ಅಪ್ಪನ ಹಾದಿಯಲ್ಲೇ ನಡೆಯುತ್ತೀರೋ ದೃತಿ ಪುನೀತ್.!ಇವರ ಕೆಲಸಕ್ಕೆ ನೀವೂ ಸೆಲ್ಯೂಟ್ ಹಾಕ್ತಿರಾ.!

Cinema

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮೊನ್ನೆ ಕಳೆದ ಶುಕ್ರವಾರ ಇದ್ದಕ್ಕಿದ್ದಂತೆ ಹೃ’ದಯಾಘಾ’ತವಾಗಿದ್ದು ಅವ್ರಿಗೆ ಎ’ದೆನೋ’ವು ಮಾತ್ರ ಕಾಣಿಸಿಕೊಂಡಿತು. ಆದರೆ ಕೋಟಿ ಕೋಟಿ ಅಭಿಮಾನಿಗಳ ಹೃದಯವನ್ನು ಅಪ್ಪು ಇನ್ನಿಲ್ಲ ಎಂಬ ಒಂದು ಕ’ಹಿ ಸತ್ಯ ವಿಷಯ ಹೊ’ಡೆದೇ ಬಿಟ್ಟಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಸಾಕಷ್ಟು ಜನರು ಶಾಕ್ ಅಲ್ಲಿಯೇ, ಇದು ನಿಜಾನಾ, ಸುಳ್ಳಾ, ಅಥವಾ ಕನಸಾ ಎಂದು ಒಂದು ಬಾರಿ ಅವರೇ ಅವರನ್ನು ಪರೀಕ್ಷೆ ಮಾಡಿಕೊಂಡಿದ್ದು ಉಂಟು. ಹೌದು ನಟ ಪುನೀತ್ ಅವರು ಈಗೀಗ ಸಿನಿಮಾರಂಗಕ್ಕೆ ಬಂದವರು ಅಲ್ಲ. ಹುಟ್ಟಿದ ಆರು ತಿಂಗಳಲ್ಲಿಯೇ ಬಣ್ಣ ಹಚ್ಚಿದವರು. ಡಾಕ್ಟರ್ ರಾಜಕುಮಾರ್ ಅವರಂತೆಯೇ ಒಳ್ಳೆಯ ಮೌಲ್ಯದ ಗುಣಗಳನ್ನ ಅಳವಡಿಸಿಕೊಂಡು ಬಂದವರು.

ಅವರ ತಂದೆಯಂತೆ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದವರು. ಹಾಗೆ ಸಾಕಷ್ಟು ಜನರು ಪುನೀತ್ ಅವರು ರಾಜಕುಮಾರ್ ಅವರ ಹೋಲಿಕೆಯೇ ಇದ್ದಾರೆ. ಅವರ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದರು. ಅಪ್ಪು ಅವರು ಇನ್ನಿಲ್ಲ ಎಂಬ ಕ’ಹಿ ಸತ್ಯವನ್ನು ನಾವು ನಂಬಲೇಬೇಕು. ವಾಸ್ತವವನ್ನು ಅರಿತು ಜೀವನ ಮಾಡಲೇಬೇಕು. ಆದರೆ ಇವರ ನೆನಪು ಇವರ ಸಾಧನೆ ಯೌತ್ ಐಕಾನ್ ಆಗಿ ಬೆಳೆದಂತ ರೀತಿ ಯಾರು ಮರೆಯಲು ಸಾಧ್ಯವೇ ಇಲ್ಲ. ಇವರ ನಗುವನ್ನ ಕೂಡ ಎಂದಿಗೂ ಮರೆಯೋದಕ್ಕೆ ಆಗುವುದೇ ಇಲ್ಲ. ನಟನೆ ಮಾತ್ರ ಅಲ್ಲದೆ ಅಪ್ಪು ಅವರು ಸಮಾಜಕ್ಕೆ ಮಾಡಿದಂತಹ ಸೇವೆ, ಅನಾಥಾಶ್ರಮಗಳ ವೃದ್ಧಾಶ್ರಮ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದ ರೀತಿ ಶ್ಲಾಘನೀಯ. ಆದ್ರೆ ಇವರು ಇದ್ದಾಗ ಇಂತಹ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಎಲ್ಲಿಯೂ ಹೇಳಿ ಕೊಳ್ಳುತ್ತಿಲ್ಲ. ಅದಕ್ಕೆ ಇವರನ್ನ ರಾಜರತ್ನ ಕರೆಯುತ್ತಿದ್ದರು. ಆದ್ರೆ ಇಂದು ನಮ್ಮ ಜೊತೆ ಈ ರಾಜರತ್ನ ಪುನೀತ್ ಅವರು ಇಲ್ಲವಲ್ಲ ಎಂದು ಒಂದು ಸಣ್ಣ ನೋವು ಇದೆ.

