ಕೃಷ್ಣ ರಾಧೆಯನ್ನು ಈ ಒಂದು ಕಾರಣಕ್ಕೆ ಮದುವೆಯಾಗಲಿಲ್ಲ !

Adhyatma
Advertisements

ರಾಮ ಸೀತಾ, ಶಿವ ಪಾರ್ವತಿ ಹೀಗೆ ದೇವರು ಪ್ರತೀ ಅವತಾರದಲ್ಲೂ ತಮ್ಮ ತಮ್ಮ ಸತಿಯರನ್ನೆ ಮತ್ತೆ ಸಂಗಾತಿಯಾಗಿ ಕೈ ಹಿಡಿಯುತ್ತಾರೆ. ಆದರೆ ಕೃಷ್ಣನ ಅವತಾರದಲ್ಲಿ ಮಾತ್ರ ಸ್ವಯಂ ಆದಿ ಲಕ್ಷ್ಮಿಯೇ ರಾಧೆಯಾಗಿ ಜನಿಸಿದರೂ ಕೃಷ್ಣಾವಾತಾರಿ ನಾರಾಯಣ ಆಕೆಯನ್ನು ವರಿಸುವುದಿಲ್ಲ. ಆದರೆ ಎಕೆ?

Advertisements

ರುಕ್ಮಿಣಿ ಪತ್ರ ಬರೆದ ಮಾತ್ರಕ್ಕೆ ಯುದ್ಧವನ್ನೇ ಮಾಡಿ ಆಕೆಯನ್ನು ವಿವಾಹವಾದ ಕೃಷ್ಣನಿಗೆ, ಸಾವಿರ ಸಾವಿರ ಕನ್ಯೆಯರನ್ನು ಮದುವೆಯಾದ ಕೃಷ್ಣನಿಗೆ ತನ್ನನು ಅಷ್ಟು ಪ್ರೀತಿಸುವ, ತಾನು ಅಷ್ಟು ಪ್ರೀತಿಸುವ ರಾಧೆಯನ್ನು ಮದುವೆಯಾಗುವುದು ಅಷ್ಟು ಕಷ್ಟವಾಗಿತ್ತೇ?.. ಇಲ್ಲ ಕೃಷ್ಣನಿಗೆ ಅದು ನೀರು ಕುಡಿಯುವಷ್ಟೇ ಸುಲಭದ ಕೆಲಸ ವಾಗಿತ್ತು. ಆದರೂ ಅದು ನಡೆಯಲಿಲ್ಲ ಕಾರಣ ಇಲ್ಲಿದೆ.

ರಾಧಾ ಕೃಷ್ಣ ಅವತಾರದ ಉದ್ದೇಶ ಪ್ರೀತಿಯ ನಿಜ ಅರ್ಥವನ್ನು ಜಗತ್ತಿಗೆ ತೋರುವವರು. ಪ್ರೀತಿ ಎಂದರೆ ಕೇವಲ ಮದುವೆಯಾಗಿ ಒಬ್ಬರಿಗೊಬ್ಬರು ಆಧಾರವಾಗಿ ಬದುಕುವುದು ಮಾತ್ರವಲ್ಲ. ಪ್ರೀತಿ ಎಂದರೆ ನಿಸ್ವಾರ್ಥದಿಂದ ‌ತುಂಬಿದ ಮನಸ್ಸಿನ ಆಳವಾದ ಒಂದು ನಿಷ್ಕ್ಮಲಶ ಭಾವನೆ. ಪ್ರೀತಿಸಿದ ಆ ಒಬ್ಬರು ನಮ್ಮಿಂದ ಎಷ್ಟೇ ದೂರ ಇದ್ದರೂ ಕಡೆ ತನಕ ಅವರಿಗೆ ಒಳಿತು ಬಯಸುವುದು. ಅವರನ್ನು ಕಡೆ ತನಕ ಮನಸಿನಲ್ಲಿ ಆರಾಧಿಸುವುದು. ಅದೇ ನಿಜವಾದ ಪ್ರೀತಿ. ಅದೇ ರಾಧಾ ಕೃಷ್ಣರ ಪ್ರೀತಿ. ಅದಕ್ಕೆ ಕೃಷ್ಣ ಹೆಸರಿನ ಮೊದಲು ಎಂದಿಗೂ ರಾಧೆಯ ಹೆಸರು ಬರುತ್ತದೆ ವಿನಃ ಬೇರಾರ ಹೆಸರೂ ಅಲ್ಲ.

