ಅಪ್ಪು ಥೇಟ್ ಅವರ ತಂದೆಯಂತೆ, ಆದರೆ ಶಿವಣ್ಣ ಯಾರ ರೀತಿ ಗೊತ್ತೇ.!ಇದ್ರ ಬಗ್ಗೆ ಸ್ವತಃ ಅಣ್ಣಾವ್ರು ಹೇಳಿದ್ದೇನು ಗೊತ್ತೇ?

Cinema

ನಿಮಗೆಲ್ಲ ಗೊತ್ತು ಅಪ್ಪು ಅವರು ಗುಣದಲ್ಲಿ ,ನಡೆತೆಯಲ್ಲಿ ಅಭಿನಯದಲ್ಲಿ ಥೇಟ್ ಡಾ.ರಾಜ್ ಕುಮಾರ್ ಅವರ ರೀತಿ. ಅದೇ ಸರಳತೆ, ಸೌಜನ್ಯ ನಯ ವಿನಯ, ಅದೇ ನಗು, ಅದೇ ಮುಗ್ಧ ಮನಸ್ಸು. ಹೀಗೆ ಪುನೀತ್ ಒಳ್ಳೆ ತನದಲ್ಲಿ ದಾನ ಧರ್ಮ ದಲ್ಲಿ ತಮ್ಮ ತಂದೆಯನ್ನೇ ಮೀರಿಸಿದವರು. ಎಷ್ಟೋ ಜನ ಪುನೀತ್ ಅವರಲ್ಲಿ ರಾಜಣ್ಣ ಅವರನ್ನು ಕಂಡಿದ್ದಾರೆ. ರಾಜ್ ಕುಮಾರ್ ಅವರಲ್ಲಿ ಇದ್ದ ಸರ್ವ ಸದ್ಗುಣ, ಕಲೆ ರ’ಕ್ತಗತವಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಬಂದಿವೆ. ಆದರೆ ಶಿವಣ್ಣ ಸ್ವಲ್ಪ ಭಿನ್ನ ಅವರಿಗೆ ಬಹಳ ಬೇಗ ಕೋ’ಪ ಬರುತ್ತದೆ. ಆದರೆ ಮನಸ್ಸು ಮಾತ್ರ ಮೃದು. ಹಾಗಾದರೆ ಶಿವರಾಜ್ ಕುಮಾರ್ ಯಾರ ರೀತಿ ಗೊತ್ತೇ? ಈ ಕುರಿತು ಸ್ವತಃ ರಾಜ್ ಕುಮಾರ್ ಅವರು ಹೇಳಿದ್ದೇನು ತಿಳಿಯೋಣ ಬನ್ನಿ.

ರಾಜ್ ಕುಮಾರ್ ಅವರು ತಮ್ಮ ಹಿರಿಯ ಪುತ್ರ ಶಿವರಾಜ್ ಕುಮಾರ್ ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರಂತೆ. ಕಾರಣ ಶಿವಾರಜ್ ಕುಮಾರ್ ಥೇಟ್ ಅವರ ತಾತ ಸಿಂಗಾ ನಲ್ಲೂರು ಪುಟ್ಟ ಸ್ವಾಮಯ್ಯ ಅವರ ರೀತಿ. ರಾಜ್ ತಂದೆ ಪುಟ್ಟ ಸ್ವಾಮಯ್ಯ ನವರು ಬಹಳ ದೊಡ್ಡ ಕಲಾವಿದರು. ನಾಟಕ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಹೊಂದಿದ್ದವರು. ಆದರೆ ಅವರಿಗೆ ಸ್ವಲ್ಪ ಕೋ’ಪ ಜಾಸ್ತಿ. ಮೂಗಿನ ತುದಿಯಲ್ಲೇ ಸಿ’ಟ್ಟು. ಅವರು ನಾಟಕದಲ್ಲಿ ಮಾಡುತಿದ್ದ ಕೆಲವು ಪಾತ್ರಗಳನ್ನು ನೋಡಿ ರಾಜ್ ಕುಮಾರ್ ರವರೇ ಹೆ’ದರುತ್ತಿದ್ದರು. ಅವರ ಘ’ರ್ಜನೆಗೆ ಜನರ ಎದೆ ನ’ಡುಗುತ್ತಿತ್ತು . ಅಂಥಾ ಅಭಿನಯ ಅವರದು. ಮನೆಯಲ್ಲಿ ಅಷ್ಟೆ, ಕೋ’ಪದಿಂದ ಅವರೇನಾದರೂ ಗ’ದರಿದರೆ ರಾಜ್ ಕುಮಾರ್ ಹೆದರುತ್ತಿದ್ದರಂತೆ.

