ಅಪ್ಪು ಹಾಗೂ ಅಶ್ವಿನಿ ಅವರ ನಡುವೆ ಎಷ್ಟು ವಯಸ್ಸಿನ ಅಂತರ ಇತ್ತು ಗೊತ್ತೇ.?ದೇವರಿಗೆ ಕರುಣೆನೆ ಇಲ್ಲ ಬಿಡಿ..

Cinema

ಸ್ನೇಹಿತರೆ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕ ಮರಣದಿಂದ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿರಲಿಲ್ಲ. ತುಂಬಾ ಸರಳತೆ, ಅವರ ತಂದೆಯ ರೀತಿ ಜೀವನದಲ್ಲಿ ಆದರ್ಶ ವ್ಯಕ್ತಿಯಾಗಿ ಹೇಗಿರಬೇಕು, ಹೇಗೆ ಎಲ್ಲರನ್ನೂ ಮಾತನಾಡಿಸಬೇಕು, ಯಾವೆಲ್ಲ ಮೌಲ್ಯದ ಗುಣಗಳನ್ನು ಹೊಂದಿರಬೇಕು ಎಂದು ಸಣ್ಣ ವಯಸ್ಸಿನಲ್ಲಿ ಎಲ್ಲ ಮೈಗೂಡಿಸಿಕೊಂಡು ಬಂದಿದ್ದರು. ಪುನೀತ್ ರಾಜಕುಮಾರ್ ಅವರ ಈ ಅಕಾಲಿಕ ಮರಣ ಈಗಲೂ ಕೂಡ ಯಾರು ನಿಜಕ್ಕೂ ನಂಬುವಂತೆ ಆಗುತ್ತಿಲ್ಲ. ಪುನೀತ್ ಅವರು ಇಷ್ಟು ಬೇಗ ಹೋಗುತ್ತಾರೆ ಎಂದರೆ ಜೀವನಕ್ಕೆ ಅರ್ಥವೇ ಇಲ್ಲ ಎನಿಸುತ್ತದೆ. ಒಳ್ಳೆಯ ಒಬ್ಬ ವ್ಯಕ್ತಿ, ಜೀವನದಲ್ಲಿ ಹೆಚ್ಚು ಜನರಿಗೆ ಕೆಲಸ ಮಾಡಿ, ಈ ರೀತಿ ಪ್ರೀತಿ ಅಭಿಮಾನಿ ಬಳಗ ಗಳಿಸಿ, ಸಮಾಜಮುಖಿ ಕೆಲಸ ಮಾಡಿ, ಸದಾ ಇನ್ನೊಬ್ಬರಿಗೆ ಸಹಾಯ ಮಾಡಿ ಇದ್ದಕ್ಕಿದ್ದಂತೆ ಈ ರೀತಿ ಕಣ್ಮರೆಯಾಗುತ್ತಾರೆ ಎಂದರೆ ಯಾರಿಗೆ ತಾನೇ ನೋವಾಗುವುದಿಲ್ಲ ಹೇಳಿ.

