ಪುನೀತ್ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಶೈನ್ ಶೆಟ್ಟಿ.!ಅಪ್ಪು ಮಾಡಿದ್ದ ನೆನೆಸಿ ಕಣ್ಣೀರಿಟ್ಟ ಶೈನ್..

Cinema Entertainment

ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ನಮ್ಮನ್ನೆಲ್ಲಾ ಅಗಲಿ ಹದಿನೈದು ದಿನಗಳು ಕಳೆದಿವೆ ಪುನೀತ್ ಅವರು ಸಾಕಷ್ಟು ಜನರಿಗೆ ತುಂಬಾನೇ ಬೇರೆ ಬೇರೆ ಪ್ರೀತಿಯಲ್ಲಿ ಸಾಕಷ್ಟು ಕಲಾವಿದರಿಗೆ ನೆರವಾಗಿದ್ದರು ಆದರೆ ಇದೀಗ ಅವರು ಇಲ್ಲವಾಗಿದ್ದಾರೆ ಅವರನ್ನ ನೆನಸಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಭಾವನಾತ್ಮಕವಾಗಿ ಒಂದು ಪೋಸ್ಟನ್ನು ಹಂಚಿಕೊಂಡಿದ್ದಾರೆ ಅಷ್ಟಕ್ಕೂ ಶೆಟ್ಟಿ ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತಾ ಈ ಕೆಳಗೆ ಓದಿ. ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ, ಆ ಸಿನಿಮಾದ ಚಿತ್ರಕತೆಯಲ್ಲಿ ಮೂರು ಭಾಗ, ಹಾಗೆಯೇ ಅಪ್ಪು ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರವಹಿಸಿದ್ದಾರೆ. ಮೊದಲು ನನ್ನ ಕಲಾ ಜೀವನ ಶುರುವಾದಾಗ ಪುನೀತ್ ಸರ್ ಅವರನ್ನು ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಆಗಿ ಎದುರು ನೋಡುತ್ತಿದ್ದೆ.

ಬೆಳ್ಳಿ ಪರದೆಯ ಮೇಲೆ ಅಪ್ಪು ಸರ್ ಮೂಡಿಸಿದ ಜಾದೂಗೆ ನಾನಂತು ಬೆರಗಾಗಿ ಹೋಗಿದ್ದೆ. ಅವರ ಜೊತೆ ನಟಿಸಲು ಅವಕಾಶ ದೊರೆತಾಗ ಹಾಗೂ ಹಲವಾರು ಬಾರಿ ಸ್ಟೇಜ್ ಗಳಲ್ಲಿ ಅವರಜೊತೆ ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆ ಶುರುವಾಗಿತ್ತು. ಅವರು ನನ್ನಲ್ಲಿರುವ ಪ್ರತಿಭೆ ಆಸೆಗಳನ್ನ ಹೊಗಳಿದ್ದಲದೆ ಅವರ ಅಮೂಲ್ಯವಾದ ಮಾರ್ಗದರ್ಶನವನ್ನ ನೀಡಿ, ನನ್ನ ಗುರಿ ಪ್ರೇರೇಪಣೆ ನೀಡಿದವರು. ನಾನು ಈಗ ಕನ್ನಡ ಸಿನಿಮಾ ರಂಗದಲ್ಲಿ ಬೆಳೆದಿರೋಕ್ಕೆ ಕಾರಣ ಪುನೀತ್ ರಾಜಕುಮಾರ್ ಸರ್ ಎಂದರೆ ತಪ್ಪಾಗೊದಿಲ್ಲ. ಈ ಸ್ನೇಹ ಭ್ರಾತೃತ್ವದ ರೂಪ ಪಡೆದುಕೊಳ್ಳಲು ಬಹಳಷ್ಟು ಸಮಯ ಬೇಕಾಗಿರಲಿಲ್ಲ,

ಪುನೀತ್ ಸರ್ ಅವರನ್ನು ಅಷ್ಟು ಕೊಂಡಾಡಲು ಅವರ ಸುತ್ತಮುತ್ತ ಇದ್ದ ಜನರನ್ನು ವೃತ್ತಿಯಲ್ಲಿ ಅಲ್ಲ, ವೈಯಕ್ತಿಕ ಜೀವನದಲ್ಲಿ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ.. ನಾನು ಗಲ್ಲಿ ಕಿಚನ್ ಶುರು ಮಾಡಿದಾಗ ನನಗೆ ಬೆಂಬಲ ಕೊಟ್ಟಿದ್ದಲ್ಲದೆ, ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನು ವ್ಯಕ್ತಪಡಿಸಿದ್ದರು. ಬೆಳೀತಾ ಬೆಳೀತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ, ನನ್ನ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ನೀವು ಕಲಿಸಿದ ಪಾಠ ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳ್ಳುತ್ತಾ…ಹೋಗಿಬನ್ನಿ ಪುನೀತ್ ಸರ್’ ಎಂದು ಬರೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ….