ಅಪ್ಪು ತಮ್ಮ ಮನೆಯ ವಾಚ್ ಮ್ಯಾನ್, ಗನ್ ಮ್ಯಾನ್ ರನ್ನೆಲ್ಲಾ ಅಣ್ಣಾ ಎಂದು ಏಕೆ ಕರೆಯುತ್ತಿದ್ದರು ಗೊತ್ತೇ?ಇದರ ಹಿಂದಿದೆ ಕಣ್ಣೀರಿನ ಕತೆ..

Cinema

ಕನ್ನಡಿಗರ ಮನೆ ಮಗ ಅಪ್ಪು ಇಹಲೋಕ ತುಜಿಸಿ ಇಷ್ಟು ದಿನ ಕಳೆದರೂ ಅವರ ಅಗಲಿಕೆಯ ನೋವು ಮಾತ್ರ ಒಂದಿಷ್ಟು ಕಡಿಮೆಯಾಗಿಲ್ಲ. ಪ್ರತಿಯೊಬ್ಬರೂ ಅವರದ್ದೇ ಗುಂಗಿನಲ್ಲಿ ಇದ್ದಾರೆ. ಅವರ ಸಾಧನೆ, ವ್ಯಕ್ತಿತ್ವ, ಮಾನವೀಯತೆಯ ಗುಣ ಗಾನ ಮುಂದುವರೆದಿದೆ. ಅವರ ಕುರಿತ ಮಹತ್ವದ ವಿಚಾರಗಳು ಈಗ ಒಂದೊಂದೇ ಹೊರಬರುತ್ತಿವೆ. ಪುನೀತ್ ರಾಜ್ ಕುಮಾರ್ ಎಂತಹ ಪಿತೃ ವಾಕ್ಯ ಪರಿಪಾಲಕ ಆಗಿದ್ದರು ಎಂಬುದನ್ನು ಅವರ ಆಪ್ತರೊಬ್ಬರು ಬಹಿರಂಗ ಪಡಿಸಿದ್ದಾರೆ. ಪುನೀತ್ ರಾಜ್ಕುಮಾರ್ ತಮ್ಮ ಮನೆಯ ವಾಚ್ ಮ್ಯಾನ್ ಮತ್ತು ಗನ್ ಮ್ಯಾನ್ ಮೊದಲಾದವರನ್ನು ಅಣ್ಣಾ ಎಂದು ಕರೆಯುತ್ತಿದ್ದರು ಎಂದು ಇತ್ತೀಚಿಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತಿತ್ತು.

ಈ ಕುರಿತು ಬಾರಿಗೆ ಪ್ರಶಂಸೆಯ ಮಾತುಗಳು ಕೇಳಿ ಬಂದವು ಆದರೆ ಅವರು ಹಾಗೆ ಏಕೆ ಕರೆಯುತಿದ್ದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಅವರು ಏಕೆ ಹಾಗೆ ಕರೆಯುತ್ತಿದ್ದರು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಅವರ ಆಪ್ತ ರೊಬ್ಬರು ಪುನೀತ್ ಪುಣ್ಯ ಸ್ಮರಣೆಯ ಕಾರ್ಯದ ಸಂಧರ್ಭದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು, ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ. ಪ್ರೀತಿಯ ಪುತ್ರ. ಅದರಲ್ಲೂ ಪಾರ್ವತಮ್ಮ ನವರಿಗೆ ಪುನೀತ್ ಎಂದರೆ ತುಂಬಾ ಅಚ್ಚು ಮೆಚ್ಚು. ಅವರು ಅಪ್ಪು ಅವರನ್ನು ತುಂಬಾ ಪ್ರೀತಿ ಸಲುಗೆಯಿಂದ ಬೆಳೆಸಿದ್ದರು. ಹೀಗೆ ಬಾಲಕ ಅಪ್ಪು ವಿಗೆ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಸ್ವಾತಂತ್ರ್ಯ, ಸಲುಗೆ ಇತ್ತು. ಹೀಗಿರುವಾಗ ಒಮ್ಮೆ ಅಪ್ಪು ಮನೆಯ ಕಾವಲುಗಾರನನ್ನು ಹೇ ವಾಚ್ ಮ್ಯಾನ್ ಎಂದು ಕೊಂಚ ಗರ್ವದಿಂದ ಸಂಭೋದಿಸಿದರು. ಇದನ್ನು ಕಂಡ ರಾಜ್ ಕುಮಾರ್ ಅವರಿಗೆ ತುಂಬಾ ಬೇಸರ ವಾಗಿತು.

