ಅಪ್ಪು ಇನ್ನಿಲ್ಲ ಎಂಬ ನೋವಿನಲ್ಲಿ ಇವರಿಗೆ ತರಾಟೆ ತೆಗೆದುಕೊಂಡ ಪ್ರಥಮ್..ಯಾರಂತ ಗೊತ್ತಾದ್ರೆ ನೀವೂ ಸಹ..

Cinema

ಕನ್ನಡ ಸಿನಿಮಾರಂಗದ ಪವರ್ ಸ್ಟಾರ್ ಪುನೀತ್ ಎಂದೇ ಪ್ರಖ್ಯಾತಿ ಹೊಂದಿದ ನಟ ಅಪ್ಪು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲದೆ, ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿದ್ದರು. ಸದಾ ಇನ್ನೊಬ್ಬರಿಗೆ ಹೆಚ್ಚು ಒಳ್ಳೆಯದನ್ನೇ ಬಯಸುತ್ತಿದ್ದ ಅಪ್ಪು ಅವರ ಒಳ್ಳೆಯ ನಡತೆ, ಪ್ರೀತಿ ಹಂಚುವ ರೀತಿ ಮುಖದಲ್ಲಿ ಸದಾ ಇರುತ್ತಿದ್ದ ಆ ನಗು ತುಂಬಾನೇ ಇದೀಗ ಕಾಡುತ್ತಿದೆ. ಅಪ್ಪು ಅವರು ಮೊನ್ನೆ ಶುಕ್ರವಾರ ಬೆಳಗ್ಗೆ ಹೃ’ದಯಾ ಘಾ’ತಕ್ಕೆ ಒಳಗಾಗಿ ವಿಕ್ರಮ್ ಆಸ್ಪತ್ರೆಯಲ್ಲಿ ಕೊ’ನೆಯುಸಿ’ರೆಳೆದರು. ಈ ವಿಚಾರ ಎಲ್ಲಾ ಕಡೆ ಕೇಳಿ ಬರುತ್ತಿದ್ದಂತೆ, ಪುನೀತ್ ಅವರು ಇನ್ನಿಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇಡೀ ರಾಜ್ಯದ ಜನತೆಗೆ ಶಾಕ್ ಆಗಿತ್ತು. ಕಣ್ಣೀರ ಕೋಡಿಯಲ್ಲಿ ಕನ್ನಡ ಚಿತ್ರರಂಗ ಮುಳುಗಿದ್ದು, ಎಂತಹ ನಟ ನಮ್ಮಿಂದ ಇಷ್ಟು ಬೇಗ ಇಲ್ಲವಾದರೆ ಎಂದು ಪ್ರತಿಯೊಬ್ಬರು ಸಹ ಕಣ್ಣೀರು ಸುರಿಸಿದರು.

ಹಾಗೆ ಅಭಿಮಾನಿಗಳಿಗಂತೂ ಕೇಳಲೇಬೇಡಿ ಹೆಚ್ಚು ನೋವು ಕಣ್ಣೀರು ಯಾರೋ ನಮ್ಮ ಮನೆಯ ಮಗನೆ ತೀರಿ ಹೋಗಿದ್ದಾನೆ ಎನ್ನುವಂತೆ ಭಾಸವಾಗಿ ನೋವಿನಲ್ಲಿ ಅಭಿಮಾನಿಗಳು ಕಣ್ಣೀರನ್ನು ಹಾಕಿದರು. ಶುಕ್ರವಾರದಿಂದ ಹಿಡಿದು ಭಾನುವಾರದ ಬೆಳಗ್ಗೆವರೆಗೂ ಅಪ್ಪು ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು. ರಾಜ್ಯದ ಪ್ರತಿಯೊಂದು ಮೂಲೆಮೂಲೆಯಿಂದ ಸಾಗರದಂತೆ ಅಭಿಮಾನಿಗಳು ಲಕ್ಷಾಂತರ ಅಭಿಮಾನಿ ಬಳಗ ಬಂದು ಕಣ್ಣೀರಿನಲ್ಲೇ ಪುನೀತ್ ಅವರ ಅಂತಿಮ ದರ್ಶನ ಪಡೆಯಿತು. ಹೌದು ಈ ವಿಚಾರವಾಗಿ ಬಿಗ್ ಬಾಸ್ ಪ್ರಥಮ್ ಟ್ವೀಟ್ ಒಂದನ್ನು ಮಾಡಿದ್ದು ಅಪ್ಪು ಸರ್ ಅವರ ಅಂತಿಮ ದರ್ಶನಕ್ಕಾಗಿ ಅಭಿಮಾನಿಗಳು ಮೂಲೆಮೂಲೆಯಿಂದ ಬೇರೆ ಬೇರೆ ರಾಜ್ಯದಿಂದ ಹಾಗೂ ತೆಲುಗು ಸಿನಿಮಾರಂಗದಿಂದ ದೊಡ್ಡ ದೊಡ್ಡ ನಟರುಗಳು ಬಂದು ದರ್ಶನ ಪಡೆದರು. ಆದರೆ ತಮಿಳು ನಟರು ಒಬ್ಬರು ಬರಲಿಲ್ಲ ಎಂದು ಪ್ರತಮ್ ಕಿ’ಡಿಕಾರಿದ್ದಾರೆ.

ರಜನಿಕಾಂತ್ ಅವರಿಗೆ ಹುಷಾರಿರಲಿಲ್ಲ, ಮಿಕ್ಕವರೆಲ್ಲ ಏನು ಕಿ’ತ್ತಾಕ್ತಿದ್ದರು, ಕನ್ನಡಿಗರಿಗೆ ಸ್ವಾಭಿಮಾನ ಇದ್ದಲ್ಲಿ ಅವರ ಸಿನಿಮಾಗಳನ್ನು ನೋಡಬೇಡಿ, ಕರ್ನಾಟಕದಲ್ಲಿ ಅವರ ಚಿತ್ರ ಬಿಡುಗಡೆ ಮಾಡಬೇಡಿ ಎಂದು ಪ್ರಥಮ್ ಆಕ್ರೋಶ ಹೊರಹಾಕಿದ್ದಾರೆ. ಹೌದು ಜೊತೆಗೆ ಪುನೀತ್ ಅವರ ಅಂತಿಮಕ್ರಿಯೆ ಆಗುವವರೆಗೂ 48 ಗಂಟೆಗಳ ಕಾಲ ಎಲ್ಲಾ ಪೋಲಿಸರ ಕಾರ್ಯವನ್ನು ಮೆಚ್ಚಿ ಪ್ರಥಮ್, ಅವರಿಗೂ ಸಹ ಧನ್ಯವಾದ ತಿಳಿಸಿದರು. ಹೌದು ಏನೇ ಇರಲಿ ದೇವರು ಇಷ್ಟು ಕ್ರೂ’ರಿ ಆಗಬಾರದಿತ್ತು. ಪುನೀತ್ ಅವರ ಅಗಲಿಕೆ ಈಗಲೂ ಸಹ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಂತಹ ಒಬ್ಬ ಒಳ್ಳೆಯ ಪ್ರತಿಭಾವಂತ ನಟ, ಒಳ್ಳೆಯ ಮನೋಭಾವವುಳ್ಳ ಸಮಾಜಮುಖಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಒಳ್ಳೆ ವ್ಯಕ್ತಿತ್ವದ ಅಪ್ಪು ಅವರನ್ನ ಆ ದೇವರು ಇಷ್ಟು ಬೇಗ ಮೇಲಕ್ಕೆ ಕರೆಸಿಕೊಳ್ಳಬಾರದಿತ್ತು. ವಾಸ್ತವ ಕಹಿಸತ್ಯ ಒಪ್ಪಿಕೊಳ್ಳಲೇಬೇಕು, ಆದರೆ ದೇವರಿಗೆ ಈಗಲೂ ಸಹ ಅಪ್ಪು ಅಗಲಿಕೆಗೆ ನೋವಿನಿಂದ ಅಭಿಮಾನಿಗಳು ಹಿ”ಡಿಶಾ’ಪ ಹಾಕುತ್ತಿದ್ದಾರೆ. ದೇವರನ್ನು ಬೈದುಕೊಂಡರು ಏನು ಪ್ರಯೋಜನ ಇಲ್ಲ, ಕಾಲಚಕ್ರ ಇದು ಇಂದಲ್ಲ ನಾಳೆ ಎಲ್ಲರೂ ಒಂದಲ್ಲ ಒಂದು ದಿವಸ ಅಲ್ಲಿಗೆ ಹೋಗುವುದೇ. ಈ ವಾಸ್ತವ ಅರಿತು ಜೀವನ ಮಾಡಲೇಬೇಕು ನೋವಿನಲ್ಲಿ ನಗುವಿನಲ್ಲಿ ಜೀವನ ಮಾಡಲೇಬೇಕು ಅಲ್ಲವೇ…