ಅಷ್ಟೇ ಅಲ್ಲ ರಾಧೆ ತ್ಯಾಗದ ಸಂಕೇತ. ಎಷ್ಟೋ ಜನರ ಉದ್ಧಾರಕ್ಕಾಗಿ, ಜಗದ ಕಲ್ಯಾಣಕ್ಕಾಗಿ ಪ್ರೀತಿಯನ್ನೇ ತ್ಯಾಗ ಮಾಡಿ ಸ್ವತಃ ಭಗವಂತನೇ ನೋವು ಅನುಭವಿಸುತ್ತಾನೆ. ಮತ್ತು ಕೊರಗದೆ ನಗುತ್ತಾ ತನ್ನ ಕರ್ತವ್ಯಗಳನ್ನು ಮಾಡುತ್ತಾ ಜೀವನದಲ್ಲಿ ಮುಂದೆ ಸಾಗುತ್ತಾನೆ. ಇದು ಮಾನವನು ಕಲಿಯಬೇಕಾದ ಒಂದು ಪಾಠ ಮತ್ತು ಮನುಜನ ಜೀವನಕ್ಕೆ ಒಂದು ದೊಡ್ಡ ಸಂದೇಶ, ಮಾದರಿ. ರಾಧೆಯನ್ನು ವಿವಾಹವಾಗಿದ್ದರೆ ಆದು ಕೇವಲ ಎಲ್ಲಾ ಪ್ರೀತಿ ವಿವಾಹದಂದೆ ಇರುತಿತ್ತು. ಆದರೆ ರಾಧಾ ಕೃಷ್ಣರ ಪ್ರೀತಿ ಜಗತ್ತಿನಲ್ಲೇ ಅತ್ಯಂತ ಪವಿತ್ರವಾದದ್ದು ಮತ್ತು ಸತ್ಯವಾದದ್ದು. ಮತ್ತು ಪ್ರೀತಿಯ ನಿಜ ಅರ್ಥ ಏನು ಎಂಬುದನ್ನು ಜಗತ್ತಿಗೆ ತಿಳಿಸಿ ಕೊಟ್ಟಿದ್ದು.

ರಾಧೆ ಮತ್ತು ಕೃಷ್ಣರ ಪ್ರೀತಿ ಅಮರ. ಅದು ಜಗತ್ತು, ಜೀವನ ಎಲ್ಲವನ್ನೂ ಮೀರಿದ್ದು. ಎಷ್ಟೋ ಜನ ದ್ವಾಪರ ಯುಗದಿಂದ ಕಲಿಯುಗದವರೆಗೂ ರಾಧೆಯ ಹೆಸರನ್ನು ಕೃಷ್ಣನಿಂದ ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಕಾರಣ ಅದು ಅವರಿಗೆ ಅಪವಿತ್ರ ಎನಿಸಿದೆ. ತಮ್ಮ ಭಗವಂತನನ್ನು ಯಾವುದೋ ಒಂದು ಸ್ತ್ರೀ ಯೊಂದಿಗೆ ಪೂಜಿಸುವುದು ಅವರಿಗೆ ಇಷ್ಟವಿಲ್ಲ. ರಾಧೆಯನ್ನು ಅವರು ಮಾತೇ ಲಕ್ಷ್ಮಿಯ ಅವತಾರ ಎಂದು ನಂಬುವುದಿಲ್ಲ. ಅವರ ದೃಷ್ಟಿಯಲ್ಲಿ ಅವಳು ಕೇವಲ ಒಬ್ಬಳು ಕೆಳ ಜಾತಿಯ ಸ್ತ್ರೀ. ಆದರೆ ಅವರ ಪ್ರಯತ್ನ ಎಂದೂ ಫಲಿಸಿಲ್ಲ. ಎಂದಿಗೂ ಫಲಿಸುವುದೂ ಇಲ್ಲ. ರಾಧೆಯನ್ನು ಕೃಷ್ಣನ ಜೊತೆ ಎಂದಿಗೂ ಪೂಜಿಸಲಾಗುತ್ತದೆ. ಕೃಷ್ಣನಿಗಿಂತ ಹೆಚ್ಚು ರಾಧೆಯನ್ನು ಪೂಜನೀಯ, ಪವಿತ್ರವಾಗಿ ನೋಡಲಾಗುತ್ತದೆ. ಆದ್ದರಿಂದಲೇ ಕೃಷ್ಣ ನ ಹೆಸರಿಗೂ ಮೊದಲು ರಾಧೆಯ ಹೆಸರನ್ನು ಸೇರಿಸಿ ರಾಧಾಕೃಷ್ಣ ಎಂದು ಕರೆಯಲಾಗುತ್ತದೆ.