ನೋಡಪ್ಪಾ ಅಪ್ಪೂ ಅವರನ್ನು ಏಕೆ “ವಾಚ್ ಮ್ಯಾನ್” ಎಂದು ಕರೆದೆ? ನೀನು ಅವರನ್ನು ನಮ್ಮ ಕುಟುಂಬದವರಂತೆ ಭಾವಿಸುವುದಿಲ್ಲವೇ? ಅವರನ್ನು ತಾತ ಅಥವಾ ಆಂಕಲ್ ಎಂದು ಕರೆಯಬಹುದಿತಲ್ಲ ಎಂದು ಭಾವುಕರಾದರು. ಇದನ್ನು ಕಂಡ ಪಾರ್ವತಮ್ಮ ರಾಜ್ ಕುಮಾರ್ ಕಣ್ಣನಲ್ಲೂ ನೀರು ಸುರಿಯಿತು. ಇದನ್ನು ನೋಡಿ ಬಾಲಕ ಪುನೀತ್ ರಾಜ್ ಕುಮಾರ್ ಮನಸು ಕರಗಿತು. ಆಗಲೇ ಅವರು ಅಪ್ಪಾಜಿಯವರ ಕಾಲಿಗೆ ಬಿದ್ದು ಅಪ್ಪಾಜಿ ತಪ್ಪಾಯಿತು ಕ್ಷಮಿಸಿ ಇನ್ನೂ ಮುಂದೆ ಹೀಗೆ ಯಾರನ್ನೂ ಕರೆಯುವುದಿಲ್ಲ ಎಂದು ಅಳತ್ತ ಕ್ಷಮೆ ಕೇಳಿದರಂತೆ. ಅಂದೇ ಕೊನೆ ಅಪ್ಪು ತಮ್ಮ ಮನೆಯಲ್ಲಿ ಕೆಲಸ ಮಾಡುವ ಯಾರೊಂದಿಗೂ ಗರ್ವದಿಂದ ನಡೆದುಕೊಳ್ಳಲಿಲ್ಲ.

ಅಪ್ಪು ಕೊನೆಯ ಕ್ಷಣದ ವರೆಗೂ ತಮ್ಮ ಮನೆಯ ವಾಚ್ ಮ್ಯಾನ್, ಗನ್ ಮ್ಯಾನ್ ಎಲ್ಲರನ್ನೂ ಅಣ್ಣಾ ಎಂದೇ ಕರೆಯುತ್ತಿದ್ದರು. ಅವರು ತಮ್ಮ ಕೊನೆಯ ಕ್ಷಣ ಮನೆಯಿಂದ ಆಸ್ಪತ್ರೆಗೆ ಹೊರಡುವಾಗಲೂ ವಾಚ್ ಮ್ಯಾನ್ ಮತ್ತು ಗನ್ ಮ್ಯಾನ್ ಗೆ ಅಣ್ಣಾ ಇಲ್ಲೇ ಇರಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಪುನೀತ್ ರಾಜ್ ಕುಮಾರ್ ಅಣ್ಣಾವ್ರು ಹೇಳಿಕೊಟ್ಟ ಪ್ರತಿಯೊಂದು ವಿಷಯವನ್ನೂ ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದರು. ಅಪ್ಪಾಜಿ ಆಡಿದ ಯಾವ ಮಾತನ್ನೂ ಅವರು ಮರೆತಿರಲಿಲ್ಲ. ಅಪ್ಪಾಜಿಯ ಆದರ್ಶದಂತೆ ಅವರು ಹಾಕಿಕೊಟ್ಟ ದಾರಿಯಲ್ಲೇ ಹೆಜ್ಜೆ ಇಟ್ಟರು. ನಿಜಕ್ಕೂ ಅಪ್ಪು ಪಿತೃವಾಕ್ಯ ಪರಿಪಾಲಕ. ತಂದೆಗೆ ತಕ್ಕ ಮಗ.