ಅಂದು ಜಗ್ಗೇಶ್ ಅವರು 17ನೇ ನಂಬರ್ ಬಗ್ಗೆ ಅಪ್ಪು ಕುರಿತು ಹೇಳಿದ್ದ ಮಾತುಗಳು ಅಕ್ಷರಶಃ ನಿಜವಾಗಿಬಿಟ್ಟಿದೆ.!

Cinema

ಸ್ನೇಹಿತರೇ, ಕೆಲ ವ್ಯಕ್ತಿಗಳೇ ಹಾಗೆ, ಮನಸ್ಸಿನಲ್ಲಿ ಅಳಸಿಹಾಕದಷ್ಟು ನೆಲೆಯೂರಿಬಿಡುತ್ತಾರೆ. ಹೌದು, ನಮ್ಮ ಬಂಧುವಲ್ಲ, ನೆಂಟರಲ್ಲ, ನಮಗೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ..ಆದರೂ ಮರೆತರು ಮರೆಯಲಾಗದಷ್ಟು ನೋವು..ಅಪ್ಪು ಸಾರ್ ಈಗ ಭೂಮಿ ಮೇಲೆ ಇಲ್ಲ ಎಂಬುದನ್ನ ಇನ್ನು ಕೂಡ ಲಕ್ಷಾಂತರ ಜನ ನಂಬಲು ತಯಾರಿಲ್ಲ..ಪುನೀತ್ ರಾಜ್ ಕುಮಾರ್ ಅವರು ಕೇವಲ ಸಿನಿಮಾ ಹಾಗೂ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ..ಸ್ವತಃ ತಮ್ಮ ಬಲಗೈಗೂ ಗೊತ್ತಾಗದಂತೆ ದಾನ ಧರ್ಮ ಮಾಡುತ್ತಿದ್ದ ರಣವಿಕ್ರಮ. ಯಾರಿಗೂ ಗೊತ್ತಿಲ್ಲದಂತೆ ಮಾಡುತ್ತಿದ್ದ ಅವರ ಸಾಮಾಜಿಕ ಕಾರ್ಯಗಳೇ ಇದಕ್ಕೆ ಸಾಕ್ಷಿ..ಸೂಪರ್ ಸ್ಟಾರ್ ಮಗನಾಗಿ ಹುಟ್ಟಿದರೂ ಕೂಡ ತನ್ನ ಸ್ವಂತ ಪರಿಶ್ರಮದಿನ ಸ್ಯಾಂಡಲ್ವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದ ವ್ಯಕ್ತಿ..ಹೌದು, ಅಭಿನಯದಲ್ಲಾಗಲಿ, ಡ್ಯಾನ್ಸ್ ನಲ್ಲಾಗಲಿ, ಗಾಯನದಲ್ಲಾಗಲಿ, ತಾನೇ ಸ್ಟಂಟ್ಸ್ ಮಾಡುವುದರಲ್ಲಾಗಲಿ ಅಷ್ಟೇ ಅಲ್ಲ ಸದಾ ಜಿಮ್, ವ್ಯಾಯಾಮ ಅಂತೆಲ್ಲಾ ಮಾಡುತ್ತಾ ಯುವಜನಾಂಗಕ್ಕೆ ಮಾದರಿಯಾಗಿ ಬೆಳೆದವರು ನಮ್ಮ ಅಪ್ಪು ಸರ್..

ಇದೆಲ್ಲದಕ್ಕಿಂತ ಹೆಚ್ಚಾಗಿ ತಾನು ಸ್ಟಾರ್ ಎಂಬ ಹುಂಬಿಲ್ಲದೆ ಚಿಕ್ಕವರಿಂದ ಹಿಡಿದು ಮುದುಕರವರೆಗೂ ಗೌರವ ಕೊಡುತ್ತಿದ್ದ ವ್ಯಕ್ತಿ..ಹೀಗೆ ಅಪ್ಪು ಅವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯೇ..ಇನ್ನು ಪುನೀತ್ ಸರ್ ಕುರಿತು ಬಹಳಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲೊಂದು ಅಪ್ಪು ಅವರು ಹುಟ್ಟಿದ 17ನೇ ತಾರೀಖಿನ ಬಗ್ಗೆ..ಹೌದು, ಅಣ್ಣಾವ್ರ ಬಹು ದೊಡ್ಡ ಅಭಿಮಾನಿಯಾಗಿರುವ ನವರಸ ನಾಯಕ ಜಗ್ಗೇಶ್ ಅವರು, ಪುನೀತ್ ಅವರು ನಡೆಸಿಕೊಡುತ್ತಿದ್ದ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಅಪ್ಪು ಅವರ ಹುಟ್ಟಿದ ದಿನಾಂಕದ ಕುರಿತು ಹೇಳಿರುವ ಮಾತು ಇಂದು ಅಕ್ಷರಶಃ ನಿಜವಾಗಿಬಿಟ್ಟಿದೆ..ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಜಗ್ಗೇಶ್ ಅವರು 17ನೇ ತಾರೀಖಿನ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ..

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹುಟ್ಟಿದ್ದು ನಂಬರ್ ೧೭, ತಮಿಳಿನ ಮೇರು ನಟ ಎಂ.ಜಿ.ರಾಮಚಂದ್ರನ್(MGR) ಅವರು ಹುಟ್ಟಿದ್ದು,ನಂಬರ್ ೧೭, ಇನ್ನು ಪುನೀತ್ ರಾಜ್ ಕುಮಾರ್ ಅವರೂ ಕೂಡ ಹುಟ್ಟಿದ್ದು 17ನೇ ದಿನಕದಂದೇ..ಎಂದು ಹೇಳುತ್ತಾ..ಜಗ್ಗೇಶ್ ಅವರು ಹೇಳುತ್ತಾರೆ ಇದರ ಬಗ್ಗೆ ಒಂದನ್ನ ತುಂಬಾ ಹೆಮ್ಮೆಯಿಂದ ಹೇಳುತ್ತೇನೆ..ಎಲ್ಲರೂ ಒಂದು ದಿನ ಸಾ’ಯುತ್ತಾರೆ..ಆದರೆ ಈ ನಂಬರ್ ನಲ್ಲಿ ಹುಟ್ಟಿದವರು ಸ’ತ್ತ ಮೇಲೆ ಕೂಡ ಬದುಕುತ್ತಾರೆ..ಇದೆ ೧೭ನಂಬರ್ ನ ಬ್ಯೂಟಿ ಎಂದು ನಟ ಜಗ್ಗೇಶ್ ಅವರು ಹೇಳುತ್ತಾರೆ. ಒಟ್ಟಿನಲ್ಲಿ ಕಾಕತಾಳಿಯವೋ ಎಂಬಂತೆ ನಟ ಜಗ್ಗೇಶ್ ಅವರು ಹೇಗೆ ತುಂಬಾ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರೋ ಹಾಗೆಯೆ ನಡೆದಿದೆ..ಆದರೆ ದುರದೃಷ್ಟ ಕರುನಾಡ ಒಂದು ಅದ್ಭುತ ಮಾಣಿಕ್ಯವನ್ನ ಕಳೆದುಕೊಡನಿರುವಂತೂ ಸತ್ಯ..ಏಕೆಂದರೆ ಪುನೀತ್ ಅವರ ಸ್ಥಾನವನ್ನ ಬೇರೆ ಯಾವ ನಟನಿಂದಲೂ ತುಂಬುವುದಕ್ಕೆ ಸಾಧ್ಯವಿಲ್ಲ ಎಂಬುದು ಅಷ್ಟೇ ಪರಮ ಸತ್ಯ…