ಶಿವರಾಜ್ ಕುಮಾರ್ ಅವರು ತಮ್ಮ ತಾತನನ್ನು ಹೋಲುತ್ತಾರಂತೆ. ಶಿವಣ್ಣನನ್ನು ನೋಡಿದಾಗ ರಾಜ್ ಕುಮಾರ್ ಅವರಿಗೆ ತಮ್ಮ ತಂದೆಯನ್ನೇ ನೋಡಿದಷ್ಟು ಸಂತೋಷ ವಾಗುತ್ತಿತ್ತು ಆದ್ದರಿಂದಲೇ ಅವರು ಶಿವಣ್ಣ ನವರನ್ನು ಅಪ್ಪಾಜಿ ಅಪ್ಪಾಜಿ ಎಂದು ಸಂಭೋದಿಸುತ್ತಿರು.ಈ ಕುರಿತು ರಾಜ್ ಕುಮಾರ್ ಅವರೇ ಸಾಕಷ್ಟು ಭಾರಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಕನ್ನಡದ ಮನೆ ಮಗ, ಯುವರತ್ನ ಅಪ್ಪು ಅವರು ಇಹಲೋಕ ತ್ಯಜಿಸಿದ ಮೇಲೆ ಶಿವಣ್ಣ ಈ ಎಲ್ಲಾ ನೆನಪುಗಳನ್ನು ಮೆಲುಕುಹಾಕಿದ್ದಾರೆ. ಅಪ್ಪು ಥೇಟ್ ಅಪ್ಪಾಜಿ ತರ. ಆದರೆ ನಾನು ನನ್ನ ತಾತನ ತರ ಎಂದು ಅಪ್ಪಾಜಿ ಯಾವಾಗಲೂ ಹೇಳುತ್ತಿದ್ದರು ಎಂದು ಪುನೀತ್ ಮದುವೆಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ಅಷ್ವಿನಿಯವರನ್ನು ಪ್ರೀತಿಸುತ್ತಿದ್ದ ವಿಷಯವನ್ನು ಮೊದಲು ಶಿವಣ್ಣ ಬಳಿ ಹೇಳಿಕೊಂಡಿದ್ದಾರೆ.

ಆನಂತರ ಶಿವಣ್ಣ ಧೈರ್ಯದಿಂದ ಅಪ್ಪಾಜಿ ಯವರ ಬಳಿ ಹೋಗಿ ಈ ವಿಷಯ ತಿಳಿಸಿದರಂತೆ. ಆಗ ರಾಜ್ ಕುಮಾರ ಪುನೀತ್ ಅವರನ್ನು ಕರೆದು ಇದನ್ನು ನನ್ನ ಬಳಿ ಹೇಳಲು ಭಯವೇ ಕಂದ ಅನ್ನುತ್ತಾ ಮುದ್ದಾಡಿ ಮದುವೆಗೆ ಒಪ್ಪಿಗೆ ಕೊಟ್ಟರು. ರಾಜ್ ಕುಮಾರ್ ಎಂದರೆ ಮನೆಯಲ್ಲಿ ಎಲ್ಲರೂ ತುಂಬಾ ಭಕ್ತಿ . ಅವರ ಬಳಿ ಮಾತನಾಡಲು ಮುಜುಗರ ಪಡುತಿದ್ದರಂತೆ.

ಆದರೆ ಶಿವಣ್ಣ ಮಾತ್ರ ಸಲುಗೆಯಿಂದ ಮಾತನಾಡುತ್ತಿದ್ದರು. ರಾಜ್ ಕುಮಾರ್ ಶಿವಣ್ಣ ನವರಿಗೆ ಪುಟ್ಟಸ್ವಾಮಿ ಎಂದು ಹೆಸರಿಟ್ಟಿದ್ದರು. ಅಪ್ಪಾಜಿ ಎಂದು ಕರೆಯುತ್ತಿದ್ದರು. ದೊಡ್ಡ ಮನೆಯ ಪಾಲಿಗೆ ಈಗ ಇವೆಲ್ಲ ಸುಂದರ ನೆನಪುಗಳು ಮಾತ್ರ. ನೋವಿನಲ್ಲಿ ಇರುವ ಅವರಿಗೆ ಕಷ್ಟವನ್ನು ಎದುರಿಸಲು ದೇವರು ಧೈರ್ಯ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.