ಪುನೀತ್ ಗಾಗಿ ಚೀನಾ ಹುಡುಗಿಯ ಬಾಯಲ್ಲಿ ಅಪ್ಪು ಹಾಡು.!ಈ ವೈರಲ್ ವಿಡಿಯೋ ನೋಡಿ..

Cinema

ಕನ್ನಡದ ಮುತ್ತು ಪವರ್ ಸ್ಟಾರ್ ಪುನೀತ್ ಅವರು ಈಗಾಗಲೇ ಅಕಾಲಿಕ ಮರಣಕ್ಕೆ ತುತ್ತಾಗಿ 13 ದಿನಗಳು ಕಳೆದಿವೆ. ಈಗಲೂ ಕೂಡಾ ಪುನೀತ್ ಅವರು ಎಲ್ಲಿ ಹೋಗಿಲ್ಲ ನಮ್ಮ ಜೊತೆ ಇದ್ದಾರೆ ಎಂದೆನಿಸುತ್ತಿದೆ. ಆದರೆ ವಾಸ್ತವ ಅರಿತರೆ ಅಪ್ಪು ಅವರು ಈಗ ನಮ್ಮನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ಯೋಚಿಸಿದರೆ ನಮ್ಮಲ್ಲಿಯ ಕಣ್ಣೀರು ನಮಗೆ ಗೊತ್ತಿಲ್ಲದಂತೆ ತನ್ನಂತಾನೇ ಜಾರುತಿದೆ. ಪುನೀತ್ ರಾಜಕುಮಾರ್ ಅವರು ಕೇವಲ ತೆರೆಯಮೇಲೆ ಮಾತ್ರವಲ್ಲದೆ ಹೆಚ್ಚು ಲೆಕ್ಕವಿಲ್ಲದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿ ತುಂಬಾ ಪ್ರೀತಿ ಹಂಚುತ್ತಿದ್ದರು. ಕಷ್ಟ ಎಂದು ಬಂದವರಿಗೆ ಯಾರನ್ನು ಕೂಡ ಬರಿಗೈಯಲ್ಲಿ ಕಳಿಸಿ ಕೊಡುತ್ತಿರಲಿಲ್ಲ. ಹೌದು ಪುನೀತ್ ರಾಜಕುಮಾರ್ ಅಗಲಿಕೆ ಈಗಲೂ ಕೂಡ ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಪುನೀತ್ ಅವರ ಒಂದೊಂದು ಕಾರ್ಯಗಳು ಈಗ ಹೆಚ್ಚು ಕೇಳಿಬರುತ್ತಿವೆ. ಪುನೀತ್ ಬದುಕಿದ್ದಾಗಲೇ ಅವರು ಮಾಡುವ ಸಹಾಯ ಎಲ್ಲಿಯೂ ಹೆಚ್ಚು ಪ್ರಚಾರ ಆಗದಂತೆ ಸಹಾಯ ಮಾಡುತ್ತಿದ್ದರು. ಜೊತೆಗೆ ಅವರು ಮಾಡುವ ಸಹಾಯ ಯಾರಿಗೂ ಗೊತ್ತಾಗದ ಹಾಗೇನೇ ಮಾಡುತ್ತಿದ್ದರು. ಸಹಾಯ ಪಡೆದ ವ್ಯಕ್ತಿಗೆ ಮೊದಲೇ ಸೂಚನೆ ನೀಡಿ, ನಾನು ಸಹಾಯ ಮಾಡಿದೆ ಎಂದು ಎಲ್ಲಿ ಹೇಳಬೇಡಿ ಎಂದು ಹೇಳಿ ಸಹಾಯ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಪುನೀತ್ ಅವರ ಅಗಲಿಕೆ ಕೇವಲ ಅಭಿಮಾನಿಗಳಿಗೆ ಮಾತ್ರ ಅಲ್ಲದೆ, ಅವರ ಕುಟುಂಬಕ್ಕೆ ಹೆಚ್ಚು ನೋವಾಗಿದೆ. ಹಾಗೆ ಇಡೀ ಸಮಾಜಕ್ಕೆ ಭಾರತೀಯ ಚಿತ್ರರಂಗ ಹಾಗೂ ನಮ್ಮ ಕನ್ನಡ ಸಿನಿಮಾ ರಂಗಕ್ಕೂ ಎಲ್ಲರಿಗೂ ಕೂಡ ದೊಡ್ಡ ಹೊಡೆತ ಬಿದ್ದಂತಾಗಿದೆ. ಹೌದು ಎಲ್ಲರಿಗೂ ಕೂಡ ಮರೆಯಲಾಗದ ನೋವು ಆವರಿಸಿಕೊಂಡಿದೆ. ಅಪ್ಪು ಅವರು ತುಂಬಾನೇ ಪ್ರಸಿದ್ಧಿ ಪಡೆದವರು. ಸಾಕಷ್ಟು ಷೋ ಮೂಲಕ ಬಂದ ಹಣವನ್ನು ಸಮಾಜ ಕಾರ್ಯಕ್ಕೆ ಬಳಸುತ್ತಿದ್ದವರು.

ಪುನೀತ್ ಸಣ್ಣ ಮಕ್ಕಳಿಗೂ ತುಂಬಾ ಇಷ್ಟ ಆಗುತ್ತಿದ್ದರು. ನಮ್ಮ ದೇಶದಲ್ಲಿ ಮಾತ್ರ ಅಲ್ಲದೆ ಬೇರೆ ದೇಶದ ಚಿಕ್ಕ ಚಿಕ್ಕ ಮಕ್ಕಳಿಗೆ ಅಪ್ಪು ಅಚ್ಚು ಮೆಚ್ಚು. ಹೌದು ಪುನೀತ್ ಅವರು ಈಗಾಗಲೇ ಎಲ್ಲರಿಂದ ತುಂಬಾ ದೂರ ಹೋಗಿದ್ದಾರೆ. ದೈಹಿಕವಾಗಿ ಮಾತ್ರ ಈಗ ನಮ್ಮ ಜೊತೆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇವರ ಹೆಚ್ಚು ಕಾರ್ಯಗಳು, ಮಾಡಿದ ಸಹಾಯಗಳ ಹೆಚ್ಚು ಸುದ್ದಿ ಹರಿದಾಡುತ್ತಿವೆ. ಇದರಕೊಟ್ಟಿಗೆ ಇದೀಗ ಚೀನಾ ದೇಶದ ಒಬ್ಬ ಬಾಲಕಿ ಪುನೀತ್ ಅಭಿಮಾನಿ ಎನ್ನಲಾಗಿದ್ದು, ನಟ ಪುನೀತ್ ಅವರಿಗೆ ಒಂದು ಹಾಡನ್ನು ಹಾಡಿದ್ದಾರೆ. ಆದರೆ ಈ ಹಾಡು ಕೇಳಲು ಇದೀಗ ಪುನೀತ್ ಅವರೇ ಇಲ್ಲ. ಈ ಪುಟ್ಟ ಬಾಲಕಿ ಹಾಡಿದ ಅಪ್ಪು ಅವರ ಚಿತ್ರದ ಹಾಡಿನ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಒಂದು ಬಾರಿ ನೀವು ನೋಡಿ, ಇಷ್ಟವಾದರೆ ಶೇರ್ ಮಾಡಿ..