ನಿಜಕ್ಕೂ ಪುನೀತ ನಮನಕ್ಕೆ ಅಪರ್ಣಾ ಪಡೆದ ಹಣವೆಷ್ಟು ಗೊತ್ತಾ.?ಇನ್ನೆಂದು ನಿರೂಪಣೆ ಮಾಡ್ಬಾರ್ದು ಎಂದಿದ್ದೇಕೆ.!

Cinema

ಸ್ನೇಹಿತರೆ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಚಿರಪರಿಚಿತ ಇದೆ. ಅಪರ್ಣ ಅವರು ಅವರವರದ್ದೇ ಆದ ಶೈಲಿಯಲ್ಲಿ ನಿರರ್ಗಳವಾಗಿ ಕನ್ನಡ ಮಾತನಾಡುತ್ತಾರೆ. ಹಾಗೆ ವಿಶಿಷ್ಟ ರೀತಿಯಲ್ಲಿ ನಿರೂಪಣೆ ಮಾಡುತ್ತಾರೆ. ಕನ್ನಡದ ಖ್ಯಾತ ನಟ ಸಾಕಷ್ಟು ಜನರ ಜೊತೆ ನಂಟು ಇಟ್ಟುಕೊಂಡಿದ್ದ ನಟ ಹಾಗೂ ಸದಾ ಪ್ರೀತಿ ನೀಡುತ್ತಿದ್ದ ನಗುವಿನ ಒಡೆಯ, ಕಷ್ಟ ಎಂದವರಿಗೆ ಹಿಂದೆ ಮುಂದೆ ಯೋಚನೆ ಮಾಡದೆ ಸಹಾಯ ಮಾಡುವ ಮನಸ್ಥಿತಿ ಹೊಂದಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ದೈಹಿಕವಾಗಿ ನಮ್ಮ ಜೊತೆಗೆ ಇಲ್ಲವಾಗಿದ್ದಾರೆ. ಪುನೀತ್ ಅವರ ಅಕಾಲಿಕ ಮ’ರಣ ಯಾರಿಗೂ ಕೂಡ ಆ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

ಇಂದಿಗೂ ಕೂಡ ಪುನೀತ್ ಅವರು ನಮ್ಮ ಜೊತೆಗೆ ಇದ್ದಾರೆ ಎಂದು ಭಾಸವಾಗುತ್ತದೆ. ಹೌದು ಪುನೀತ್ ಅವರು ಅದೆಷ್ಟೋ ಸಮಾಜ ಕಾರ್ಯಗಳನ್ನು ಮಾಡಿ, ಹಾಗೆ ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಗಾದೆಯಂತೆ ಸಹಾಯಹಸ್ತ ನೀಡುತ್ತಿದ್ದರು. ಎಲ್ಲಿಯೂ ಅವರ ಸಹಾಯದ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ ಏನು ಮಾಡುವುದು, ಅಪ್ಪು ಅವರ ಜೀವನದಲ್ಲಿ ವಿಧಿ ಬೇರೆಯದೇ ರೀತಿ ಆಟ ಆಡಿತು. ಹೌದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ಅವರಿಗೆ ನಮನ ಸಲ್ಲಿಸಲು ಅಪ್ಪು ನಮನ ಎಂಬ ಕಾರ್ಯಕ್ರಮವ ಇತ್ತೀಚಿಗೆ ಹಮ್ಮಿಕೊಂಡಿತ್ತು.

ಇನ್ನು ಈ ಕಾರ್ಯಕ್ರಮಕ್ಕೆ ಸಾಕಷ್ಟು ರಾಜಕಾರಣಿಗಳಿಗೆ, ಹಾಗೂ ಕನ್ನಡ ಸಿನಿಮಾರಂಗದ ಖ್ಯಾತ ನಟ ನಟಿಯರಿಗೆ, ನಿರೂಪಕ ಹಾಗೂ ನಿರ್ದೇಶಕರಿಗೆ, ತೆಲುಗು-ತಮಿಳು ಇನ್ನು ಕೆಲ ಕಲಾವಿದರಿಗೆ ಅಪ್ಪು ನಮನಕ್ಕೆ ಆಹ್ವಾನ ಮಾಡಿದ್ದರು. ಹೌದು ಅಂದು ವೇದಿಕೆ ಮೇಲೆ ಎಲ್ಲರಿಗೂ ಅಪ್ಪು ಅವರ ಬಗ್ಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಮಾತನಾಡಿದ ಪ್ರತಿಯೊಬ್ಬರು ಕೂಡ ಅಪ್ಪು ಬಗ್ಗೆ ಮಾತನಾಡಿ ಕಣ್ಣೀರು ಸುರಿಸುತ್ತಲೇ ತುಂಬಾ ಭಾವನಾತ್ಮಕ ವಾತಾವರಣ ಸೃಷ್ಟಿ ಮಾಡಿದರು. ಹೌದು ಅಪ್ಪು ನಮನ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ನಿರೂಪಕಿ, ಎಲ್ಲರಿಗಿಂತ ಮೊದಲೇ ಹೆಸರು ಕೇಳಿಬರುವ ಅಪರ್ಣಾ ಅವರು ನಿರೂಪಣೆ ಮಾಡಿದರು. ಹೌದು ಇಂತಹ ಕಾರ್ಯಕ್ರಮಗಳಿಗೆ ಇನ್ನೆಂದು ನಿರೂಪಣೆಯ ಮಾಡಬಾರದು ಎಂದು ಕೂಡ ಹೇಳಿದರು.

ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದ ಅಪರ್ಣ ಅವರು, ಒಂದು ಕಾರ್ಯಕ್ರಮಕ್ಕೆ 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ. ಆದರೆ ಪುನೀತ್ ಅವರ ಅಪ್ಪು ನಮನ ಕಾರ್ಯಕ್ರಮಕ್ಕೆ ಕೇವಲ ಒಂದೇ ಒಂದು ರೂಪಾಯಿ ತೆಗೆದುಕೊಳ್ಳದೆ ನಿರೂಪಣೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಸರಳತನ ಎಂಬುದು ಎಲ್ಲರಲ್ಲಿಯೂ ಬರುವುದಿಲ್ಲ, ಆದ್ರೆ ಆ ಸರಳತೆಯೂ ಮೈಗೂಡಿಸಿಕೊಂಡಿರುವುದು ಹೆಚ್ಚು ಈ ಅಣ್ಣಾವ್ರ ಕುಟುಂಬಕ್ಕೆ ಎಂದು ಹೇಳಿದರು. ಹಾಗೆ ಪುನೀತ್ ಅವರ ಬಗ್ಗೆ ಮಾತನಾಡಿ ತುಂಬಾ ಭಾವುಕರಾದರು…