ಪುಟ್ಟ ಕಂದನ ಜೊತೆ ಆಟವಾಡ್ತಿರೋ ಅಪ್ಪು ವಿಡಿಯೋ ಬಾರಿ ವೈರಲ್.!ಮಕ್ಕಳ ಜೊತೆ ಹೀಗಿರುತ್ತಿದ್ರು ನೋಡಿ..

Cinema

ಸ್ನೇಹಿತರೆ ಕನ್ನಡ ಸಿನಿಮಾರಂಗದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಗಲಿ ಎರಡು ವಾರಗಳು ಕಳೆದಿವೆ. ಪುನೀತ್ ಅವರ ಅಗಲಿಕೆ ಈಗಲೂ ಕೂಡ ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪ್ರತಿದಿನ ಒಂದು ಬಾರಿಯಾದರೂ ಪುನೀತ್ ಅವರ ನೆನಸಿ ಕಣ್ಣೀರು ಹಾಕುವಂತಾಗಿದೆ. ನಟ ಪುನೀತ್ ಅವರು ಇದ್ದಷ್ಟು ದಿನ ತುಂಬಾ ಸರಳತೆಯಿಂದ ಜೀವನ ಮಾಡಿದವರು. ಸಹಾಯ ಮಾಡಲು ಎಂದಿಗೂ ಸದಾ ಯಾವಾಗಲೂ ಮುಂದಾಗುತ್ತಿದ್ದವರು. ಕಷ್ಟ ಎಂದವರಿಗೆ ಮಾಧ್ಯಮದ ಎದುರು ಸಹಾಯ ನೀಡದೇ, ಇದನ್ನು ಆಫ್ ಮಾಡಿದ ಮೇಲೆ ಅದನ್ನು ಮಾಡೋಣ ಎನ್ನುವ ಗುಣವನ್ನು ಹೊಂದಿದ್ದವರು. ಅವರು ಮಾಡುವ ಸಹಾಯ, ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವಂತಹ ಮನಸ್ಥಿತಿ ಹೊಂದಿದವರು. ಹೌದು ಇದೀಗ ಪುನೀತ್ ಇಲ್ಲವಾದ ದಿನಗಳು ಬೇಗನೆ ಉರುಳುತ್ತಿವೆ.

ಆದರೂ ಯಾಕೋ ಜೀವನದಲ್ಲಿ ಇಂತಹ ಘಟನೆಗಳು ತುಂಬಾನೇ ನೋವು ನೀಡುತ್ತವೆ. ಪುನೀತ್ ಅವರ ಅಕಾಲಿಕ ಮರಣ ಸಾಕಷ್ಟು ಜನರ ಮನಸ್ಸನ್ನು ಕೆಡಿಸಿ ಬಿಟ್ಟಿದೆ. ದೇವರು ಕ್ರೂರತನ ಮೆರೆದುಬಿಟ್ಟ ಎಂದೆನಿಸುತ್ತೆ. ಪವರ್ ಸ್ಟಾರ್ ಪುನೀತ್ ಎಂದೇ ಪ್ರಖ್ಯಾತಿ ಹೊಂದಿ ಕೇವಲ ತೆರೆಯ ಮೇಲೆಯೇ ಮಾತ್ರವಲ್ಲದೆ ನಿಜಜೀವನದಲ್ಲಿ ಮುತ್ತಿನಂತೆ ಸಾಕಷ್ಟು ಜನರಿಗೆ ನೇರವಾಗಿ ದೇವರಾಗಿ ಇದ್ದವರು ಅಪ್ಪು. ಇದೀಗ ದೇವರ ಬಳಿಗೆ ಹೋಗಿರುವುದು ತುಂಬಾನೇ ಬೇಸರದ ಸಂಗತಿ. ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣದ ಪ್ರತಿದಿನ ಪುನೀತ್ ಅವರ ವಿಚಾರವಾಗಿ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತಿವೆ.

ಅಂತಹ ಅಪ್ಪು ಅವರ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಹೆಚ್ಚು ವೈರಲ್ ಆಗುತ್ತಿದೆ. ಹೌದು ಅಪ್ಪು ಅವರಿಗೆ ಚಿಕ್ಕ ಮಕ್ಕಳು, ಕಂದಮ್ಮಗಳು ಎಂದರೆ ತುಂಬಾ ಇಷ್ಟ. ಅವರ ಜೊತೆ ಸಮಯ ಕಳೆಯುವುದು, ಅವರ ಜೊತೆ ಆಟ ಆಡುವುದು ಎಂದರೆ ನಟ ಪುನೀತ್ ಅವರಿಗೆ ಎಲ್ಲಿಲ್ಲದ ಸಂತಸ ಆಗುತ್ತಿತ್ತಂತೆ. ಇದೀಗ ಸಣ್ಣ ಮಗುವಿನ ಜೊತೆ ಪುನೀತ್ ರಾಜ್ ಕುಮಾರ್ ಆಟವಾಡುತ್ತಿರುವ ಬಂದು ವಿಡಿಯೋ ತುಂಬಾನೇ ಮುದ್ದಾಗಿ ಕಾಣಿಸಿದೆ.

ಅಪ್ಪು ಮಗುವಿನ ಜೊತೆ ಆಟ ಆಡುತ್ತಿರುವ ವಿಡಿಯೋ ನೋಡುಗರ ಕಣ್ಣು ಒದ್ದೆಯಾಗುವಂತೆ ಮಾಡುತ್ತಿದೆ. ಹೌದು ಒಂದು ಬಾರಿ ಮಗುವಿನ ಜೊತೆ ಕಾಲಕಳೆದ ಅಪ್ಪು ಅವರ ಈ ಮುದ್ದು ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು..