ಅಪ್ಪು ಇದೀಗ ಎಲ್ಲಿದ್ದಾರೆ ಅವರ ಆಸೆ ಏನಿತ್ತು? ಅವರ ಆತ್ಮ ಕರೆಸಿ ಮಾತಡ್ತೇನೆ ಎಂದ ಗುರೂಜಿ.!ವಿಡಿಯೋ ವೈರಲ್..

Cinema

ಸ್ನೇಹಿತರೆ ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅವರು ಕೇವಲ ತೆರೆಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿ ಅವರು ಆದರ್ಶದ ರೀತಿ ಬದುಕಿದ ಜೀವನ ನೋಡಿದರೆ ಇಷ್ಟು ಬೇಗನೆ ಸಾ’ವು ಅವರಿಗೆ ಬರುತ್ತದೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ. ಆದರೆ ಸಮಯದ ಮುಂದೆ ನಾವು ಸೋಲಲೇಬೇಕು ಎಂಬಂತೆ ಅಪ್ಪು ಅವರನ್ನು ನಮ್ಮಿಂದ ದೂರ ಮಾಡಿತು. ಹೌದು ಅಪ್ಪು ಅವರು ಇಲ್ಲವಾಗಿ 21 ದಿನಗಳು ಕಳೆದರೂ ಕೂಡ ದಿನಕ್ಕೆ ಒಂದು ಬಾರಿಯಾದರೂ ನಟ ಪುನೀತ್ ರಾಜಕುಮಾರ್ ಅವರನ್ನು ನೆನೆಸಿಕೊಳ್ಳದೆ ಇರಲು ಆಗುತ್ತಿಲ್ಲ.

ಅಷ್ಟು ನೋವು ಅವರ ಅಗಲಿಕೆ ಎಲ್ಲರಲ್ಲಿಯೂ ಇದೆ. ಹೌದು ಪುನೀತ್ ರಾಜಕುಮಾರ್ ಅವರ ವಿಚಾರವಾಗಿ ಇದೀಗ ಇನ್ನೊಂದು ಸುದ್ದಿ ಕೇಳಿಬಂದಿದ್ದು, ಪುನೀತ್ ಸಾ’ವನ್ನಪ್ಪಿದ ಮೇಲೆ ಅಮೆರಿಕದ ಪ್ಯಾರಾನಾರ್ಮಲ್ ತಜ್ಞ ಚಾರ್ಲಿ ಎಂಬಾತ ಅಪ್ಪು ಅವರ ಆ’ತ್ಮದ ಜೊತೆಗೆ ಮಾತನಾಡಿರುವುದಾಗಿ ಬಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಯಂತ್ರದ ಮೂಲಕ ಪುನೀತ್ ಅವರ ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿದ್ದು ವಿಡಿಯೋ ನೋಡಿ ನೆಟ್ಟಿಗರು ಕನ್ನಡಿಗರು ಪರ-ವಿರೋಧ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದರು. ಈ ರೀತಿ ಸು’ಳ್ಳು ಸು’ದ್ದಿ ಹಬ್ಬಿಸಬೇಡಿ ಎಂದು ಕೆಲವರು ಪ್ಯಾರಾನಾರ್ಮಲ್ ತಜ್ಞನ ವಿರುದ್ಧ ಚಾಟಿ ಬೀಸಿದರು. ಕೆಳಗಿನ ವಿಡಿಯೋ ನೋಡಿ..

ಇದೀಗ ಮತ್ತೊಬ್ಬ ಖ್ಯಾತ ಗುರೂಜಿ ಪುನೀತ್ ಅವರ ಆ’ತ್ಮದ ಜೊತೆ ನಾನು ಕೂಡ ಮಾತನಾಡುತ್ತೇನೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೌದು ಕರ್ನಾಟಕದವರೇ ಆದ ಇವರು ಈ ಹಿಂದೆ ಸಾಯಿಬಾಬಾ ಅವರ ಆ’ತ್ಮವನ್ನು ಬೇರೊಬ್ಬ ವ್ಯಕ್ತಿಯಲ್ಲಿ ಕರೆಸಿ ಮಾತನಾಡಿದ್ದರಂತೆ. ಅಂದು ಡಾ. ರಾಮಚಂದ್ರ ಗುರೂಜಿಯವ್ರು ಈ ವಿಷಯವಾಗಿಯೇ ತುಂಬಾನೆ ಚರ್ಚೆ ಆಗಿದ್ದರು. ಇದೀಗ ಇದೆ ಆ’ತ್ಮತಜ್ಞ ಮನೋತಜ್ಞ ರಾಮಚಂದ್ರ ಗುರೂಜಿ, ಪುನೀತ್ ಅವರ ಆತ್ಮವನ್ನು ಇನ್ನೊಬ್ಬ ವ್ಯಕ್ತಿಯ ದೇಹದಲ್ಲಿ ಕರೆಸಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ನಟ ಪುನೀತ್ ಅವ್ರಿಗೆ ಕೊನೆ ಗಳಿಗೆಯಲ್ಲಿ ಆಗಿದ್ದೇನು. ಅಷ್ಟಕ್ಕೂ ಇವರ ಕೊನೆ ಆಸೆ ಏನಾಗಿತ್ತು, ಹಾಗೆ ಇದೀಗ ಏಲ್ಲಿದ್ದಾರೆ ಮತ್ತೆ ಇದೇ ಕುಟುಂಬದಲ್ಲಿ ಹುಟ್ಟಿ ಬರಲು ಅಪ್ಪು ಇಚ್ಚಿಸುತ್ತಾರೋ, ಇಲ್ಲವೋ ಎಂಬುದನ್ನು ಸ್ಪಷ್ಟನೆ ನೀಡುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದಾರಂತೆ. ಇವರ ವಿಡಿಯೋ ನೋಡಿದ ಕೆಲವರು ಪುನೀತ್ ಅವರ ಈ ವಿಚಾರದಲ್ಲಿ ಇಂಟ್ರೆಸ್ಟ್ ತೋರಿಸಿದರೆ, ಇನ್ನೂ ಕೆಲವರು ಹೆಚ್ಚು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ, ಹಾಗೆ ರಾಮಚಂದ್ರ ಗುರೂಜಿ ಅವರ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು…