ಡ್ರೈವರ್ ನ ಪಕ್ಕಕ್ಕೆ ಕಳಿಸಿ ಪುನೀತ್ 10ಲಕ್ಷ ಕೊಟ್ರು.!ಅಪ್ಪು ಅಗಲಿದ ದಿನವೇ ಅವರು ಹೋಗ್ಬಿಟ್ರು.?2ತಿಂಗಳಾದ್ಮೇಲೆ ಬಹಿರಂಗ.!

ಸುದ್ದಿ

ಸ್ನೇಹಿತರೇ, ಕನ್ನಡಿಗರು ಎಂದೆಂದಿಗೂ ಮರೆಯಲಾರದ ಕರುನಾಡಿನ ಮಾಣಿಕ್ಯ ಅಪ್ಪು ಅವರನ್ನ ಕಳೆದುಕೊಂಡು ಎರಡು ತಿಂಗಳಿಗಿಂತ ಹೆಚ್ಚಾಗಿದೆ. ಆದರೆ ಪುನೀತ್ ರಾಜ್ ಕುಮಾರ್ ಅವರು ಬರೆಯವರಿಗೆ ಗೊತ್ತಿಲ್ಲದಂತೆ ಮಾಡಿರುವ ದಾನ ಧರ್ಮ, ಸಾಮಾಜಿಕ ಸೇವೆಗಳು, ಅವರು ಇಲ್ಲವಾದ ಈ ದಿನಗಳಲ್ಲಿ ಒಂದೊಂದೇ ಬೆಳಕಿಗೆ ಬರುತ್ತಿವೆ.

ಇನ್ನು ಅಪ್ಪು ಅವರ ನೆನಪು ಜನರ ಮನಸಿನಲ್ಲಿ ಬಲವಾಗಿ ಬೇರೂರಿದೆ ಎನ್ನುವುದಕ್ಕೆ ಇಂದಿಗೂ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ದರ್ಶನಾರ್ಥವಾಗಿ ಬರುತ್ತಿರುವ ಸಾವಿರಾರು ಜನರೇ ಒಂದು ದೊಡ್ಡ ನಿದರ್ಶನ. ಅಪ್ಪು ಮಾಡಿರುವ ದಾನ ಧರ್ಮಗಳು ತುಂಬಾ ಇವೆ. ಅದರಲ್ಲಿ ಕೆಲವೊಂದು ಮಾತ್ರ ಈಗೀಗ ಬೆಳಕಿಗೆ ಬರುತ್ತಿವೆ. ಅದರಲ್ಲಿ ಒಂದು ಅಪ್ಪು ಅವರು ದೇವಸ್ಥಾನವೊಂದರಲ್ಲಿ ಸಿಕ್ಕ ಅಭಿಮಾನಿ ತನ್ನ ಕಷ್ಟ ಹೇಳಿಕೊಂಡಾಗ ತನ್ನ ಡ್ರೈವರ್ ನನ್ನ ಪಕ್ಕಕ್ಕೆ ಕಳಿಸಿ ಮಾಡಿದ ಸಹಾಯ..ಅಪ್ಪು ಅವರು ಮಾಡುತ್ತಿದ್ದ ದಾನ ಧರ್ಮಗಳು ತಮ್ಮ ಬಲಗೈನಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ ಎಂಬುದಕ್ಕೆ ನಾವು ಹೇಳಲು ಹೊರಟಿರುವ ಈ ಸ್ಟೋರಿಯೇ ದೊಡ್ಡ ನಿದರ್ಶನ..

