ಅಪ್ಪು ಅವರ ಮದುವೆ ಕ್ಷಣ ಹೇಗಿತ್ತು ಗೊತ್ತಾ.?ಈ ಅಪರೂಪದ ವಿಡಿಯೋ ಮರೆಯಲು ಸಾಧ್ಯವೇ..

Cinema

ಕನ್ನಡ ಸಿನಿಮಾರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಪ್ಪು ಎಂದೆ ಸಾಕಷ್ಟು ಅಭಿಮಾನಿಗಳ ಮನಸ್ಸಿನಲ್ಲಿ ಬೇರೂರಿದ್ದರು. ಅಪ್ಪು ಎಂದರೆ ಸದಾ ಹಸನ್ಮುಖಿಯಾಗಿ ಎಲ್ಲರೊಟ್ಟಿಗೆ ಪ್ರೀತಿ ಪಾತ್ರರಾಗಿ ಸ್ನೇಹ ಕೊಟ್ಟು, ಸಹಾಯ ಮಾಡುತ್ತಾ ಸಮಾಜಮುಖಿ ಕೆಲಸಗಳನ್ನು ಕೈಗೊಂಡು, ತುಂಬಾನೇ ಚೆನ್ನಾಗಿದ್ದರು. ಆದ್ರೆ ನಮ್ಮ ಪುನೀತ್ ಅವರ ಒಳ್ಳೆಯತನ ಆ ದೇವರಿಗೆ ಇಷ್ಟವಾಗಲಿಲ್ಲವೇನೋ ಗೊತ್ತಿಲ್ಲ, ಇಂತಹ ಒಳ್ಳೆಯ ವ್ಯಕ್ತಿ ನನ್ನ ಜೊತೆ ಇದ್ದರೆ ಚೆನ್ನಾಗಿರುತ್ತದೆ ಎಂದು ತನ್ನ ಬಳಿಗೆ ಕರೆಸಿಕೊಂಡನು. ಇವರ ಅಗಲಿಕೆ ಈಗಲೂ ಸಹ ತುಂಬಾ ದುಃ’ಖದ ವಿಷಯವಾಗಿದೆ. ಪುನೀತ್ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಕಷ್ಟ ಎಂದವ್ರಿಗೆ ಸಹಾಯ ಮಾಡಲು ಯಾವಾಗಲೂ ಮುಂದಿರುತ್ತಿದ್ದರು. ಹಾಗೆ ಅದೆಷ್ಟೋ ಅನಾಥರಿಗೆ ವಯಸ್ಸಾದ ತಂದೆ ತಾಯಿಗೆ ಬೆಳಕಾಗಿದ್ದರು.

ವೃದ್ಧಾಶ್ರಮ ಮಕ್ಕಳ ವಿದ್ಯಾಭ್ಯಾಸ ನೀಡುವ ಸಾಕಷ್ಟು ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತುಂಬಾ ಅಭಿಮಾನಿ ಬಳಗವನ್ನು ನಟ ಅಪ್ಪು ಹೊಂದಿದ್ದರು. ಹೌದು ನಮ್ಮ ನಟಸಾರ್ವಭೌಮ ರಾಜಕುಮಾರ್ ಅವರ ಕೊನೆಯ ಮಗನಾಗಿದ್ದ ಪುನೀತ್ ರಾಜಕುಮಾರ್ ಅವರು ಕೇವಲ 6 ತಿಂಗಳ ಸಣ್ಣ ವಯಸ್ಸಿನಲ್ಲಿಯೇ ನಟನೆ ಮಾಡಲು ಆರಂಭಿಸಿದರು. 10ನೇ ವರ್ಷದಲ್ಲಿ ರಾಷ್ಟ್ರಪ್ರಶಸ್ತಿ ತೆಗೆದುಕೊಂಡರು. ಹೀಗೆ ಅವರ ತಂದೆಯಂತೆಯೇ ಸದಾ ಇನ್ನೊಬ್ಬರಿಗೆ ಒಳಿತನ್ನು ಮಾಡುತ್ತಾ, ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಮೂಲ್ಯದ ಗುಣಗಳನ್ನು ಬೆಳಸಿಕೊಂಡಿದ್ದರು. ಆದರೆ ಇದೀಗ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಇವರ ಅಗಲಿಕೆ ಎಷ್ಟು ನೋವು ತಂದಿದೆ ಎಂದರೆ, ಪುನೀತ್ ಅವರು ಎಲ್ಲರನ್ನೂ ಬಿಟ್ಟು ಆರು ದಿನಗಳಾದರೂ ಈಗಲೂ ಸಹ ಇವರ ನೆನಪು ಹೆಚ್ಚು ಕಾಡುತ್ತಿದೆ. ಇವರ ಪ್ರತಿಯೊಂದು ಗಳಿಗೆ, ಅವರ ಆ ನಗು ಕಣ್ಣುಮುಚ್ಚಿದರೆ ಎದುರು ಬರುತ್ತಿದೆ. ಹೌದು ಸ್ನೇಹಿತರೆ ಪ್ರತಿಯೊಬ್ಬರು ನಿಜ ಜೀವನದಲ್ಲಿ ಹೇಗಿರಬೇಕು ಎಂಬುದಾಗಿ ಪುನೀತ್ ಅವರು ತೋರಿಸಿಕೊಟ್ಟಿದ್ದಾರೆ.

ಪುನೀತ್ ಅವರು 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಟರಾಗಿ ಮೊದಲ ಸಿನಿಮಾದಲ್ಲಿ ಕಾಣಿಸಿಕೊಂಡರು. ಇನ್ನೊಂದು ವಿಷಯ ಅಪ್ಪು ಅವರು ಶಿವಣ್ಣ ಅವರಿಗಿಂತ 13 ವರ್ಷ ಚಿಕ್ಕವರು. ಆ ಹಿರಿಯ ಜೀವಕ್ಕೆ ಪುನೀತ್ ಅವರ ಅಗಲಿಕೆ ಹೇಗ್ ಆಗಿರಬಾರದು. ಪುನೀತ್ ಒಟ್ಟು 29 ಸಿನೆಮಾಗಳಲ್ಲಿ ನಾಯಕನಟನಾಗಿ ಅಭಿನಯಿಸಿ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದವರು. ಪುನೀತ್ ಅವರ ಪತ್ನಿಯ ವಿಚಾರಕ್ಕೆ ಬರುವುದಾದರೆ, ಅಶ್ವಿನಿ ಅವರು ಕಾಮನ್ ಫ್ರೆಂಡ್ ಮೂಲಕ ಪುನೀತ್ ಅವರಿಗೆ ಪರಿಚಯ ಆಗುತ್ತಾರೆ. ಆ ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಈಗ ಪುನೀತ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ದೃತಿ ಹಾಗೂ ವಂದಿತ ಎಂದು ಅವರ ಹೆಸರಾಗಿದೆ. ಜೊತೆಗೆ ಪುನೀತ್ ಅವರ ಮದುವೆಯ ಸುಂದರ ಕ್ಷಣದ ಅಂದಿನ ಭಾವಚಿತ್ರಗಳು ಹೇಗಿದ್ದವು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ, ಮತ್ತು ತಪ್ಪದೇ ಪುನೀತ್ ಅವರ ಮದುವೆಯ ಕ್ಷಣಗಳು ಇಷ್ಟವಾದಲ್ಲಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು….