ಅಪ್ಪು ಸರ್ ನಮ್ಮ ಕುಟುಂಬಕ್ಕೆ ಯಾವ 5ಲಕ್ಷ ಕೊಟ್ಟಿಲ್ಲ.!ಬುಲೆಟ್ ಪ್ರಕಾಶ್ ಪುತ್ರ ಹೇಳಿದ್ದಿಷ್ಟು..

Cinema

ಬಂಧುಗಳೇ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಯಾರಿಗೂ ಕೂಡ ಅರಗಿಸಿಕೊಳ್ಳಲು ಇಂದಿಗೂ ಆಗುತ್ತಿಲ್ಲ. ಪ್ರತಿ ದಿನ ಅವರ ನೆನಪು ಹೆಚ್ಚು ಕಾಡುತ್ತಿದೆ. ಅವರ ನಗುಮುಖ ಇನ್ನು ನಮ್ಮ ಕಣ್ಣ ಮುಂದೆಯೇ ಹೆಚ್ಚು ಹೆಚ್ಚು ಬರುತ್ತಿದೆ. ಪುನೀತ್ ರಾಜಕುಮಾರ್ ಅವರ ಅಕಾಲಿಕ ಮ’ರಣದ ನಂತರ ಅವರ ಸಮಾಜಮುಖಿ ಕೆಲಸಗಳು, ಅವರು ಬದುಕಿದ್ದಾಗ ಮಾಡಿದ್ದ ತುಂಬಾ ಸಹಾಯಗಳು ಈಗೀಗ ಹೆಚ್ಚು ಬೆಳಕಿಗೆ ಬರುತ್ತಿವೆ. ಅಪ್ಪು ಅವರಿಂದ ಸಹಾಯ ಪಡೆದವರು ಅವರ ಬಗ್ಗೆ ಈಗ ಮಾಧ್ಯಮದ ಎದುರು ಹೇಳುತ್ತಿದ್ದು, ಪುನೀತ್ ಅವರ ಸಹಾಯ ನೆನೆದು, ಅವರ ಅಗಲಿಕೆಗೆ ಕಣ್ಣೀರು ಸುರಿಸುತ್ತಿದ್ದಾರೆ.

ಪುನೀತ್ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ಅವರನ್ನು ಅವರು ಮೈಗೂಡಿಸಿಕೊಂಡವರು. ಯಾವ ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸದೆ, ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಗೊತ್ತಾಗಬಾರದು ಎಂಬಂತೆ ಕಷ್ಟ ಎಂದ ಜನರಿಗೆ ಸಹಾಯ ಮಾಡುತ್ತ ಬಂದವರು. ಆದರೆ ವಿಧಿ ತುಂಬಾನೇ ಕ್ರೂ’ರಿ ಆಗಿಬಿಟ್ಟ. ಪುನೀತ್ ಅವರನ್ನು ನಮ್ಮಿಂದ ಬೇಗನೆ ಕಿತ್ತುಕೊಂಡ. ಹೌದು ಮೊದಲಿಗೆ ಪುನೀತ್ ಅವರು ಇದ್ದಾಗ ಮಾಡಿದ ಸಹಾಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಪೋಸ್ಟ್ಗಳ ಮುಖಾಂತರ ಹೊರಬರುತ್ತಿವೆ. ಅಂತಹ ಪೋಸ್ಟ್ ಗಳ ಪೈಕಿ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಮತ್ತು ನಟ ಪುನೀತ್ ಅವರ ವಿಚಾರವಾಗಿ ಒಂದು ಪೋಸ್ಟ್ ಕಂಡು ಬಂದಿದೆ.

ಪುನೀತ್ ಬುಲೆಟ್ ಪ್ರಕಾಶ್ ಸಾ’ವನ್ನಪ್ಪಿದ ವೇಳೆ, ಅವರ ಕುಟುಂಬಕ್ಕೆ ಧೈರ್ಯದ ಮತ್ತು ಸಮಾಧಾನದ ಮಾತುಗಳನ್ನು ಹೇಳಿ ಬುಲೆಟ್ ಪ್ರಕಾಶ್ ಮನೆಗೆ ಹೋಗಿ ಆ ಕುಟುಂಬಕ್ಕೆ 5 ಲಕ್ಷ ಹಣ ನೀಡಿ ಬಂದಿದ್ದರು ಎಂಬುದಾಗಿ ರಕ್ಷಕ್ ಅವರೇ ಹೇಳಿಕೊಂಡಿದ್ದಾರೆ ಎಂದು ಸೋಶಿಯಲ್ ಮುಖಾಂತರ ಒಂದು ಪೋಸ್ಟ್ ಹೆಚ್ಚು ಹರಿದಾಡಿ ವೈರಲ್ ಆಗುತ್ತಿದೆ. ಅದೇ ಕುರಿತು ಇದೀಗ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈ ಬಗ್ಗೆ ಸ್ಪಷ್ಟ ಹೇಳಿಕೆ ಕೊಟ್ಟಿದ್ದಾರೆ. ಹೌದು ದೊಡ್ಡಮನೆ ಬಗ್ಗೆ ನಮಗೆ ಗೌರವವಿದೆ, ಆದರೆ ಪುನೀತ್ ಸರ್ ನಮಗೆ ಐದು ಲಕ್ಷ ಹಣ ಕೊಟ್ಟಿಲ್ಲ, ಸುಳ್ಳು ವ’ದಂತಿಯನ್ನ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

ನಟ ಪುನೀತ್ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ, ಆದರೆ ನಿಖರ ಮಾಹಿತಿ ಇದ್ದಲ್ಲಿ ಮಾತ್ರ ಅವರು ಮಾಡಿದ ಸಹಾಯಗಳ ಬಗ್ಗೆ ಪೋಸ್ಟ್ ಮಾಡಿ, ಈ ರೀತಿ ನ’ಕಲಿ ವಿಷಯ ಹೇಳಬೇಡಿ ಎಂದು ಸೋಶಿಯಲ್ ಪ್ರಿಯರು ಹೇಳುತ್ತಿದ್ದಾರೆ. ಸ್ನೇಹಿತರೇ, ಯಾವುದೇ ರೀತಿಯ ಪ್ರಚಾರ ಬಯಸದೆ ಸಾಮಾಜಿಕ ಸೇವೆ ಮಾಡಿರುವ ಪುನೀತ್ ಸರ್ ಅವರ ಬಗ್ಗೆ ಇರುವ ನಿಖರ ಮಾಹಿತಿಯನ್ನಷ್ಟೇ ಹೇಳಿ, ಅದನ್ನ ಬಿಟ್ಟು ಈ ರೀತಿ ಸು’ಳ್ಳು ಸು’ದ್ದಿ ಹಬ್ಬಿಸುವುದು, ಅವರಿಗೆ ಅವಮಾನ ಮಾಡಿದಂತೆ..ಎಂಬುದು ಅಭಿಮಾನಿಗಳು ನೆಟ್ಟಿಗರ ಅಭಿಪ್ರಾಯವಾಗಿದೆ.