ಅದನ್ನು ಬಿಟ್ಟರೆ ಪುನೀತ್ ಅವರು ದೊಡ್ಡಮನೆಯ ರಾಜರತ್ನವೇ ಸರಿ. ನಟ ರಾಜಕುಮಾರ್ ಅವರಂತೆ ಪುನೀತ್ ರಾಜಕುಮಾರ್ ಅವರು ಕೂಡ ಜೀವನದಲ್ಲಿ ಯಶಸ್ವಿಯಾಗಿದ್ದು, ಅಪಾರ ಅಭಿಮಾನಿ ಬಳಗವನ್ನು ಗಳಿಸಿ, ಸಮಾಜಮುಖೀ ಕೆಲಸ ಮಾಡಿ ತುಂಬಾನೇ ಪ್ರೀತಿ ಹಂಚಿದ್ದರು. ಅದೇ ರೀತಿ ಇದೀಗ ಪುನೀತ್ ಅವರ ಹಿರಿಯ ಮಗಳು ದೃತಿ ಪುನೀತ್ ಕೂಡ ಅಪ್ಪನಿಗೆ ಹೆಸರು ತರುವಂತಹ ಕೆಲಸವೊಂದನ್ನು ಮಾಡುತ್ತಿದ್ದಾರಂತೆ. ದೃತಿ ಅವರ ಈ ಕೆಲಸಕ್ಕೆ ನೀವು ಸಲ್ಯೂಟ್ ಹೊಡೆಯುತ್ತೀರಾ. ಹೌದು ಪುನೀತ್ ಅವರ ಪುತ್ರಿ ಧೃತಿ ಪುನೀತ್ ಅವರು, ಅವರ ತಂದೆಯಂತೆಯೇ ಒಳ್ಳೆಯ ಮೌಲ್ಯಗಳನ್ನು ಈ ಜೀವನದಲ್ಲಿ ಬೆಳೆಸಿಕೊಂಡಿದ್ದು, ಈ ಹಿಂದೆ ಅದೆಷ್ಟು ಅಂದ ಮಕ್ಕಳಿಗೆ ಬೆಳಕಾಗಿ ಅವರಿಗೆ ಸಹಾಯವನ್ನ ಮಾಡಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಇದೀಗ ಅದೆಷ್ಟೋ ಅಂದಮಕ್ಕಳ ಖರ್ಚನ್ನ ಕೂಡ ತಾವೇ ಭರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಏನೇ ಇರಲಿ ಅಪ್ಪನಂತೆ ಮಗಳು ಇನ್ನಷ್ಟು ಎತ್ತರ ಮಟ್ಟಕ್ಕೆ ಬೆಳೆಯಲಿ. ಸದಾ ಇನ್ನೊಬ್ಬರಿಗೆ ಸಹಾಯ ಮಾಡುತ್ತ, ಯಾವಾಗಲೂ ಎಲ್ರಿಗೂ ಒಳಿತನ್ನೇ ಬಯಸಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳೋಣ. ಧನ್ಯವಾದಗಳು