ಹೌದು, ದೇವಸ್ಥಾನವೊಂದಕ್ಕೆ ಪುನೀತ್ ರಾಜ್ ಕುಮಾರ್ ಅವರು ಹೋಗಿದ್ದಾಗ ಅಲ್ಲಿ ಮಹಿಳಾ ಅಭಿಮಾನಿಯೊಬ್ಬರು ಸಿಗುತ್ತಾರೆ. ಇನ್ನು ಆ ಅಭಿಮಾನಿ ತನ್ನ ಕಷ್ಟಗಳನ್ನ ಅಪ್ಪು ಅವರ ಮುಂದೆ ಹೇಳಿಕೊಳ್ಳುತ್ತಾರೆ. ಆಗ ಅಪ್ಪು ಒಂದು ಬಾಟಲ್ ನೀರು ಮತ್ತು ಜ್ಯೂಸ್ ತೆಗೆದುಕೊಂಡು ಬಂದು ಮತ್ತೆ ವಾರ ಬಳಿ ಏನಾಗಿದೆ ಎಂದು ಕೇಳುತ್ತಾರೆ. ಆಗ ಆ ಮಹಿಳಾ ಅಭಿಮಾನಿ ತನಗಿರುವ ಕಷ್ಟಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಆಗ ಅಪ್ಪು ಅವರು ತಮ್ಮ ಡ್ರೈವರ್ ರನ್ನ ಪಕ್ಕಕ್ಕೆ ಕಳಿಸಿ ಬರೋಬ್ಬರಿ ಹತ್ತು ಲಕ್ಷ ಹಣ ಕೊಟ್ಟ ಬಿಟ್ಟು ನೀವು ಈ ವಿಷಯವನ್ನ ಯಾರಿಗೂ ಹೇಳಬಾರದು ಎಂದು ದೇವಸ್ಥಾನದಲ್ಲೇ ಪ್ರಮಾಣ ಮಾಡಿಸಿಕೊಂಡಿರುತ್ತಾರೆ ಅಪ್ಪು..

ನೀವೆಷ್ಟು ಸಂಪಾದನೆ ಮಾಡುತ್ತೀರಾ, ಎಲ್ಲವನ್ನು ತಿನ್ನಿ..ನೀವು ತೀರಿಕೊಂಡಾಗ ನಾನು ಎತ್ತಿ ಹಾಕ್ತೀನಿ..ನಾನು ನಿಮ್ಮ ಮಗ ಅಂತ ತಿಳ್ಕೊಳ್ಳಿ ಅಂತ ಹೇಳಿ ಅಪ್ಪು ಅವರು ಹತ್ತು ಲಕ್ಷ ಹಣ ಕೊಟ್ಟಿದ್ದಾರೆ. ಇನ್ನು ಆ ಮಹಿಳಾ ಅಭಿಮಾನಿ ಹಣ ಬೇಡ ಎಂದು ವಾಪಾಸ್ ಕೊಡಲು ಹೋದಾಗ ಅಪ್ಪು ಅವರು ಬೇಡ ಎಂದಿದ್ದಾರೆ. ದುರದೃಷ್ಟಕರ ಏನೆಂದರೆ ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಹೋದ ದಿನವೇ ಈ ಮಹಿಳಾ ಅಭಿಮಾನಿ ಕೂಡ, ಅಪ್ಪು ಅವರ ಅಗಳಿಕೆಯ ನೋವನ್ನ ತಡೆಯಲಾರದೆ,

ಅಂತಿಮ ದರ್ಶನ ಮಾಡಿಕೊಂಡು ಬಂದು ಸು’ಸೈ’ಡ್ ಮಾಡಿಕೊಂಡಿದ್ದಾರೆ ಎಂದು ಆ ಮಹಿಳಾ ಅಭಿಮಾನಿಯ ಸ್ನೇಹಿತೆಯಾಗಿರುವ ಅನಿತಾ ಎನ್ನುವವರು ಹೇಳಿದ್ದಾರೆ. ಇನ್ನು ಈ ವಿಷಯ ಇಲ್ಲಿಯ್ವರೆಗೂ ವೈರಿಗೂ ತಿಳಿದಿರಲಿಲ್ಲ..ಈಗ ಅಭಿಮಾನಿಯ ಸ್ನೇಹಿತೆ, ಅನಿತಾ ಎಂಬುವವರ ಮೂಲಕ ಬೆಳಕಿಗೆ ಬಂದಿದೆ..ಅದಕ್ಕೆ ಹೇಳೋದು ಮನುಷ್ಯನಾಗಿ ಹುಟ್ಟಿದ ಅಪ್ಪು, ಅಗಲಿದ ಬಳಿಕ ದೇವತಾ ಮನುಷ್ಯರಾಗಿದ್ದಾರೆ ಅಂತ..ಅಪ್ಪು ನೀವು ಎಂದೆಂದಿಗೂ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಮರರಾಗಿಯೇ ಇರುತ್ತೀರಾ..