ಹೌದು ನಟ ಪುನೀತ್ ಅವರು ಅದೆಷ್ಟೊ ಅನಾಥರಿಗೆ ತಂದೆಯಾಗಿ, ವಿದ್ಯೆ ನೀಡುವ ಗುರುಗಳಾಗಿ, ಹೆಣ್ಣುಮಕ್ಕಳ ಪಾಲಿನ ಅಣ್ಣನಾಗಿ ಎಲ್ಲರಿಗೂ ಬೆಳಕಾಗಿದ್ದ ಈ ಬೆಟ್ಟದ ಹೂವು ದೇವರ ಪಾದ ಸೇರಿ ಬಿಟ್ಟಿತು. ದೇವರು ಈ ರೀತಿ ನಿರ್ಧಾರ ಮಾಡಿದ್ದು ತುಂಬಾ ದೊಡ್ಡ ತಪ್ಪು. ಸದಾ ಇನ್ನೊಬ್ಬರಿಗೆ ಒಳಿತು ಬಯಸುತ್ತಿದ್ದ ಅಪ್ಪು ಅವರ ಸಾಕಷ್ಟು ಸಮಾಜಮುಖೀ ಕಾರ್ಯ, ಒಳ್ಳೆಯ ಕೆಲಸಗಳು ಆ ದೇವರ ಕಣ್ಣಿಗೆ ಕಾಣಲಿಲ್ಲವೇ. ಅವರನ್ನು ಯಾಕೆ ಇಷ್ಟು ಬೇಗ ಮೇಲಕ್ಕೆ ಕರೆದುಕೊಂಡ ಎಂದು ದೇವರಿಗೆ ಹಿಡಿ ಶಾ’ಪ ಹಾಕಬೇಕು ಅಷ್ಟೇ, ಆದ್ರೆ ವಾಸ್ತವ ಕಹಿ ಸತ್ಯ ಆದ್ರೂ ಅಪ್ಪು ಅವರು ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅವರ ನಗು ಮುಖ, ಅವರ ಕೆಲಸ ಮಾತ್ರ ನೆನಪಿನಲ್ಲಿರುತ್ತದೆ. ದೇವರನ್ನ ಶ’ಪಿಸುವುದು ಬಿಟ್ಟು ಬೇರೆ ಏನು ತೋಚುತ್ತಿಲ್ಲ. ಈಗಲೂ ಕೂಡ ಅಪ್ಪು ಇಲ್ಲವಲ್ಲ ಎಂದು ನೆನೆಸಿಕೊಂಡರೆ ತುಂಬಾ ದುಃಖ ಆಗುತ್ತದೆ. ಇನ್ನೂ ಪುನೀತ್ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ಪುನೀತ್ ಅವರು ಅಶ್ವಿನಿ ಅವರನ್ನು ಪ್ರೀತಿ ಮಾಡುತ್ತಿದ್ದ ವಿಷಯವನ್ನು ಅವರ ಮನೆಯಲ್ಲಿ ಹೇಳಲು ಮೊದಲಿಗೆ ತುಂಬಾ ಭಯಪಟ್ಟಿದ್ದರಂತೆ.

ನಂತರ ಹೇಗೋ ಮನೆಯಲ್ಲಿ ತಾವು ಪ್ರೀತಿ ಮಾಡುತ್ತಿದ್ದ ಅಶ್ವಿನಿ ಅವರ ಬಗ್ಗೆ ಹೇಳಿಬಿಟ್ಟಿದ್ದಾರೆ. ಆಗ ರಾಜಕುಮಾರ್ ಅವರು ನಿಮ್ಮ ತಾಯಿ ಬಳಿ ಕೇಳು ಎಂದಿದ್ದರಂತೆ. ಆಗ ಅಪ್ಪು ಅವರ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರು ಕೂಡ ಇವರಿಬ್ಬರ ಮದುವೆಗೆ ಒಪ್ಪಿಗೆ ನೀಡಿ ಮದುವೆ ಮಾಡಿದ್ದರು ಎನ್ನಲಾಗಿದೆ. ಹೌದು ಅಶ್ವಿನಿ ಹಾಗೂ ಪುನೀತ್ ಅವರ ವಯಸ್ಸಿನ ವಿಚಾರಕ್ಕೆ ಬರುವುದಾದರೆ. ನಟ ಪುನೀತ್ ಅವರಿಗೆ 46 ವರ್ಷ ವಯಸ್ಸಾಗಿತ್ತು. ಇವರ ಪತ್ನಿ ಅಶ್ವಿನಿ ಅವರಿಗೆ 44 ವರ್ಷ ಆಗಿದೆ. ಇವರಿಬ್ಬರ ನಡುವೆ ಎರಡು ವರ್ಷ ಮಾತ್ರ ವಯಸ್ಸಿನ ಅಂತರ ಇದೆ. ಆದ್ರೆ ದೇವರು ಇಷ್ಟು ಬೇಗನೆ ಇವರಿಬ್ಬರನ್ನು ಬೇರೆಬೇರೆ ಮಾಡಿದ್ದು ನೋಡಿದರೆ ನಿಜಕ್ಕೂ ದೇವರೇ ಇಲ್ಲ ಎಂದೆನಿಸುತ್ತದೆ. ಈ ಮಾಹಿತ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇ ಈ ಮಾಹಿತಿನ ಶೇರ್ ಮಾಡಿ ಧನ್ಯವಾದಗಳು…