಳ್ಳುವುದನ್ನ ಸಹಿಸಲು ಅಸಾಧ್ಯ ಎಂದು ನಟ ಅನಿರುದ್ದ್ ಅವರು ಹೇಳಿದ್ದಾರೆ. ಸ್ನೇಹಿತರೇ, ಇದರ ಬಗ್ಗೆ ನಿಮಮ್ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..